Thalaivar 170 Title Teaser : 'ಜೈಲರ್' ಚಿತ್ರದ ಬ್ಲಾಕ್‌ಬಸ್ಟರ್ ಹಿಟ್‌ ನಂತರ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೆ ಕಮ್‌ಬ್ಯಾಕ್‌ ಮಾಡಲಿದ್ದಾರೆ. ತಲೈವಾ 170ನೇ ಚಿತ್ರದ ಹೆಸರು ಘೋಷಣೆ ಮಾಡಲಾಗಿದೆ. 'ಜೈಭೀಮ್' ಚಿತ್ರದ ನಿರ್ದೇಶಕ ಟಿ.ಜೆ. ಜ್ಞಾನವೇಲ್‌ 'ತಲೈವರ್ 170'ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ರಜನಿಕಾಂತ್‌ 170ನೇ ಚಿತ್ರಕ್ಕೆ ʼವೆಟ್ಟಯನ್‌ʼ ಎಂಬ ಟೈಟಲ್‌ ಫಿಕ್ಸ್‌ ಆಗಿದೆ. ದಕ್ಷಿಣದಿಂದ ಉತ್ತರದವರೆಗೆ ಅನೇಕ ಸ್ಟಾರ್ ಹೀರೋಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ರಾಣಾ ದಗ್ಗುಬಾಟಿ, ಫಹಾದ್ ಫಾಜಿಲ್, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 


ಇದನ್ನೂ ಓದಿ:'ಭಾಗ್ಯಲಕ್ಷ್ಮೀ' ಧಾರಾವಾಹಿಯ ಸುಷ್ಮಾ ರಾವ್‌ ಅವರ ಪತಿ ಇವರೇ.. ಕನ್ನಡದ ಖ್ಯಾತ ನಿರ್ದೇಶಕ ಇವರು!


ಅಲ್ಲದೆ, ಬಾಲಿವುಡ್‌ನ ಖ್ಯಾತ ನಟ ಅಮಿತಾ ಬಚ್ಚನ್ ಕೂಡ ವೆಟ್ಟಯನ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನೂ ಹಲವು ಟಾಪ್ ಸ್ಟಾರ್‌ಗಳು ಈ ಸಿನಿಮಾದಲ್ಲಿ ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಇಂದು ತಲೈವಾ ಹುಟ್ಟು ಹಬ್ಬದ ನಿಮಿತ್ತ ಚಿತ್ರತಂಡ ಟೈಟಲ್‌ ರಿವೀಲ್‌ ಮಾಡಿದ್ದು, ರಜನಿ ಫ್ಯಾನ್ಸ್‌ಗೆ ಖುಷಿ ನೀಡಿದೆ.


ಶೂಟಿಂಗ್ ಸೆಟ್’ಗೆ ಬಂದು ಮದುವೆ ಆಗುವಂತೆ ಹಠ ಮಾಡಿದ ಖ್ಯಾತ ಸೀರಿಯಲ್ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!


ನಿರ್ದೇಶಕ ಜ್ಞಾನವೇಲ್ ಈ ಹಿಂದೆ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಅವರು ಚೆನ್ನೈನಲ್ಲಿ ವರದಿ ಮಾಡುತ್ತಿದ್ದಾಗ ಪೊಲೀಸರು ನಕಲಿ ಎನ್‌ಕೌಂಟರ್ ಮಾಡಿದ್ದರು. ಅಂದು ಸಂಚಲನ ಮೂಡಿಸಿದ್ದ ಘಟನೆಯನ್ನು ಜ್ಞಾನವೇಲ್ ಸೂಕ್ಷ್ಮವಾಗಿ ಗಮನಿಸಿದ್ದರಂತೆ. ಇದೀಗ ಅದನ್ನೇ ಕಥಾವಸ್ತುವನ್ನಾಗಿರಿಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.


ರಜನಿಕಾಂತ್ ಮತ್ತು ಜ್ಞಾನವೇಲ್ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರ 2024 ರಲ್ಲಿ ತೆರೆಗೆ ಬರಲಿದೆ. 'ಜೈಲರ್' ಚಿತ್ರದ ಮೂಲಕ ರಜನಿಕಾಂತ್ ಮತ್ತು 'ಜೈಭೀಮ್' ಚಿತ್ರದ ಮೂಲಕ ಜ್ಞಾನವೇಲ್ ಉತ್ತಮ ಯಶಸ್ಸನ್ನು ಪಡೆದರು. ಇದೀಗ ವೆಟ್ಟಯನ್‌ ಚಿತ್ರದ ಮೂಲಕ ಒಟ್ಟಾಗಿರುವುದು ಇಂಡಸ್ಟ್ರಿ ಹಾಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.