ರಜನಿಕಾಂತ್ ನಟಿ ಅಮಲಾ ಪೌಲ್ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದು ನಿಜವೇ!?
Rajinikanth warned to Amala Paul : ನಟಿ ಅಮಲಾ ಪೌಲ್ ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದಾರಾ? ಮನೆಗೆ ಹೋಗಿ ಧಮ್ಕಿ ಹಾಕಿದ್ದಾರಾ? ಈ ಮಾತುಗಳು ಬರಲು ಏನು ಕಾರಣ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
Rajinikanth News : ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಸೌಮ್ಯ ಸ್ವಭಾವದ ವ್ಯಕ್ತಿ ಎಂದೇ ಕರೆಯಲಾಗುತ್ತದೆ. ಯಾರಾದರೂ ಟೀಕಿಸಿದರೆ ಅವರು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಆದ್ರೆ ಸೂಪರ್ ಸ್ಟಾರ್ ರಜನಿಕಾಂತ್ ಸಿಟ್ಟಿಗೆದ್ದಿದ್ದೇಕೆ..? ತನ್ನ ಬಗ್ಗೆ ಯಾರು ಏನು ಹೇಳಿದರೂ ತಲೆಕೆಡಿಸಿಕೊಳ್ಳದ ತಲೈವಾ.. ಆದರೆ ಮಗಳ ವಿಚಾರದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾಯಕಿ ಅಮಲಾ ಪೌಲ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಸಸ್ವತಃ ಸೂಪರ್ ಸ್ಟಾರ್ ಅಮಲಾ ಪೌಲ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಎಷ್ಟು ಸತ್ಯ, ಎಷ್ಟು ಸುಳ್ಳು ಗೊತ್ತಿಲ್ಲ. ಆದರೆ ಪತ್ರಕರ್ತೆಯೊಬ್ಬರು ಮಾಡಿರುವ ಕಾಮೆಂಟ್ಗಳು ಈಗ ವೈರಲ್ ಆಗುತ್ತಿವೆ.
ಇದನ್ನೂ ಓದಿ : ಅಂದು ಆಂಕರ್.. ಇಂದು ಪ್ರಸಿದ್ಧ ನಟಿ : ಕೋಟಿ ಕೋಟಿ ಸಂಪಾದಿಸುವ ಇವರು ಯಾರು ಬಲ್ಲಿರಾ?
ಅಮಲಾಗೆ ಸೂಪರ್ ಸ್ಟಾರ್ ರಜನಿಕಾಂತ್ ಎಚ್ಚರಿಕೆ ನೀಡಿದ್ದಾರೆ ಎಂದು ಕಾಲಿವುಡ್ ನ ಖ್ಯಾತ ಪತ್ರಕರ್ತ ಹಾಗೂ ಚಿತ್ರ ವಿಮರ್ಶಕ ಸಯ್ಯಾರು ಬಾಲು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಧನುಷ್ ಮತ್ತು ಅಮಲಾ ನಡುವೆ ಸಂಬಂಧ ಇದೆ ಎಂಬ ಗುಲ್ಲು ಎಲ್ಲೆಡೆ ಹಬ್ಬಿದೆ. ಈ ವಿಚಾರದಲ್ಲಿ ಧನುಷ್ ಮತ್ತು ಅವರ ಪತ್ನಿ ಜಗಳವಾಡಿದ್ದರು ಎನ್ನಲಾಗಿದೆ. ಅದಕ್ಕಾಗಿಯೇ ಅವರು ಬೇರ್ಪಟ್ಟರು ಎಂದು ಸಹ ಹೇಳಲಾಗುತ್ತದೆ. ಆದರೆ ಇವರಿಬ್ಬರ ಆತ್ಮೀಯತೆ ಧನುಷ್ ಅವರ ಮಾವ ರಜನಿಕಾಂತ್ ಅವರಿಗೆ ತಿಳಿದಿದ್ದು, ಅವರು ಅಮಲಾ ಪೌಲ್ ಮನೆಗೆ ಹೋಗಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪತ್ರಕರ್ತರ ಕಾಮೆಂಟ್ ಈಗ ವೈರಲ್ ಆಗಿದೆ. ಅಷ್ಟೇ ಅಲ್ಲ ರಜನಿಕಾಂತ್ ಅಸಲಿಗೆ ಹೀಗೆ ಮಾಡಿದರಾ? ಅಥವಾ ಇದು ವದಂತಿಯೇ ಎಂಬುದು ಸ್ಪಷ್ಟವಾಗಿಲ್ಲ. ಇದೀಗ ಈ ಸುದ್ದಿ ಕಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಅಮಲಾ ಪೌಲ್ ಅವರನ್ನು ನೋಡಿದರೆ... ಅವರ ಬಗ್ಗೆ ಹೇಳಲೇ ಬೇಕಿಲ್ಲ. ಮಲಯಾಳಂನಲ್ಲಿ ಹುಟ್ಟಿ.. ಮಾಲಿವುಡ್ಗೆ ನಾಯಕಿಯಾಗಿ ಎಂಟ್ರಿಕೊಟ್ಟರು.. ಮಲಯಾಳಂ ಸಿನಿಮಾ ನೀಲತಾಮರನ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ ಮೈನಾ ನಂತರ ಅಮಲಾ ಅದೃಷ್ಟ ಬದಲಾಯಿತು. ಅವರು ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ ಮತ್ತು ಧನುಷ್ ಸೇರಿದಂತೆ ಬಾಲಿವುಡ್ ಸೂಪರ್ಸ್ಟಾರ್ಗಳೊಂದಿಗೆ ನಟಿಸಿದ್ದಾರೆ.
ವಾಸ್ತವವಾಗಿ, ಅಮಲಾ ಮತ್ತು ಧನುಷ್ ಅನಾದಿ ಕಾಲದಿಂದಲೂ ತುಂಬಾ ಹತ್ತಿರವಾಗಿದ್ದಾರೆ ಎನ್ನಲಾಗುತ್ತದೆ. ಅವರೂ ತುಂಬಾ ಆತ್ಮೀಯರಾಗಿದ್ದರು ಎನ್ನಲಾಗುತ್ತದೆ. ಇವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾದ ಮೂಲಕ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಿ ಮದುವೆಗೂ ಮೀರಿದ ಸಂಬಂಧಕ್ಕೆ ಕಾರಣವಾಯಿತು ಎಂಬ ಸುದ್ದಿ ಕಾಲಿವುಡ್ ನಲ್ಲಿ ವೈರಲ್ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ : ಡ್ರೈವರ್ ಇಲ್ಲದ ಕಾರಿನಲ್ಲಿ ಡಾಲಿ ಧನಂಜಯ್ ಪ್ರಯಾಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.