Bangaarada Manushya Movie : ಬ್ಲ್ಯಾಕ್‌ ಆಂಡ್‌ ವೈಟ್‌ ಸಿನಿಮಾಗಳ ಕಾಲವಾದ್ರೂ ಎಂಟರ್‌ಟೈನ್‌ಮೆಂಟ್‌ಗೆ ಮಾತ್ರ ಕೊರತೆ ಇರಲಿಲ್ಲ. ಜನರನ್ನು ರಂಜಿಸುವ ಜೊತೆಗೆ ಸಮಾಜಮುಖಿ ಸಂದೇಶ ಸಾರುವ ಸಿನಿಮಾಗಳು ರಿಲೀಸ್‌ ಆಗುತ್ತಿದ್ದವು. ಅಂತಹ ಸಿನಿಮಾಗಳಲ್ಲಿ ಒಂದು ಬಂಗಾರದ ಮನುಷ್ಯ. ಬ್ಲ್ಯಾಕ್‌ ಆಂಡ್‌ ವೈಟ್‌ ಯುಗದಲ್ಲೂ ಗೋಲ್ಡನ್‌ ಸಂದೇಶ ಸಾರಿದ ಚಿತ್ರವೇ ಬಂಗಾರದ ಮನುಷ್ಯ. ರಿಲೀಸ್‌ ಆಗಿ ಐವತ್ತು ವರ್ಷಗಳು ಕಳೆದರೂ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತೆಲುಗು, ತಮಿಳು ಆಯ್ತು ಈಗ ಬಾಲಿವುಡ್‌ಗೆ ಸೆಂಚುರಿ ಸ್ಟಾರ್‌...ಕೇರಳ ಸ್ಟೋರಿ ನಿರ್ದೇಶಕನ ಚಿತ್ರದಲ್ಲಿ ನಟನೆ? 


ಕನ್ನಡ ಸಿನಿಮಾ ರಂಗಕ್ಕೆ ಡಾ.ರಾಜ್‌ ಕುಮಾರ್‌ ನೀಡಿದ ಕೊಡುಗೆ ಅಪಾರ. ಡಾ.ರಾಜ್‌ಕುಮಾರ್ ಮತ್ತು ನಿರ್ದೇಶಕ ಸಿದ್ದಲಿಂಗಯ್ಯ ಕಾಂಬಿನೇಷನ್‌ನಲ್ಲಿ ಮೂಡಿಬಂದ ಬಂಗಾರದ ಮನುಷ್ಯ ಸಿನಿಮಾವನ್ನು ಇಂದಿಗೂ ಅನೇಕ ಜನರು ಇಷ್ಟಪಟ್ಟು ನೋಡುತ್ತಾರೆ. ಡಾ.ರಾಜ್ ವೃತ್ತಿ ಬದುಕಿನಲ್ಲಿ ಬಂಗಾರದ ಮನುಷ್ಯ ಅತ್ಯಂತ ಮಹತ್ವದ ಚಿತ್ರವಾಗಿದೆ. ಕನ್ನಡ ಚಿತ್ರರಂಗದ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ ಇದು ಸಹ ಒಂದು. 1972ರ ಮಾರ್ಚ್ 31ರಂದು ಬಂಗಾರದ ಮನುಷ್ಯ ಸಿನಿಮಾ ರಿಲೀಸ್‌ ಆಗಿತ್ತು. 


ಡಾ. ರಾಜ್‌ಕುಮಾರ್ 206 ಸಿನಿಮಾಗಳಲ್ಲಿ ನಟಿಸಿದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರೇ ನಾಯಕರು ಎನ್ನುವುದು ಎವರ್‌ಗ್ರೀನ್‌ ದಾಖಲೆಯಾಗಿದೆ. ಈಗ ಒಬ್ಬ ಹೀರೋ ಒಂದು ಚಿತ್ರದ ನಂತರ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. 


ಇದನ್ನೂ ಓದಿ: ಭಾರತದ ಅತ್ಯಂತ ದುಬಾರಿ ಸಿನಿಮಾ ಯಾವುದು ಗೊತ್ತಾ? 


ಆಗ ರಾಜ್‌ಕುಮಾರ್‌ ಒಂದು ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ 5,000 ರೂಪಾಯಿಯಂತೆ. 10,000 ಕ್ಕೆ ಸಂಭಾವನೆ ಏರಿಕೆಯಾಗಲು ಅವರು 10 ಚಿತ್ರಗಳನ್ನು ಮಾಡಬೇಕಾಯಿತು ಎಂದು ಹೇಳಲಾಗ್ತಿದೆ. ಬಂಗಾರದ ಮನುಷ್ಯ ಸಿನಿಮಾ ಸುಮಾರು 9 ತಿಂಗಳು ಕೆಲಸ ನಡೆದಿತ್ತಂತೆ. ಅಷ್ಟಕ್ಕೂ ಸೇರಿಸಿ 5,000 ಪಡೆಯುತ್ತಿದ್ದರಂತೆ. ಬಂಗಾರದ ಮನುಷ್ಯ ಸಿನಿಮಾ ತೆಲುಗಿನಲ್ಲಿ 'ದೇವುಡುಲಾಂಟಿ ಮನಿಷಿ' ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಆದರೆ ಪರಭಾಷೆಗಳಲ್ಲಿ ಈ ಚಿತ್ರ ಹೇಳಿಕೊಳ್ಳುವಂತಹ ಹಿಟ್‌ ಕೊಡಲಿಲ್ಲ ಎನ್ನಲಾಗುತ್ತದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.