Rakhi Sawant's ex-husband Adil‌ Khan Second Marriage: ಬಾಲಿವುಡ್ ಮತ್ತು ಟಿವಿ ಜಗತ್ತಿನಲ್ಲಿ ಡ್ರಾಮಾ ಕ್ವೀನ್ ಎಂದು ಪ್ರಸಿದ್ಧರಾಗಿರುವ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಮೂಲಕವೂ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇತ್ತೀಚೆಗಷ್ಟೇ ರಾಖಿ ತನ್ನ ಎರಡನೇ ಪತಿ ಆದಿಲ್ ಖಾನ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದರು. ರಾಖಿ ಸಾವಂತ್ ಕೂಡ ಆದಿಲ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಆ ಬಳಿಕ ಆದಿಲ್ 5 ತಿಂಗಳು ಜೈಲು ವಾಸ ಅನುಭವಿಸಿದ್ದರು. ಇದೀಗ ಜೈಲಿನಿಂದ ಹೊರಬಂದ ಕೆಲವೇ ತಿಂಗಳುಗಳಲ್ಲಿ ಎರಡನೇ ಮದುವೆಯಾಗಿ ಸೆಟಲ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಜೈಪುರದಲ್ಲಿ ನಟಿಯನ್ನು ಮದುವೆಯಾಗಿದ್ದಾರೆ ಎಂಬ ವರದಿಗಳಿವೆ. ಬಾಲಿವುಡ್‌ನ 'ಭಾಯಿಜಾನ್' ಅಂದರೆ ಸಲ್ಮಾನ್ ಖಾನ್‌ ಅವರೊಂದಿಗೆ ಸಂಪರ್ಕದಲ್ಲಿರುವ ಈ ನಟಿಯನ್ನೇ ಆದಿಲ್‌ ವರಿಸಿದ್ದಾರೆ ಎನ್ನಲಾಗ್ತಿದೆ.  


ಇದನ್ನೂ ಓದಿ: Nayanthara: ನಯನತಾರಾ ಡಿವೋರ್ಸ್‌ ಫಿಕ್ಸ್‌ ! ವಿಚ್ಛೇದನ ವದಂತಿಗೆ ಪುಷ್ಠಿಕೊಡ್ತಿದೆ ಲೇಡಿ ಸೂಪರ್‌ ಸ್ಟಾರ್‌ ಮಾಡಿದ ಪೋಸ್ಟ್ ? 


ವರದಿಯ ಪ್ರಕಾರ, ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ಇತ್ತೀಚೆಗೆ ಜೈಪುರದಲ್ಲಿ ಬಿಗ್ ಬಾಸ್ 12 ಖ್ಯಾತಿಯ ಸೋಮಿ ಖಾನ್ ಅವರನ್ನು ವಿವಾಹವಾದರು ಎನ್ನಲಾಗಿದೆ. ಸಬಾ ಖಾನ್ ಅವರ ಸಹೋದರಿ ಸೋಮಿ ಖಾನ್ ಅವರನ್ನು ಆದಿಲ್ ವಿವಾಹವಾದರು ಎನ್ನಲಾಗಿದೆ. ಇದು ವದಂತಿಯಾಗಿದ್ದು, ಆದಿಲ್ ಅಥವಾ ಸೋಮಿ ಖಾನ್ ತಮ್ಮ ಮದುವೆಯ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.


ಸೋಮಿ ಖಾನ್ ಯಾರು?


ಸೋಮಿ ಖಾನ್ ಮತ್ತು ಸಬಾ ಖಾನ್ 'ಬಿಗ್ ಬಾಸ್ 12' ನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಸಹೋದರಿಯರು ಮತ್ತು ಜೈಪುರ ನಿವಾಸಿಗಳು. ಪ್ರಸ್ತುತ ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಸೋಮಿ ಖಾನ್ ಕಿರುತೆರೆ ನಟಿ ಆಗಿದ್ದಾರೆ.


ಇದನ್ನೂ ಓದಿ: Actress Cosmetic Surgery: ಕಾಸ್ಮೆಟಿಕ್‌ ಸರ್ಜರಿ ಮೂಲಕ ಸೌಂದರ್ಯ ಹೆಚ್ಚಿಸಿಕೊಂಡ ಸೌತ್‌ ನಟಿಯರಿವರು ! ಮೊದಲು ಹೇಗಿದ್ರು ನೋಡಿ, ಇಲ್ಲಿವೆ ಫೋಟೋಸ್..‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.