Deepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸೆಪ್ಟೆಂಬರ್ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ರಣವೀರ್‌ ಸಿಂಗ್‌ ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.


COMMERCIAL BREAK
SCROLL TO CONTINUE READING

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸೆಪ್ಟೆಂಬರ್ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದನ್ನು ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಈ ಸೆಲೆಬ್ರಿಟಿ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 


ಇದನ್ನೂ ಓದಿ: ದೀಪಿಕಾ-ರಣವೀರ್‌ ಮಗಳ ಫೋಟೋ ವೈರಲ್‌! ಅಬ್ಬಬ್ಬಾ...ಎಷ್ಟು ಕ್ಯೂಟ್‌ ಇದ್ದಾಳೆ ಗೊತ್ತಾ ಮಿನಿ ದಿಪ್ಪಿ?


ಇದೇ ಸಂದರ್ಭದಲ್ಲಿ ವಿವಾದಾತ್ಮಕ ನಟಿ ಕ್ವೀನ್ ರಾಖಿ ಸಾವಂತ್ ಕೂಡ ದೀಪಿಕಾ ಮತ್ತು ರಣವೀರ್ ದಂಪತಿಗೆ ಶುಭ ಕೋರಿದ್ದು, ಸದ್ಯ ರಾಖಿ ಸಾವಂತ್ ದುಬೈನಲ್ಲಿದ್ದಾರೆ.  ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ಕೇಳಿ ಖಷಿಯಾಗಿರುವ ರಾಕಿ ಸಾವಂತ್‌ ದುಬೈನ ಶಾಪಿಂಗ್ ಮಾಲ್‌ಗೆ ಹೋಗಿ ದಿಪ್ಪಿ ಮಗಳಿಗೆ ಕೆಲವು ಆಟಿಕೆಗಳನ್ನು ಖರೀದಿಸಿದ್ದಾರೆ.


'ದೀಪಿಕಾ, ರಣವೀರ್ ಸಿಂಗ್.. ನಾನು ಚಿಕ್ಕಮ್ಮನಾಗಿದ್ದೇನೆ. ದೀಪಿಕಾ ಪಡುಕೋಣೆ ನೆನಪಿದೆಯೇ? ನಾವಿಬ್ಬರೂ ಒಟ್ಟಿಗೆ ಡ್ಯಾನ್ಸ್ ಕ್ಲಾಸ್ ಗೆ ಹೋಗಿದ್ದೆವು. ನಾವಿಬ್ಬರೂ ಒಟ್ಟಿಗೆ ಸಿನಿಮಾ ವೃತ್ತಿ ಆರಂಭಿಸಿದ್ದೇವೆ. ಈಗ ನಕ್ಕು ನೀವು ಸ್ಟಾರ್ ಹೀರೋಯಿನ್ ಆಗಿದ್ದೀರಿ, ನೀನೂ ತಾಯಿಯಾದೆ" ಎಂದು ರಾಖಿ ಸಾವಂತ್ ಸಂತಸ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Video: ಗಣಪತಿ ವಿಸರ್ಜನೆಯ ವೇಳೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಶಾಕ್‌ ಆಗ್ತೀರ!


ರಾಖಿ ಸಾವಂತ್ ಶೇರ್ ಮಾಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಕೆಲ ನೆಟ್ಟಿಗರು ರಾಖಿಯನ್ನು ಗಂಭೀರವಾಗಿ ಟ್ರೋಲ್ ಮಾಡುತ್ತಿದ್ದಾರೆ. ದೀಪಿಕಾ ಹಾಗೂ ಅವರ ಪುಟ್ಟ ಮಗುವನ್ನು ಚಾರಕ್ಕಾಗಿ ಬಳಸಿಕೊಂಡಿದ್ದ ಕಾರಣಕ್ಕಾಗಿ ನೆಟ್ಟಿಗರು ರಾಖಿ ಸಾವಂತ್‌ ಮೇಲೆ ಗರಂ ಆಗಿದ್ದಾರೆ. 


 

 

 

 



 

 

 

 

 

 

 

 

 

 

 

A post shared by Filmy Ape (@filmyape)


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.