Rakhi sawant marriage : ಮರಾಠಿ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮೈಸೂರು ಹುಡುಗನ್ನು ಮದುವೆಯಾಗಿದ್ದಾರೆ ಎನ್ನಲಾದ ಫೋಟೋಗಳು ವೈರಲ್‌ ಆಗುತ್ತಿದೆ. ಆದ್ರೆ ಈ ಕುರಿತು ನಟಿ ಸ್ಪಷ್ಟ ಪಡಿಸಿಲ್ಲ. ದಂಪತಿಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದೀಗ ವೈರಲ್‌ ಆಗಿರುವ ಫೋಟೋಗಳಲ್ಲಿ, ಮೈಸೂರು ಮೂಲದ ಉದ್ಯಮಿ ಆದಿಲ್‌ ಜೊತೆ ರಾಖಿ ಮದುವೆಯ ಪ್ರಮಾಣಪತ್ರವನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಇನ್ನೊಂದು ಫೋಟೋದಲ್ಲಿ ರಾಖಿ ದಾಖಲಾತಿಗಳಿಗೆ ಸಹಿ ಹಾಕುತ್ತಿರುವುದನ್ನು ನೋಡಬಹುದು. ಕಳೆದ ವರ್ಷವೇ ಮದುವೆ ನೋಂದಣಿ ನಡೆದಿದ್ದು, ಇದೀಗ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: 1985ರಲ್ಲೇ ಅಣ್ಣಾವ್ರರಿಗೆ ʼಕೆಂಟಕಿʼ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು..!


ಈ ಹಿಂದೆ ರಾಖಿ ಸಾವಂತ್‌ ರಿತೇಶ್‌ ಎಂಬುವರ ಜೊತೆ ಡೇಟಿಂಗ್‌ ಮಾಡುತ್ತಿದ್ದರು. ಅವರನ್ನು ಮದುವೆಯಾಗಿದ್ದರು. ಅವನಿಂದ ಬೇರ್ಪಟ್ಟ ನಂತರ ಆದಿಲ್‌ ಜೊತೆ ಕಾಣಿಸಿಕೊಂಡರು. ಅಲ್ಲದೆ, ಇಬ್ಬರೂ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು. ತನ್ನ ಗೆಳೆಯ ಎಂದು ಆದಿಲ್‌ ಅವರನ್ನು ಮಾಧ್ಯಮಗಳಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದಳು. ರಾಖಿ ಸಾವಂತ್ ಅವರು ಆದಿಲ್ ಜೊತೆ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.


ರಾಖಿ ತಾಯಿಯ ತಾಯಿಯ ಆರೋಗ್ಯ ಸರಿಯಾಗಿಲ್ಲ. ಅವರು ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರು ಉದ್ಯಮಿ ರಿತೇಶ್ ಅವರನ್ನು ವಿವಾಹವಾಗಿದ್ದರು. ಆದರೆ, ತನ್ನ ಮೊದಲ ಮದುವೆಯ ವಿಚಾರವನ್ನು ಬಹಳ ದಿನಗಳವರೆಗೆ ಮುಚ್ಚಿಟ್ಟಿದ್ದರು. ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ವಿಚ್ಛೇದನ ಪಡೆದಿದ್ದರು. ಇದೀಗ ರಾಖಿ ಆದಿಲ್ ಅವರನ್ನು ಎರಡನೇ ಮದುವೆಯಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.