Rakhi Sawant New Boyfriend: ಸೋಷಿಯಲ್ ಮೀಡಿಯಾದ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇತ್ತೀಚೆಗಷ್ಟೇ ತಾನು ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ಹೇಳುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ. ಹೊಸ ಪ್ರೀತಿಯ ಪ್ರವೇಶದ ಬಗ್ಗೆ ಮಾತನಾಡಿದ ರಾಖಿ ಸಾವಂತ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತಿಚಿಗೆ ಸಂದರ್ಶನವೊಂದರಲ್ಲಿ ರಾಖಿ ಸಾವಂತ್ ಹೊಸ ಮಿಸ್ಟರಿ ಮ್ಯಾನ್ ಬಗ್ಗೆ ಮಾತನಾಡಿದ್ದಾರೆ. ಆ ವ್ಯಕ್ತಿಯನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಸದ್ಯಕ್ಕೆ ಇಬ್ಬರೂ ‘ಜಸ್ಟ್ ಫ್ರೆಂಡ್ಸ್’ ಮಾತ್ರ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಹೊಸ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ ರಾಖಿ ಸಾವಂತ್!


ರಾಖಿ ಸಾವಂತ್ ಇತ್ತೀಚಿನ ಸಂದರ್ಶನದಲ್ಲಿ ಅವರ ಜೀವನದಲ್ಲಿ ಹೊಸ ವ್ಯಕ್ತಿಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಕೆನಡಾ ಮೂಲದ ಈ ವ್ಯಕ್ತಿಯ ಹೆಸರು ಲಕ್ಕಿ ಸಿಂಗ್ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಮಿಸ್ಟರಿ ಮ್ಯಾನ್ ಬಗ್ಗೆ ಮಾತನಾಡಿದ ರಾಖಿ ಸಾವಂತ್, ನಾನು ಲಕ್ಕಿಯನ್ನು ಇಷ್ಟಪಡುತ್ತೇನೆ. ಅವನು ತುಂಬಾ ಸುಂದರವಾಗಿದ್ದಾನೆ. ಆದರೆ ಇಷ್ಟ ಪಡುವುದಕ್ಕೂ ಪ್ರೀತಿಗೂ ವ್ಯತ್ಯಾಸವಿದೆ. ಲಕ್ಕಿ ಮತ್ತು ನಾನು ಕೇವಲ ಸ್ನೇಹಿತರು ಎಂದು ಹೇಳಿದ್ದಾರೆ.


ಆದಿಲ್ ದುರಾನಿ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಬಯಸಿದ್ದರು!


ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಕೂಡ ಲಕ್ಕಿ ಸಿಂಗ್ ಕಡೆಗೆ ಆಕರ್ಷಿತರಾಗಿದ್ದಾರೆ ಎಂಬ ಹೇಳಿಕೆಗಳ ಬಗ್ಗೆ ಮಾತನಾಡುತ್ತಾ, ಆಕರ್ಷಣೆ ಇದ್ದರೆ ಏನು ಸಮಸ್ಯೆ? ನಾನೂ ಈ ಸಮಯದಲ್ಲಿ ತುಂಬಾ ಕುಗ್ಗಿ ಹೋಗಿದ್ದೇನೆ. ಆದಿಲ್ ನನ್ನನ್ನು ಸಾಕಷ್ಟು ಶೋಷಣೆ ಮಾಡಿದ್ದಾನೆ, ಅವನು ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕು ಎಂಬ ಕಾರಣಕ್ಕಾಗಿ ನನ್ನನ್ನು ಮದುವೆಯಾಗಿದ್ದಾನೆಂದು ನನಗೆ ಅನಿಸುತ್ತಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ: Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ


ರಾಖಿಯ ಹೊಸ ಸಂಬಂಧ ಪ್ರಚಾರದ ಸ್ಟಂಟ್ ಅಲ್ಲ!


ಲಕ್ಕಿ ಸಿಂಗ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ರಾಖಿ ಸಾವಂತ್, ಇದು ಪ್ರಚಾರದ ಸ್ಟಂಟ್ ಅಲ್ಲ ಎಂದು ಹೇಳಿದ್ದಾರೆ. ಪಬ್ಲಿಸಿಟಿ ಸ್ಟಂಟ್ ಮಾಡಲು ನನಗೆ ಒಂದು ಸೆಕೆಂಡ್ ಸಾಕು. ಅದಕ್ಕೆ ನಾನು ಲಕ್ಕಿ ಸಿಂಗ್ ಅವರನ್ನು ಏಕೆ ಬಳಸುತ್ತೇನೆ ಎಂದು ರಾಖಿ ಹೇಳಿದ್ದಾರೆ. ಹುಡುಗಿಯರು ತಮ್ಮ ಬಟ್ಟೆ ಬಿಚ್ಚುತ್ತಿದ್ದಾರೆ, ನಾನು ಯಾವ ಬಟ್ಟೆ ಬಿಚ್ಚಿದ್ದೇನೆ. ನಾನು ಸತ್ಯವನ್ನು ಹೇಳುವ ಮೂಲಕ ನನ್ನ ಊಟವನ್ನು ಗಳಿಸಿದರೆ ಅದರಲ್ಲಿ ತಪ್ಪೇನಿದೆ. ನಾನು ಬಾಲಿವುಡ್‌ನಲ್ಲಿದ್ದೇನೆ ಮತ್ತು ಜೀವನೋಪಾಯಕ್ಕಾಗಿ ಸ್ಟಂಟ್‌ಗಳನ್ನು ಮಾಡುತ್ತಿದ್ದೇನೆ. ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.


ಆದಿಲ್ ದುರಾನಿಯಿಂದ ಇನ್ನೂ ವಿಚ್ಛೇದನ ಪಡೆದಿಲ್ಲ!


2023 ರ ಆರಂಭದಲ್ಲಿ ಆದಿಲ್ ದುರಾನಿಯೊಂದಿಗೆ ರಾಖಿ ಸಾವಂತ್ ಮದುವೆ ನಡೆದಿದೆ ಎಂಬ ವಿಚಾರ ಬಹಿರಂಗವಾಯಿತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆದಿಲ್ ದುರಾನಿ ಬಂಧನವಾಗಿದ್ದು, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ತಮ್ಮ ಪತಿ ಆದಿಲ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಆದಿಲ್ ದುರಾನಿ ಪ್ರಸ್ತುತ ಮೈಸೂರು ಜೈಲಿನಲ್ಲಿದ್ದಾರೆ.


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್‌ನಿಂದಲೇ ಮೋಸ!! ಏನಿದು ವಿಷಯ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.