Rakhi Sawant Trending Video: ಮನರಂಜನಾ ಲೋಕದ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಂದಾದ ರಾಖಿ ಸಾವಂತ್ ಗೆ ಲೈಮ್ ಲೈಟ್ ನಲ್ಲಿ ಉಳಿಯುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಿದೆ. ಸಾಮಾನ್ಯವಾಗಿ ರಾಖಿ ಸಾವಂತ್ ತನ್ನ ದಿಟ್ಟ ಹೇಳಿಕೆಗಳಿಗಾಗಿ ಖ್ಯಾತಿ ಪಡೆದಿದ್ದಾಳೆ ಮತ್ತು ಪ್ರತಿದಿನ ಹೆಡ್ಲೈನ್ ನಲ್ಲಿ ಇರುತ್ತಾಳೆ. ಇತ್ತೀಚಿಗೆ ರಾಖಿ ಸಾವಂತ್ ಬಗ್ಗೆ ಪ್ರಕಟಗೊಂಡ ಒಂದು ಸುದ್ದಿಯಲ್ಲಿ ಆಕೆ ಮಾಜಿ ಪತಿ ಆದಿಲ್ ದುರಾನಿ ಅವರ ಖಾಸಗಿ ವೀಡಿಯೊವನ್ನು ಹಂಚಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಗಿದೆ ಮತ್ತು ಆಕೆ ಸರೆಂಡರ್ ಆಗಬೇಕಾಗುತ್ತದೆ ಎನ್ನಲಾಗುತ್ತಿದೆ. ಇದೇ ವೇಳೆ ರಾಖಿ ಸಾವಂತ್ ದುಬೈನಿಂದ ಮುಂಬೈಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದೇ ವೇಳೆ, ರಾಖಿ ಸಾವಂತ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿವೈರಲ್ ಆಗುತ್ತಿದೆ, ಅದರಲ್ಲಿ ಆಕೆ ಪಾಪರಾಜಿಗೆ ಕ್ಲಾಸ್ ತೆಗೆದುಗೊಂಡಿದ್ದಾಳೆ. ಈ ಸಂದರ್ಭದಲ್ಲಿ ರಾಖಿ ಸಾವಂತ್ ಪಾಪರಾಜಿಗಳಿಗೆ ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!


ವಿಡಿಯೋ ವೈರಲ್ ಆಗುತ್ತಿದೆ (Rakhi Sawant Class To Paparazzi
ರಾಖಿ ಸಾವಂತ್ ಅವಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಾಖಿ ಸಾವಂತ್ ಪಾಪರಾಜಿಗಳಿಗೆ ಕ್ಲಾಸ್ ಕ್ಲಾಸ್ ತೆಗೆದುಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಕ್ಯಾಮೆರಾಮನ್ ಗೆ ಕ್ಲಾಸ್ಟ್ ಹಚ್ಚಿದ ರಾಖಿ "ನಿಮ್ಮ ಕ್ಯಾಮರಾ ಎಲ್ಲಿದೆ, ಅದು ನನ್ನ ಎದೆಯ ಮೇಲಿದೆಯೇ ಅಥವಾ ಬೇರೆಲ್ಲಿಯಾದರೂ ಇದೆಯೇ. ನಾನು ನಿಮ್ಮನ್ನು ನಂಬುವುದಿಲ್ಲ ಬಾಯ್ಸ್". "ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದಾಗ, ನಿಮ್ಮ ಕ್ಯಾಮೆರಾಗಳು ಬೇರೆಡೆಯೇ ಇರುವುದು ಕಂಡುಬರುತ್ತದೆ. ಈ ತಪ್ಪು ಕೆಲಸ ಮಾಡಬೇಡಿ. ನಾನೊಬ್ಬ ಭಾರತೀಯ ಮಹಿಳೆ" ಎನ್ನುತ್ತಾಳೆ.  ರಾಖಿ ಸಾವಂತ್ ಅವಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಜನ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಮೊದಲು ನಿಮ್ಮ ಬಟ್ಟೆಗಳನ್ನು ಸರಿಪಡಿಸಿ' ಎಂದು ಹೇಳಿದ್ದಾರೆ. ಮತ್ತೊರ್ವ ಬಳಕೆದಾರ, 'ಭಾರತೀಯ ಮಹಿಳೆಯರು ಹೀಗಿದ್ದಾರೆಯೇ, ನನಗೆ ಗೊತ್ತೇ ಇರಲಿಲ್ಲ" ಎಂದು ಬರೆದಿದ್ದಾರೆ. ಮೂರನೇ  ಬಳಕೆದಾರರು, "ಭಾರತೀಯ ಮಹಿಳೆ ಸೀರೆಯಲ್ಲಿ ಕಾಣಿಸಿಲೊಳ್ಳುತ್ತಾಳೆ" ಎಂದು ಬರೆದಿದ್ದಾರೆ. ಇದಕ್ಕೂ ಮುಂದುವರೆದು ಕಾಮೆಂಟ್ ಮಾಡಿರುವ ಮತ್ತೊರ್ವ ಬಳಕೆದಾರ " ಇದರಲ್ಲಿ ಕ್ಯಾಮೆರಾಮನ್ ತಪ್ಪು ಏನು ಇಲ್ಲ" ಎಂದಿದ್ದಾರೆ. 


ಇದನ್ನೂ ಓದಿ-Abhishek Bachchan ಅಲ್ಲ, Aishwarya Rai ಗೆ ಮದುವೆಗೂ ಮುನ್ನ ಇಂಥಾ ಹುಡುಗರೆಂದರೆ ಹೆಚ್ಚು ಇಷ್ಟವಾಗುತ್ತಿದ್ದರಂತೆ!


ಸಲ್ಮಾನ್ ಖಾನ್ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು? (Rakhi Sawant On Salman Khan)
ರಾಖಿ ಸಾವಂತ್ ಹಲವು ವಿಷಯಗಳ ಬಗ್ಗೆ ಮಾಧ್ಯಮಗಳು ಮತ್ತು ಪಾಪರಾಜಿಗಳೊಂದಿಗೆ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಭದ್ರತೆಯ ಬಗ್ಗೆ ಮಾತನಾಡಿರುವ ರಾಖಿ ಸಾವಂತ್. "ಈದ್ ಸಂದರ್ಭದಲ್ಲಿ ಸಲ್ಮಾನ್ ಬಾಲ್ಕನಿಗೆ ಬರಬಾರದು. ಜನರು ಭಾಯಿಜಾನ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ" ಎಂದಿದ್ದಾಳೆ. ಅಷ್ಟೇ ಯಾಕೆ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸುವಂತೆ ರಾಖಿ ಸಾವಂತ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ರಾಖಿ ಸಾವಂತ್ ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 


ವೈರಲ್ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.