Rakshit Shetty And Rashmika Mandanna : ರಕ್ಷಿತ್ ಶೆಟ್ಟಿ ತಮ್ಮ ಮಾಜಿ ಪ್ರೇಯಸಿ ರಶ್ಮಿಕಾ ಮಂದಣ್ಣ ಬಗ್ಗೆ ಅಪರೂಪದ ಹೇಳಿಕೆ ನೀಡಿದ್ದಾರೆ. 2017 ರಲ್ಲಿ ರಶ್ಮಿಕಾ ಮಂದಣ್ಣ ಜೊತೆ ರಕ್ಷಿತ್‌ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೆಲ ದಿನಗಳ ಬಳಿಕ ನಿಶ್ಚಿತಾರ್ಥ ಮುರಿದು ಬಿದ್ದಿತು. ಇದೀಗ ಹೊಸ ಸಂದರ್ಶನವೊಂದರಲ್ಲಿ, ರಕ್ಷಿತ್ ಮತ್ತು ರಶ್ಮಿಕಾ ಇನ್ನೂ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.  


COMMERCIAL BREAK
SCROLL TO CONTINUE READING

ಇತ್ತೀಚೆಗೆ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಯೂಟ್ಯೂಬರ್‌ನೊಂದಿಗೆ ಮಾತನಾಡಿದ ರಕ್ಷಿತ್ ಅವರು ರಶ್ಮಿಕಾ ಅವರೊಂದಿಗೆ ಇನ್ನೂ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಲಾಯಿತು. ಇದಕ್ಕೆ ರಕ್ಷಿತ್‌ ಶೆಟ್ಟಿ ಹೌದು ಎಂದು ಉತ್ತರಿಸಿದ್ದಾರೆ. ರಶ್ಮಿಕಾ ಮತ್ತು ನಾನು ಇನ್ನೂ ಸಂಪರ್ಕದಲ್ಲಿದ್ದೇವೆ. ಆಕೆ ಸಿನಿಮಾ ಜಗತ್ತಿನಲ್ಲಿ ದೊಡ್ಡ ಕನಸನ್ನು ಹೊಂದಿದ್ದಳು. ಅದಕ್ಕೆ ತಕ್ಕಂತೆ ಆ ಕನಸಿನತ್ತ ಸಾಗುತ್ತಿದ್ದಾಳೆ. ತಾನು ಅಂದುಕೊಂಡ ಕೆಲಸವನ್ನು ಸಾಧಿಸುವ ಇಚ್ಛಾಶಕ್ತಿ ಅವಳಲ್ಲಿದೆ. ಆಕೆಯ ಸಾಧನೆಗಾಗಿ ನಾವು ಅವಳ ಬೆನ್ನು ತಟ್ಟಬೇಕು ಎಂದಿದ್ದಾರೆ.


ಇದನ್ನೂ ಓದಿ : ಫೋಟೋಸ್‌ ವೈರಲ್‌ : ಹಸಿರು ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ 


ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ತಮ್ಮ ಸಿನಿ ಪಯಣ ಆರಂಭಿಸಿದರು. ಈ ಚಿತ್ರವನ್ನು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿದ್ದಾರೆ. ರಕ್ಷಿತ್ ಜೊತೆ ರಶ್ಮಿಕಾ ನಟಿಸಿದ್ದಾರೆ. ಚಿತ್ರದ ತಯಾರಿಕೆಯ ಸಮಯದಲ್ಲಿ ರಶ್ಮಿಕಾ ಮತ್ತು ರಕ್ಷಿತ್ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿತ್ತು. ಸಿನಿಮಾ ಬಿಡುಗಡೆಯ ನಂತರ ರಶ್ಮಿಕಾ ಮತ್ತು ರಕ್ಷಿತ್ ನಿಶ್ಚಿತಾರ್ಥ ಮಾಡಿಕೊಂಡರು. ಕೆಲವು ತಿಂಗಳ ನಂತರ, ನಿಶ್ಚಿತಾರ್ಥವು ಮುರಿದುಹೋಯಿತು.  


ಸದ್ಯ ರಶ್ಮಿಕಾ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ರಣಬೀರ್ ಕಪೂರ್ ಜೊತೆಗಿನ ಅವರ ಮೊದಲ ಚಿತ್ರವಾಗಿದೆ. ಮತ್ತೊಂದೆಡೆ, ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. 


ಇದನ್ನೂ ಓದಿ : ನಾಗಚೈತನ್ಯ ಜೊತೆ ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದ ನಟಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.