Rakshit Shetty On Rashmika Mandanna : ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಕನ್ನಡ ಸಿನಿಮಾ ಸಪ್ತ ಸಾಗರ ದಾಚೆ ಎಲ್ಲೋ ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಈ ಚಲನಚಿತ್ರವನ್ನು ಟಾಪ್ ನಿರ್ಮಾಣ ಕಂಪನಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಪ್ತ ಸಾಗರಲು ದಾಟಿ ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿದೆ. ಮ್ಯೂಸಿಕಲ್ ಲವ್ ಸ್ಟೋರಿಯಾಗಿ ತಯಾರಾಗಿರುವ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದಾರೆ. ಸಪ್ತ ಸಾಗರಲು ದಾಟಿ ಸಿನಿಮಾ ಟಾಲಿವುಡ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ಕುರಿತಾಗಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬ್ಲೂ ಡ್ರೇಸ್‌ನಲ್ಲಿ ಬಿಟೌನ್‌ ಬೆಡಗಿ ಜಾನ್ವಿ ಶೈನ್‌..! ಗ್ಲಾಮರ್ ಕ್ವೀನ್ ಎಂದ ಫ್ಯಾನ್ಸ್‌ 


ಕಂಟೆಂಟ್ ಮೇಲೆಯೇ ಸಿನಿಮಾಗಳು ನಿಲ್ಲೋದು. ವಿಚಾರ ಚೆನ್ನಾಗಿದ್ದರೆ ಭಾಷೆಯ ಭೇದವಿಲ್ಲದೆ ಅನೇಕ ಸಿನಿಮಾಗಳು ಯಶಸ್ವಿಯಾಗುತ್ತವೆ ಎಂದಿದ್ದಾರೆ. ಹೃದಯಸ್ಪರ್ಶಿ ಭಾವನೆಗಳ ಕಥೆ ಹೊಂದಿರುವ ಈ ಸಿನಿಮಾ, ನಿರ್ದೇಶಕ ಹೇಮಂತ್ ಹತ್ತು ವರ್ಷಗಳ ಹಿಂದೆ ಬರೆದ ಕತೆಯಾಗಿದೆ ಎಂದು ರಕ್ಷಿತ್‌ ಹೇಳಿದ್ದಾರೆ. ಭಾವನಾತ್ಮಕ ಅಂಶಗಳಿರುವ ಸಪ್ತ ಸಾಗರಲು ದಾಟಿ ಸಿನಿಮಾ ಈಗ ತೆಲುಗು ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. 


ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಅವರ ಜೀವನದ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲವು ಮಾಧ್ಯಮಗಳು ರಶ್ಮಿಕಾ ಮಂದಣ್ಣ ಮಾಜಿ ಪ್ರೇಮಿ ರಕ್ಷಿತ್ ಶೆಟ್ಟಿ ಅಂತ ಬರೆಯುತ್ತಿದ್ದಾರೆ ಈ ಬಗ್ಗೆ ಏನಂತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಪಲ್​ ಸ್ಟಾರ್‌ ತುಂಬಾ ಸಿಂಪಲ್‌ ಆಗಿಯೇ ಉತ್ತರ ನೀಡಿದ್ದಾರೆ. ಯಾವುದೇ ಬೇರೆ ಫೀಲಿಂಗ್ ಇಲ್ಲ. ಅದು ನಿಜಾನೆ ಅಲ್ವಾ. ಹಾಗೆಯೇ ಇರಲಿ ಬಿಡಿ ಎಂದಿದ್ದಾರೆ.  


ಇದನ್ನೂ ಓದಿ : 'ಅವಳೊಂದಿಗೆ ನಾನೂ ಸತ್ತಿದ್ದೇನೆ'..! ಮಗಳ ಅಗಲಿಕೆಗೆ ವಿಜಯ್ ಆಂಟನಿ ಸಂತಾಪ ಸಂದೇಶ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.