Rakshith Shetty: ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಟ್ರೈಲರ್ ಔಟ್..!
Sapta Sagaradache Ello- Side B Trailer: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ ಆಚಾರ್ ನಟಿಸಿರುವ `ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ)` ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ.
Sapta Sagaradache Ello- Side B: ಹೇಮಂತ್ ಎಂ ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ)' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ ಆಚಾರ್ ನಟಿಸಿದ್ದಾರೆ. ನವೆಂಬರ್ 17 ರಂದು ಕನ್ನಡ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಮೊದಲ ಭಾಗ, ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಎ) , ರಕ್ಷಿತ್ ಪಾತ್ರದ ಮನು ತನ್ನ ಆತುರದ ನಿರ್ಧಾರದಿಂದ ಜೈಲಿಗೆ ಬಂದ ನಂತರ ತನ್ನ ಪ್ರೇಮಿ ಪ್ರಿಯಾ (ರುಕ್ಮಿಣಿ ಪ್ರಬಂಧ) ಜೊತೆ ಮತ್ತೆ ಒಂದಾಗಲು ಸಾಧ್ಯವಾಗದೆ ಕೊನೆಗೊಂಡಿತು. ಚಿತ್ರದಲ್ಲಿ ಪ್ರಿಯಾ ಮದುವೆಯಾಗುವ ಮೂಲಕ ಸಂಬಂಧದಿಂದ ಹಿಂದೆ ಸರಿಯುವುದನ್ನು ಚಿತ್ರ ತೋರಿಸಿದೆ..
ಇದನ್ನೂ ಓದಿ-BBK10: ಬಳೆ ತಂಟೆಗೆ ಹೋದ್ರೆ ಬರೆ ಬೀಳ್ದೇ ಇರುತ್ತಾ? ವಿನಯ್‌ಗೆ ನೀರಿಳಿಸಿದ ಕಿಚ್ಚ ಸುದೀಪ್!
'ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ)' ... ಈಗಾಲಾದರೂ ನದಿ ತನ್ನ ಸಮುದ್ರವನ್ನು ಕಂಡುಕೊಳ್ಳುತ್ತದೆಯೇ? ಅಥವಾ ಎಂದೆಂದಿಗೂ ಅದರ ಹುಡುಕಾಟದಲ್ಲಿ ಅಲೆದಾಡುತ್ತದೆಯೇ? ಎನ್ನುವುದಕ್ಕೆ ಬಿಡುಗಡೆಗೊಂಡ ಟ್ರೈಲರ್ ಉತ್ತರ..
ವರುಣ್ ತೇಜ್, ಲಾವಣ್ಯ ತ್ರಿಪಾಠಿ ಸೇರಿದಂತೆ ಪ್ರೀತಿಸಿ ಮದುವೆಯಾದ ನಟ-ನಟಿಯರಿವರು!
ಎರಡನೇ ಭಾಗದ ಟ್ರೈಲರ್ ಪ್ರಿಯಾಳನ್ನು ಮರೆಯಲು ಮನುವಿನ ಹೋರಾಟವನ್ನು ತೋರಿಸುತ್ತದೆ. ಅವರು ಸುರಭಿ (ಚೈತ್ರ ಜೆ ಆಚಾರ್) ರೊಂದಿಗೆ ಸ್ನೇಹ ಬೆಳೆಸುತ್ತಿರುವುದನ್ನು ಈ ಟ್ರೈಲರ್‌ನಲ್ಲಿ ಕಾಣಬಹುದು, ಆದರೂ ಅವರು ಪ್ರಿಯಾಳ ಹುಡುಕಾಟದಲ್ಲಿದ್ದಾರೆನ್ನುವುದನ್ನು ಸಹ ಆ ವಿಡಿಯೋ ತಿಳಿಸುತ್ತದೆ.. ಟ್ರೇಲರ್ ಚಿತ್ರವು ತೀವ್ರವಾದ ಹಿಂಸಾತ್ಮಕವಾಗಿದೆ ಎಂಬ ಸುಳಿವು ನೀಡುತ್ತದೆ, ಮನು ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ.. ಮತ್ತೊಬ್ಬರನ್ನು ಪ್ರೀತಿಸಿ ಆ ಪ್ರೀತಿಯನ್ನಾದರೂ ಉಳಿಸಿಕೊಳ್ಳುತ್ತಾನಾ ಅನ್ನೋದನ್ನು ಕಾದು ನೋಡಬೇಕಿದೆ.
ಇನ್ನು ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಕರಾಗಿದ್ದರೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. ಚಿತ್ರವನ್ನು ರಕ್ಷಿತ್ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ನಿರ್ಮಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.