ದಿ ವಿಲನ್: ಉರಿಯುವ ಗೆಳೆಯರಿಗೊಂದು ಅರಿಯುವ ಪತ್ರ ಬರೆದ ರಕ್ಷಿತಾ ಪ್ರೇಮ್
ಕಳೆದ ವಾರವಷ್ಟೇ ಬಿಡುಗಡೆಯಾದ `ದಿ ವಿಲನ್` ಸಿನಿಮಾ ಥಿಯೇಟರ್ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಒಂದೆಡೆಯಾದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚಾಲ್ತಿಯಲ್ಲಿದೆ. ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಬೆಂಗಳೂರು: ಚಂದನವನದಲ್ಲಿ ಕಳೆದವಾರವಷ್ಟೇ ಅದ್ಧೂರಿಯಾಗಿ ತೆರೆಕಂಡ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್' ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಒಂದೆಡೆಯಾದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚಾಲ್ತಿಯಲ್ಲಿದೆ. ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಾಸಿಟಿವ್ ಹಾಗೂ ನೆಗಟಿವ್ ಕಾಮೆಂಟ್ಗಳು ಬರುತ್ತಲೇ ಇವೆ.
ಟ್ರೋಲಿಗರು ಮನಬಂದಂತೆ ಟ್ರೋಲ್ ಮಾಡುತ್ತಿದ್ದು, ಇದೀಗ ಅವು ವೈರಲ್ ಆಗುತ್ತಿವೆ. ಇವೆಲ್ಲವನ್ನೂ ಗಮನಿಸಿರುವ 'ದಿ ವಿಲನ್' ಚಿತ್ರದ ನಿರ್ದೇಶಕ ಪ್ರೇಮ್ ಪತ್ನಿ ಹಾಗೂ ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್, ಮನಬಂದಂತೆ ಚಿತ್ರದ ಬಗ್ಗೆ ಟ್ರೋಲ್ ಮಾಡಿರುವವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿರುವ ರಕ್ಷಿತಾ... ಉರ್ಕೊಂಡು, ಸಿಲ್ಲಿಯಾಗಿ, ಪ್ರಶ್ನೆ, ಗೇಲಿ, ಟೀಕೆ, ವಿಮರ್ಶೆ, ಮಾಡ್ಕೊಂಡ್ ಉರಿಯುವ ಗೆಳೆಯರಿಗೊಂದು ಅರಿಯುವ ಪತ್ರ… ಎಂದು ಹೇಳುವ ಮೂಲಕ ತಮ್ಮ ಬರಹ ಆರಂಭಿಸಿದ್ದು, ಯಾರೂ ಇಲ್ಲದೇ, ಯಾವುದೂ ಇಲ್ಲದೇ ಚಿತ್ರರಂಗದ ಹಿನ್ನಲೆ ಯಿಲ್ಲದೆ ಗಾಡ್ ಫಾದರ್ ಇಲ್ಲದೇ, ಟೆಂಟ್ ನಲ್ಲಿ ಸಿನಿಮಾ ನೋಡಿ ಕನಸು ಕಂಡು ಹಳ್ಳಿಯ ಸಾಮಾನ್ಯ ಹುಡುಗನೊಬ್ಬ, ಕೆಂಪು ಬಸ್ ಹತ್ತಿ ಬೆಂಗಳೂರಿಗೆ ಬಂದು, ಸಿನಿಮಾ ಇಂಡಸ್ಟ್ರೀಲಿ ನೊಂದು, ಬೆಂದು, ನಿರ್ದೇಶಕನಾಗಿದ್ದು ಕೂಡಾ ಪ್ರೇಮ್ ನ ಪ್ರತಿಭೆ, ಸಾಧನೆ ಎಂದು ಉಲ್ಲೇಖಿಸಿದ್ದಾರೆ.
ರಕ್ಷಿತಾ ತಮ್ಮ ಪತಿ ಪ್ರೇಮ್ ಪರವಾಗಿ ಬರೆದಿರುವ ಪತ್ರ ಇಲ್ಲಿದೆ ನೋಡಿ...