ಬೆಂಗಳೂರು: ಮಾಡೆಲಿಂಗ್​ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹಿತ್​ 'ರಕ್ತಾಕ್ಷ' ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್​ ಬ್ಯಾನರ್​ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 'ರಕ್ತಾಕ್ಷ' ಸಿನಿಮಾವನ್ನು ವಾಸುದೇವ ಎಸ್.ಎನ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ ಹಾಗೆ ವಾಸುದೇವ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಚೊಚ್ಚಲ ಸಿನಿಮಾವಿದು. ಇದೀಗ ಈ ಸಿನಿಮಾದ ಬೆಂಕಿ ಜವಾರಿ ಸಾಂಗ್ ಬರ್ತಿದೆ, ಎಲ್ಲರೂ ಸ್ಟೆಪ್ ಹಾಕೋಕೆ ರೆಡಿ ಆಗ್ರಿ ಅಂತಾ ಸಿನಿಮಾ ಟೀಂ ಹೇಳುತ್ತಿದೆ.


COMMERCIAL BREAK
SCROLL TO CONTINUE READING

ವಿಭಿನ್ನ ಟೈಟಲ್ ಹಾಗೂ ಕಂಟೆಂಟ್‍ನಿಂದ ಸದ್ದು ಮಾಡುತ್ತಿರುವ 'ರಕ್ತಾಕ್ಷ' ಸಿನಿಮಾದ ಡಾನ್ಸ್ ನಂಬರ್ ಉತ್ತರ ಕರ್ನಾಟಕ ಶೈಲಿಯ 'ಜವಾರಿ' ಹಾಡು ಇದೇ 28ರಂದು ಸಂಜೆ 7.44ಕ್ಕೆ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ರೋಹಿತ್​ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸ್ಯಾಂಡಲ್​ವುಡ್​ಗೆ ಟ್ಯಾಲೆಂಟ್​ ಇರುವ ಪ್ರತಿಭೆಗಳ ಆಗಮನವಾಗುತ್ತಿದೆ. ಒಳ್ಳೆ ಕಂಟೆಂಟ್​​ನೊಂದಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾಡೆಲಿಂಗ್​ ಕ್ಷೇತ್ರದಲ್ಲಿ ತನ್ನದೇ ಟ್ಯಾಲೆಂಟ್​ ತೋರಿಸಿದ್ದ ರೋಹಿತ್​ ಎಂಬ ಯುವನಟ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.


ಇದನ್ನೂ ಓದಿ: ನಾಗಚೈತನ್ಯ ಜೊತೆ ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದ ನಟಿ


ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಆರಂಭದಿಂದಲೂ ಟೈಟಲ್​ ಹಾಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಿನಿಮಾ 'ರಕ್ತಾಕ್ಷ'. ಈಗಾಗಲೇ ಚಿತ್ರದ ಆ್ಯಕ್ಷನ್​ ಟೀಸರ್​ ರಿಲೀಸ್​ ಆಗಿದೆ. ಪಂಚಿಂಗ್​ ಡೈಲಾಗ್​ ಹೊಡೆಯುತ್ತಾ ನಾಯಕ ರೋಹಿತ್​ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸಿಕ್ಸ್​ ಪ್ಯಾಕ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.


ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ಪ್ರಮೋದ್​ ಶೆಟ್ಟಿ ಎದುರು ತೊಡೆತಟ್ಟಿ ರಗಡ್​ ಲುಕ್​​ನಲ್ಲಿ ಅಬ್ಬರಿಸಿದ್ದಾರೆ. ಕಿಲ್ಲಿಂಗ್​ ಲುಕ್​ ಮೂಲಕವೇ ಗಮನ ಸೆಳೆದಿರುವ ಈ ಯುವನಟ ರೋಹಿತ್​ ಕನ್ನಡ ಚಿತ್ರರಂಗದ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್​ ಅಂತೂ ಪ್ರೇಕ್ಷಕರನ್ನು ಸೆಳೆದಿದ್ದು, ಧೀರೇಂದ್ರ ದಾಸ್​ ಸಂಗೀತ ಸಖತ್​ ಕಿಕ್​ ಕೊಟ್ಟಿದೆ. ರೋಹಿತ್​ ಜೊತೆಗೆ ಕೆಜಿಎಫ್​ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್​, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ.


ಇದನ್ನೂ ಓದಿ: ಫೋಟೋಸ್‌ ವೈರಲ್‌ : ಹಸಿರು ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ


ಇನ್ನೂ ಖಳನಾಯಕನ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಪ್ರಮೋದ್​ ಶೆಟ್ಟಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ‘ರಕ್ತಾಕ್ಷ’ ಟೈಟಲ್ ಟ್ರ್ಯಾಕ್​ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ‘ರಕ್ತಾಕ್ಷ’ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದ್ದು, ಸಿನಿ ಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.