Rakul preet singh : ಪ್ರೇಕ್ಷಕರನ್ನು ರಂಜಿಸುವ ಜೊತೆ ಅವರಿಗೆ ಶಿಕ್ಷಣ ನೀಡುವ ಉದ್ದೇಶಿತ ಸಿನಿಮಾಗಳು ಇತ್ತೀಚಿಗೆ ಹಚ್ಚಾಗುತ್ತಿವೆ. ಇನ್ನು ಲೈಂಗಿಕ ಶಿಕ್ಷಣ ಮನುಷ್ಯನಿಗೆ ಬಹು ಮುಖ್ಯ ಎಂಬ ಅಂಶವನ್ನು ಹೇಳಲು ನಟಿ ರಾಕುಲ್‌ ಪ್ರೀತ್‌ ಸಿಂಗ್‌ ʼಛತ್ರಿವಾಲಿʼ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈಗಾಗಲೇ ಟ್ರೇಲರ್‌ ಮೂಲಕ ಛತ್ರಿವಾಲಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದೀಗ WION ಜೊತೆ ಮಾತನಾಡಿರುವ ರಾಕುಲ್‌ ತಮ್ಮ ಸಿನಿಮಾದ ಬಗ್ಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ʼಛತ್ರಿವಾಲಿʼ ಸಿನಿಮಾದಲ್ಲಿ ಕಾಂಡೋಮ್ ಫ್ಯಾಕ್ಟರಿಯೊಂದರಲ್ಲಿ ಗುಣಮಟ್ಟದ ನಿಯಂತ್ರಣ ಮುಖ್ಯಸ್ಥೆಯಾಗಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಹಿಂದೆಂದೂ ನೋಡಿರದ ಪಾತ್ರದಲ್ಲಿ ರಾಕುಲ್‌ ತರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಪುರುಷರು ಮತ್ತು ಮಹಿಳೆಯರಲ್ಲಿ ಸುರಕ್ಷಿತ ಲೈಂಗಿಕ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ. WION ಜೊತೆ ಮಾತನಾಡುತ್ತ ರಾಕುಲ್‌ ಮಾನಸಿಕ ಮತ್ತು ದೈಹಿಕ ಜೊತೆಗೆ ಲೈಂಗಿಕ ಆರೋಗ್ಯಕ್ಕೆ ಒತ್ತು ನೀಡುವ ಕುರಿತು ಅಭಿಪ್ರಾಯ ತಿಳಿಸಿದ್ದಾರೆ. 


ಇದನ್ನೂ ಓದಿ: ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .! ಕಾರಣ ಇದೇ ನೋಡಿ


ʼಛತ್ರಿವಾಲಿʼ ಚಿತ್ರವು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತದೆ. ಗರ್ಭಪಾತ ಹೆಣ್ಣಿನ ದೇಹಕ್ಕೆ ಎಷ್ಟು ಸರಿ ಎಂಬುವುದರ ಕುರಿತು ನಾವು ಎಂದಿಗೂ ಮಾತನಾಡುವುದಿಲ್ಲ. ನಮ್ಮ ದೇಶದಲ್ಲಿ ಕೇವಲ 7% ರಷ್ಟು ಜನ ಸುರಕ್ಷಿತ ಲೈಂಗಿಕ ಕ್ರಿಯೇ ನಡೆಸುತ್ತಿದ್ದಾರೆ. ಛತ್ರಿವಾಲಿ ಮುಖ್ಯವಾಗಿ ಲೈಂಗಿಕ ಶಿಕ್ಷಣದ ಕುರಿತು ಮಾತನಾಡುತ್ತದೆ. ಮಹಿಳೆಗೆ 2ಕ್ಕಿಂತ ಹೆಚ್ಚು ಗರ್ಭಪಾತ ಆದ್ರೆ ಅವರ ದೇಹದ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆದ್ದರಿಂದ ಲೈಂಗಿಕ ಶಿಕ್ಷಣ ಬಹುಮುಖ್ಯ. ದೈಹಿಕ ಆರೋಗ್ಯದಂತೆಯೇ ಲೈಂಗಿಕ ಆರೋಗ್ಯ ಮುಖ್ಯವಾಗಿದೆ. ನಾವು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತುಂಬಾ ಗಮನ ಕೊಡುತ್ತೇವೆ. ಆದರೆ, ಲೈಂಗಿಕ ಆರೋಗ್ಯವನ್ನು ಮರೆತು ಬಿಡುತ್ತೇವೆ. ಆದ್ರೆ ಇದನ್ನು ಕಡೆಗಣಿಸುವಂತಿಲ್ಲ.


13ನೇ ವಯಸ್ಸಿನಲ್ಲಿಯೇ ದೇಹದ ಹಾರ್ಮೋನುಗಳು ಬದಲಾಗುತ್ತವೆ. ಲೈಂಗಿಕತೆ ಕುರಿತು ಕುತೂಹಲ ಹೆಚ್ಚಾಗುತ್ತದೆ. ಶಾಲೆಯಲ್ಲಿ 9 ನೇ ತರಗತಿಯಲ್ಲಿಯೇ ಸಂತಾನೋತ್ಪತ್ತಿ ಮತ್ತು ಇತರ ಅಂಗಗಳ ಪರಿಚಯದ ಅಗತ್ಯವಿದೆ. ಆದ್ರೆ, ಜೀರ್ಣಾಂಗ ವ್ಯವಸ್ಥೆಯ ಕುರಿತು ಕಲಿಯುವ ನಾವು ಸಂತಾನೋತ್ಪತ್ತಿ ಕುರಿತ ಅಧ್ಯಾಯವನ್ನು ಬಿಟ್ಟುಬಿಡಲು ಬಯಸುತ್ತೀವಿ. ನಿಮ್ಮ ದೇಹದ ಪ್ರತಿಯೊಂದು ಭಾಗದ ಬಗ್ಗೆ ನೀವು ಸತ್ಯವಾಗಿ ತಿಳಿದುಕೊಳ್ಳಬೇಕು. ಇದು ಸರಳ ವಿಜ್ಞಾನ ಎಂದು ರಾಕುಲ್‌ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.