Ram charan : ಮೆಗಾ ಪವರ್‌ ಸ್ಟಾರ್‌ ರಾಮ್ ಚರಣ್ ಇತ್ತೀಚೆಗಷ್ಟೇ ಕಡಪಾ ದರ್ಗಾಕ್ಕೆ ಭೇಟಿ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಮ್ ಚರಣ್ ಅವರ ವರ್ತನೆಗೆ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ. ನಟನ ಚಿಕ್ಕಪ್ಪ, ಡಿಸಿಎಂ ಪವನ್‌ ಕಲ್ಯಾಣ್‌ ಸನಾತನ ಧರ್ಮ ಎನ್ನುತ್ತಿರುವಾಗ ರಾಮ್‌ ಈ ರೀತಿ ಮಾಡುವುದು ಸರಿಯೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಹೌದು.. ರಾಮ್ ಚರಣ್ ಇತ್ತೀಚೆಗೆ ಕಡಪಕ್ಕೆ ಹೋಗಿ ಅಲ್ಲಿನ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಅರ್ಪಿಸಿದ್ದರು. ಅಯ್ಯಪ್ಪನ ಮಾಲಾಧಾರಣೆಯಲ್ಲಿ ರಾಮ್ ಚರಣ್ ಇದ್ದದ್ದು ಈ ವಿಚಾರ ವಿವಾದವಾಗಲು ಮುಖ್ಯ ಕಾರಣ. ಅವರು ಸಾಮಾನ್ಯವಾಗಿದ್ದಾಗ ಭೇಟಿ ನೀಡಿದ್ದರೆ ಇಷ್ಟು ವಿವಾದ ಆಗುತ್ತಿರಲಿಲ್ಲ ಎನ್ನುತ್ತಾರೆ ಕೆಲವರು.  


ಇದನ್ನೂ ಓದಿ:"ಈ ಕಾರಣಕ್ಕಾಗಿ ಬಾತ್‌ರೂಮ್‌ನಲ್ಲಿ ಕುಳಿತು ಅಳುತ್ತೇನೆ" : ಶಾರುಖ್‌ ಖಾನ್‌


ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಕರೆಯ ಮೇರೆಗೆ ರಾಮ್ ಚರಣ್ ಕಡಪಾ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಅಯ್ಯಪ್ಪ ಮಾಲಾಧಾರಿಯಾಗಿ ದರ್ಗಾಕ್ಕೆ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ರಾಮ್ ಚರಣ್ ಹಿಂದೂಗಳು ಮತ್ತು ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಕೆಲ ನೆಟಿಜನ್‌ಗಳು ಕಿಡಿಕಾರಿದ್ದಾರೆ.  


ರಾಮ್ ಚರಣ್ ಅವರು ತಮ್ಮ ಧರ್ಮವನ್ನು ಪಾಲಿಸುವ ಜೊತೆಗೆ ಇತರ ಧರ್ಮಗಳನ್ನೂ ಗೌರವಿಸುತ್ತಾರೆ ಎಂದು ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಗಂಡನ ದರ್ಗಾ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಕೆಲವು ನೆಟ್ಟಿಗರು ಮತ್ತು ಅಯ್ಯಪ್ಪ ಭಕ್ತರು ರಾಮ್ ಚರಣ್ ಅವರನ್ನು ಬೆಂಬಲಿಸುತ್ತಿದ್ದಾರೆ. 


ಇದನ್ನೂ ಓದಿ:ಸಿಂಗಪುರದಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಹಬ್ಬ; ಶುಭ ಹಾರೈಸಿದ ಶಿವ ರಾಜಕುಮಾರ್


ಶಬರಿ ಮಲೆಗೆ ಹೋಗುವಾಗ ಅಯ್ಯಪ್ಪ ಮಾಲಾಧಾರಿಗಳು ಕಡ್ಡಾಯವಾಗಿ ವಾವರ್‌ ಎಂಬ ಮುಸ್ಲಿಂ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ದೇವರ ಆಶೀರ್ವಾದ ಪಡೆದ ನಂತರ ಶಬರಿಮಲೆಗೆ ತೆರಳುತ್ತಾರೆ. ಈ ಪದ್ದತಿ ಹಿಂದಿನಿಂದಲೂ ಇದೆ. ಇದರ ನಡುವೆ ರಾಮ್‌ ಚರಣ್‌ ದರ್ಗಾಗೆ ಭೇಟಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ನಟನ ಬೆಂಬಲಿಗರು.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ