ರಾಖಿ ಭಾಯ್ಗೆ ಶಾಕ್ ಕೊಟ್ಟ ಚಿಟ್ಟಿಬಾಬು..! `ಕೆಜಿಎಫ್` ದಾಖಲೆ ಮುರಿದ `ರಂಗಸ್ಥಳಂ`
Rangasthalam vs KGF : ರಾಜಮೌಳಿ ನಿರ್ದೇಶನ `RRR` ದಾಖಲೆ ಮುರಿದು ಸಂಭ್ರಮಿಸುತ್ತಿದ್ದ ಕೆಜಿಎಫ್ ರಾಖಿ ಭಾಯ್ಗೆ ರಂಗಸ್ಥಳಂ ಚಿಟ್ಟಿ ಬಾಬು ಅನಿರೀಕ್ಷಿತವಾಗಿ ಸರ್ಪ್ರೈಸ್ ನೀಡಿದ್ದಾರೆ. ರಾಮ್ ಚರಣ್ ನಟನೆಯ ರಂಗಸ್ಥಳಂ ಸಿನಿಮಾ `ಕೆಜಿಎಫ್` ದಾಖಲೆಗಳನ್ನು ಬ್ರೇಕ್ ಮಾಡಿದೆ.
Rangasthalam break KGF records : ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ಮತ್ತು ಸಮಂತಾ ಅಭಿನಯದ ‘ರಂಗಸ್ಥಳಂ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಅಲ್ಲದೆ, ಕನ್ನಡ ಚಿತ್ರ 'ಕೆಜಿಎಫ್' ಕೂಡ ದೇಶಾದ್ಯಂತ ಬ್ಲಾಕ್ ಬಸ್ಟರ್ ಕಲೆಕ್ಷನ್ ಮಾಡುವ ಮೂಲಕ ದಕ್ಷಿಣದ ಚಿತ್ರಗಳ ಬಲವನ್ನು ತೋರಿಸಿತ್ತು. ಆದರೆ ಇದೀಗ ಸಿನಿಮಾ ಕೆಜಿಎಫ್ ದಾಖಲೆ ಮುರಿಯುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
ಹೌದು.. ರಾಮ್ ಚರಣ್ ಮತ್ತು ಸಮಂತಾ ನಟನೆಯ 'ರಂಗಸ್ಥಳಂ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದಿಲ್ಲ. 'ಕೆಜಿಎಫ್' ಮಾತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಕಲೆಕ್ಷನ್ ನಲ್ಲೂ 'ಕೆಜಿಎಫ್' ಟಾಪ್ ಇತ್ತು. ಇದೆಲ್ಲ ನಡೆದಿದ್ದು ಭಾರತದಲ್ಲಿ ಮಾತ್ರ. ಇದೀಗ ವಿದೇಶದಲ್ಲಿ ರಂಗಸ್ಥಳಂ ಸಿನಿಮಾ ಅಗ್ರಸ್ಥಾನದಲ್ಲಿದ್ದು, ಜಪಾನ್‌ನಲ್ಲಿ ರಿಲೀಸ್ ಆಗಿ ಕೆಜಿಎಫ್ ದಾಖಲೆಗಳನ್ನು ಮುರಿದಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ತಮ್ಮನ ʼಬೇಬಿʼ ನೋಡುವಾಗ ಕಣ್ಣಲ್ಲಿ ನೀರು ಬಂತು..! ರಶ್ಮಿಕಾ ಮಂದಣ್ಣ
ತೆಲುಗು ರಾಜ್ಯಗಳಲ್ಲಿ 'ರಂಗಸ್ಥಳಂ' ಚಿತ್ರದಲ್ಲಿನ ರಾಮ್ ಚರಣ್ ಚಿಟ್ಟಿಬಾಬು ಪಾತ್ರ ಪ್ರೇಕ್ಷಕರನ್ನು ತುಂಬಾ ಮೆಚ್ಚಿಸಿತ್ತು. ಇದೀಗ ಚಿಟ್ಟಿಬಾಬು ಜಪಾನ್ ಪ್ರೇಕ್ಷಕರಿಗೂ ತುಂಬಾ ಇಷ್ಟವಾಗಿದ್ದಾರೆ. ಇದಕ್ಕೆ ಮೂಲ ಕಾರಣ ಅಂದ್ರೆ 'RRR' ಸಿನಿಮಾ. ಹೌದು.. ರಾಜಮೌಳಿ ನಿರ್ದೇಶನದ ಸಿನಿಮಾ ಇತ್ತೀಚೆಗಷ್ಟೇ ಜಪಾನ್ ನಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಅಲ್ಲಿ 'RRR' ಟ್ರೆಂಡ್ ಕ್ರಿಯೇಟ್ ಮಾಡಿತ್ತು.
ಜಪಾನ್‌ನಲ್ಲಿ ರಾಮ್ ಚರಣ್ ಮತ್ತು ಎನ್‌ಟಿಆರ್ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿರ್ಮಾಪಕರು ಶುಕ್ರವಾರ 'ರಂಗಸ್ಥಳಂ' ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಅದೇ ದಿನ ಯಶ್ ಅಭಿನಯದ 'ಕೆಜಿಎಫ್' ಕೂಡ ಬಿಡುಗಡೆಯಾಗಿದೆ. ಆದರೆ, ಅಲ್ಲಿನ ಪ್ರೇಕ್ಷಕರು ರಾಮ್ ಚರಣ್‌ಗೆ ಜೈಕಾರ ಹಾಕಿದ್ದಾರೆ. ರಾಖಿಭಾಯ್‌ಗಿಂತಲೂ ಹೆಚ್ಚು ಕಲೆಕ್ಷನ್‌ಗಳನ್ನು ಗಳಿಸಿ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ: ಎನ್‌ಟಿಆರ್ 'ದೇವರ' ಚಿತ್ರದ ರೋಚಕ ಸಾಹಸ ದೃಶ್ಯಗಳ ಶೂಟಿಂಗ್ ಕಂಪ್ಲೀಟ್..! ಫೋಟೋ ವೈರಲ್
'RRR' ನಂತರ ರಾಮ್ ಚರಣ್ ನಾಯಕನಾಗಿ ಸೋಲೋ ಹೀರೋ ಆಗಿರುವ ಚಿತ್ರ 'ಗೇಮ್ ಚೇಂಜರ್'. ಶಂಕರ್ ನಿರ್ದೇಶನದಲ್ಲಿ ಕಿಯಾರಾ ಅಡ್ವಾಣಿ ನಾಯಕಿ. ಇತ್ತೀಚೆಗಷ್ಟೇ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದರಲ್ಲಿ ಚರಣ್ ಅವರ ಹೇರ್ ಸ್ಟೈಲ್ ಹೊಸದು. ಟೈಟಲ್ ಮೋಷನ್ ಪೋಸ್ಟರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತ ಯಶ್ ಸಹ 'ಕೆಜಿಎಫ್ 2' ಹಿಟ್ ನಂತರ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.