RGV on Naatu Naatu song : ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ತಮ್ಮ ನೇರ ಮಾತುಗಳಿಂದ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ನಟ ನಟಿಯರ ಬಗ್ಗೆ ನೀಡುವ ಅವರ ಹೇಳಿಕೆ ಒಂದಷ್ಟು ಸಲ ಗಲಾಟೆಗೆ ದಾರಿ ಮಾಡಿಕೊಡುತ್ತವೆ. ಅಲ್ಲದೆ, ಇತ್ತೀಚಿಗೆ ಅವರು ಯುವತಿಯರ ಜೊತೆ ನಡೆಸಿದ ಸಂದರ್ಶನದ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ಇದೀಗ ರಾಮ್‌ ಗೋಪಾಲ್‌ವರ್ಮಾ ಅವರು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂದರ್ಶನ ನಡೆಸಿದ ವಿಡಿಯೋ ಒಂದು ಸಖತ್‌ ಕ್ಯೂರಿಯಾಸಿಟಿ ಮೂಡಿಸುತ್ತಿದೆ..


COMMERCIAL BREAK
SCROLL TO CONTINUE READING

ಹೌದು.. ಮೊದಲ ಬಾರಿಗೆ ಆರ್‌ಜಿವಿ ಸಂದರ್ಶನ ಮಾಡಿದ್ದಾರೆ. ಅದು ಆರ್‌ಆರ್‌ಆರ್‌ ಮೂಲಕ ನಾಟು ನಾಟು ಎಂಬ ಹಿಟ್‌ ಗೀತೆ ಕೊಟ್ಟು ಆಸ್ಕರ್‌ ಪ್ರಶಸ್ತಿ ಪಡೆದ ಖ್ಯಾತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿಯವರದ್ದು. ಇನ್ನು ಇಂಟರ್‌ವ್ಯೂನಲ್ಲಿ ವರ್ಮಾ ಕೇಳುವ ನೇರ ಪ್ರಶ್ನೆಗಳಿಗೆ ಮುಖಕ್ಕೆ ಹೊಡೆದಂತೆ ಕೀರವಾಣಿಯವರು ಉತ್ತರ ನೀಡಿದ್ದು, ಸಂದರ್ಶನ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್‌ ಆಗುತ್ತಿದೆ.


Slman Khan : ʼಜಾನ್‌ʼ ಅಂತ ಕರೆಯಬೇಕಾಗಿದ್ದವಳು ಈಗ ʼಭಾಯ್‌ʼ ಅಂತೀದಾಳೆ..! 


ಆರ್‌ಜಿವಿ ಸಂದರ್ಶನದ ವಿಡಿಯೋ ಟೀಸರ್‌ ಮಾತ್ರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವರ್ಮಾ ಕೀರವಾಣಿ ಅವರಿಗೆ ಕೆಲವೊಂದಿಷ್ಟು ನೇರ ಪ್ರಶ್ನೆಗಳನ್ನು ಕೇಳಿದ್ದಾರೆ. ʼಆಸ್ಕರ್ ಪ್ರಶಸ್ತಿ ಪಡೆದಿದ್ದಕ್ಕೆ ನಾನು ನಿಮ್ಮನ್ನು ಅಭಿನಂದಿಸುವುದಿಲ್ಲ ಎಂದ ರಾಮ್‌ ಪ್ರಶ್ನೆಗೆ, ನಾನು ನಿಮ್ಮಿಂದ ಅಭಿನಂದನೆಯನ್ನೂ ನಿರೀಕ್ಷಿಸುವುದಿಲ್ಲ ಎಂದು ಕೀರವಾಣಿ ಕೌಂಟರ್ ಕೊಟ್ಟಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಆರ್‌ಜಿವಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.


ಅಲ್ಲದೆ, ನಾಟು ನಾಟು ಹಾಡನ್ನು ನಿಮ್ಮ ಹೊರತಾಗಿ ಬೇರೆ ಸಂಗೀತ ನಿರ್ದೇಶಕರು ಮಾಡಿದ್ದರೆ.. ಅವರು ಆಸ್ಕರ್ ಗೆದ್ದರೆ.. ಆಗ ನಿಮಗೆ ಏನನ್ನಿಸುತ್ತದೆ..? ಎಂಬ ಪ್ರಶ್ನೆಯನ್ನು ಕೀರವಾಣಿಯವರಿಗೆ ಕೇಳಲಾಗಿದೆ. ದೇಶದಿಂದ ದೇಶಕ್ಕೆ ಆಸ್ಕರ್‌ಗಳ ಮಹತ್ವ ಪಡೆಯುತ್ತೆ ಎಂದು ನೀವು ಭಾವಿಸುತ್ತೀರಾ? ಎಂದು ನೇರವಾಗಿ ಆರ್‌ಜಿವಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್, ಗೋಲ್ಡನ್ ಗ್ಲೋಬ್ಸ್‌ ಪ್ರಶಸ್ತಿ ಪಡೆದಿದ್ದೀರಾ.. ನಿಮ್ಮ ವೃತ್ತಿಜೀವನದುದ್ದಕ್ಕೂ ನೀವು ರಚಿಸಿದ ಹಾಡುಗಳೊಂದಿಗೆ ಅದೇ ಭಾವನೆಯನ್ನು ಹೊಂದಿದ್ದೀರಾ? ಎಂದು ವರ್ಮಾ ಪ್ರಶ್ನಿಸಿದರು. ಸದ್ಯ ಸಂದರ್ಶನದ ಟೀಸರ್‌ನಲ್ಲಿ ಆರ್‌ಜಿವಿ ಪ್ರಶ್ನೆಗಳನ್ನು ಹೆಚ್ಚಾಗಿ ತೋರಿಸಲಾಗಿದ್ದು, ವರ್ಮಾ ಪೈರ್‌ ಪ್ರಶ್ನೆಗೆ ಕೀರವಾಣಿಯವರು ಯಾವ ರೀತಿ ಉತ್ತರಿಸುತ್ತಾರೆ ಅಂತ ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.