Ramana Avatara Release Date: ಸ್ಯಾಂಡಲ್‌ವುಡ್‌ ನಟ ರಿಷಿ ಅಭಿನಯದ ಬಹುನಿರೀಕ್ಷಿತ ʻರಾಮನ ಅವತಾರʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಈ ಚಿತ್ರ ಇದೇ ವರ್ಷ ಫೆಬ್ರವರಿಯಲ್ಲಿಯೇ ತೆರೆಗೆ ಬರಬೇಕಿತ್ತು. ಆದರೆ ಈ ವೇಳೆ ಹಲವಾರು ಕನ್ನಡ ಸಿನಿಮಾ ಬಿಡುಗಡೆ ಮಾಡಲು ಘೋಷಣೆಯಾಗಿತ್ತು. ಇದರಿಂದ ರಿಲೀಸ್  ಡೇಟ್‌ ಮುಂದೂಡಲಾಗಿತ್ತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಫೆಬ್ರವರಿಯಲ್ಲಿ ಕೆಲವು ಕನ್ನಡ ಚಿತ್ರಗಳು ಬಿಡುಗಡೆಯಾದರೆ, ಇದೆಲ್ಲಾ ಸರಿ ಹೋಗಿದೆ ಅನ್ನೋ ಅಷ್ಟರಲ್ಲಿ ಐಪಿಎಲ್ ಪಂದ್ಯ ಕೂಡ ಪ್ರಾರಂಭವಾಗಿದೆ. ತದನಂತರ ಚುನಾವಣೆ ಕೂಡ ಬರ್ತಿದ್ದು, ಇವೆಲ್ಲದರ ಮಧ್ಯೆ ರಾಮನ ಅವತಾರ ಸಿನಿಮಾ ಕಳೆದು ಹೋಗಬಾರದೆಂಬ ಕಾರಣದಿಂದ ಈ ಚಿತ್ರದ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಲಾಗಿತ್ತು. ಆದರೆ ಈ ಸಿನಿಮಾದ ನಾಯಕ ನಟ ರಿಷಿ ಇದೀಗ ವಿಶೇಷ ವಿಡಿಯೋ ಮೂಲಕ ಚಿತ್ರದ ಬಿಡಿಗಡೆಯ ದಿನಾಂಕವನ್ನು ತಿಳಿಸಿದ್ದಾರೆ.


 

 

 

 



 

 

 

 

 

 

 

 

 

 

 

A post shared by Rishi (@rishi_actor)


ಇದನ್ನೂ ಓದಿ: ಐಶ್ವರ್ಯಾ ರೈ ಮೊದಲ ಗಂಡ ಅಭಿಷೇಕ್‌ ಬಚ್ಚನ್‌ ಅಲ್ಲ... ಇದು ಎರಡನೇ ಮದುವೆ! ಅಮಿತಾಬ್‌ ಬಚ್ಚನ್‌ ಗೂ ಗೊತ್ತಿತ್ತಂತೆ ಈ ವಿಚಾರ!!


ನಟ ರಿಷಿ ವಿಶೇಷ ರೀಲ್ಸ್‌ ವಿಡಿಯೋದಲ್ಲಿ ಯಾರೋ ನಿಮ್ಮ ಸಿನಿಮಾ ರಿಲೀಸ್ ಯಾವಾಗ ಅಂತ ಕೇಳ್ತಾರೆ. ಅದಕ್ಕೆ ರಿಷಿ ಸಿಟ್ಟು ಮಾಡಿಕೊಂಡು ಹೇಳಿದ್ದೇವೆ ಅಲ್ವೇ? ಹೇಳಿದ್ಮೇಲೂ ಕೇಳ್ತೀರಾ ಅಂತ ಹೊಡೆಯೋಕೆ ಹೋಗ್ತಾರೆ. ನಂತರ ಈ ನಟ ಕೊನೆಯಲ್ಲಿ ಮೇ ತಿಂಗಳ 10 ರಂದು ನಾವು ಬರ್ತಾ ಇದ್ದೇವೆ ಅಂತ ಹೇಳಿಕೊಳ್ಳುತ್ತಾರೆ. ಈ ರೀತಿ ರಿಷಿ ತಮ್ಮ ಚಿತ್ರದ ರಿಲೀಸ್‌ ದಿನಾಂಕವನ್ನು  ರಿವೀಲ್‌ ಮಾಡಿದ್ದಾರೆ. ಈ ವಿಡಿಯೋವನ್ನು ರಿಷಿ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.


ಈಗಾಗಲೇ ರಾಮನ ಅವತಾರ ಸಿನಿಮಾದ ಟ್ರೇಲರ್‌ ಹಾಗೂ ಹಾಡುಗಳು ರಿಲೀಸ್‌ ಆಗ ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ನಟ ರಿಷಿಯ ಪಾತ್ರದ ಪರಿಚಯವಾಗಿ ಇಡೀ ಚಿತ್ರದ ಪೂರ್ತಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಗೊತ್ತಾಗಿದೆ. ಈ ಸಿನಿಮಾಗೆ ಡೈರೆಕ್ಟರ್‌ ವಿಕಾಸ್ ಪಂಪಾಪತಿ ಆಕ್ಷನ್‌ ಕಟ್‌ ಹೇಳಿದ್ದು, ಮ್ಯೂಸಿಕ್‌ ಡೈರೆಕ್ಟರ್ ಜುಡಾ ಸ್ಯಾಂಡಿ ಸಂಗೀತ ‌ ನೀಡಿದ್ದಾರೆ. ಈ ಚಿತ್ರದಲ್ಲಿ ರಿಷಿ ಜೊತೆಗೆ ಶುಭ್ರ ಅಯ್ಯಪ್, ಪ್ರಣಿತಾ ಶುಭಾಷ್, ಅರುಣ್ ಸಾಗರ್ ಅಂತಹ ದೊಡ್ಡ ತಾರಾ ಬಳಗವೇ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.