ನವದೆಹಲಿ: ರಮಾನಂದ್ ಸಾಗರ್ ಅವರ ಅತ್ಯಂತ ಜನಪ್ರಿಯ ಪೌರಾಣಿಕ ಧಾರಾವಾಹಿ ‘ರಾಮಾಯಣ’(Ramayan)ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದ ಅರವಿಂದ ತ್ರಿವೇದಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮಂಗಳವಾರ ರಾತ್ರಿ ಅರವಿಂದರಿಗೆ ಹೃದಯಾಘಾತವಾಗಿದ್ದು, ನಂತರ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅರವಿಂದ ತ್ರಿವೇದಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣದಿಂದ ಅವರು ಬಹಳ ಸಮಯ ಹಾಸಿಗೆಯ ಮೇಲೆ ಇರಬೇಕಾಗಿತ್ತು.


COMMERCIAL BREAK
SCROLL TO CONTINUE READING

ಅರವಿಂದ ತ್ರಿವೇದಿ ವಿಧಿವಶ


ಅರವಿಂದ ತ್ರಿವೇದಿ(Arvind Trivedi) ವಿಧಿವಶರಾಗಿರುವ ಸುದ್ದಿಯನ್ನು ಅವರ ಸೋದರಳಿಯ ಕೌಸ್ತುಭ್ ತ್ರಿವೇದಿ ದೃಢಪಡಿಸಿದ್ದಾರೆ. ‘ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಅರವಿಂದ ತ್ರಿವೇದಿ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಚಾಚಾಜಿ ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ 3 ವರ್ಷಗಳಿಂದ ಅವರ ಆರೋಗ್ಯ ಸ್ವಲ್ಪ ಹದಗೆಡಲು ಆರಂಭಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ಎರಡು-ಮೂರು ಬಾರಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅವರು 1 ತಿಂಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಮಂಗಳವಾರ ರಾತ್ರಿ ಹೃದಯಾಘಾತಕ್ಕೊಳಗಾದರು ಮತ್ತು ಕಾಂಡಿವಾಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳದರು’ ಎಂದು ತಿಳಿಸಿದ್ದಾರೆ.  


ಇದನ್ನೂ ಓದಿ: Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?


ಅನೇಕ ಸಿನಿಮಾ & ಧಾರಾವಾಹಿಗಳಲ್ಲಿ ಅದ್ಭುತ ನಟನೆ


‘ರಾಮಾಯಣ’ ನಂತರ ಅರವಿಂದ ತ್ರಿವೇದಿ ಅನೇಕ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಕೆಲಸ ಮಾಡಿದ್ದರು. ‘ವಿಕ್ರಮ್ ಮತ್ತು ಬೇತಾಳ್ ಹೊರತಾಗಿಯೂ ಹಲವು ಹಿಂದಿ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅರವಿಂದ್ ಅವರ ಅದ್ಭುತ ಅಭಿನಯ ಕಂಡುಬಂದಿದೆ. ರಮಾನಂದ ಸಾಗರ್ ಅವರ ಅತ್ಯಂತ ಜನಪ್ರಿಯ ಪೌರಾಣಿಕ ಧಾರಾವಾಹಿ ‘ರಾಮಾಯಣ’ದಲ್ಲಿನ ಅವರ ರಾವಣ(Ravan)ನ ಪಾತ್ರವು ತ್ರಿವೇದಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇಂದಿಗೂ ಜನರು ಅದೇ ಪಾತ್ರದಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು 300ಕ್ಕೂ ಹೆಚ್ಚು ಗುಜರಾತಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ ಅವರು ಅನೇಕ ಗುಜರಾತಿ ನಾಟಕಗಳಿಗೆ ಕೂಡ ಬಣ್ಣ ಹಚ್ಚಿದ್ದಾರೆ.  


ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದಿದ್ದ ತ್ರಿವೇದಿ


ಅರವಿಂದ ತ್ರಿವೇದಿಯವರಿಗೆ ‘ರಾಮಾಯಣ’ದಲ್ಲಿನ ರಾವಣನ ಪಾತ್ರ ತುಂಬಾ ಖ್ಯಾತಿ(Ramayan Fame Ravan) ತಂದುಕೊಟ್ಟಿತ್ತು. ನಂತರ ಅವರು ಅನೇಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಸಿನಿಮಾದಲ್ಲಿ ಗುರುತಿಸಿಕೊಂಡ ನಂತರ ಅವರು ಬಿಜೆಪಿ ಸೇರಿದ್ದರು. ಬಳಿಕ ಗುಜರಾತಿನ ಸಬರಕಂಠದಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಿದ್ದರು. ರಾವಣನ ಪೌರಾಣಿಕ ಪಾತ್ರದ ಯಶಸ್ಸಿನಿಂದಾಗಿ ಅವರು ಚುನಾವಣೆಯನ್ನೂ ಗೆದ್ದರು. ಅವರು 1991ರಿಂದ 1996 ರವರೆಗೆ ಲೋಕಸಭಾ ಸಂಸದರಾಗಿದ್ದರು.


ಇದನ್ನೂ ಓದಿ: ಬಿಗ್ ಬಾಸ್ ಹಕ್ಕಿಗಳ ಪ್ರಣಯ ಸಮಯ, ಶಿಲ್ಪಾ ತಂಗಿ ಶಮಿತಾಗೆ ಲವ್ ಆಯ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.