Ramesh Aravind : ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತುದ್ದಾರೆ. 'ದೈಜಿ' ಎಂಬ ಶೀರ್ಷಿಕೆ ಇಟ್ಕೊಂಡು ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ʼದೈಜಿʼ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ರವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ 'ಬದ್ಮಾಶ್' ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು. ಚಿತ್ರದ ಶೀರ್ಶಿಕೆ 'ದೈಜಿ' ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು. 


ಇದನ್ನೂ ಓದಿ:ವಿಜಿ-ಸ್ಯಾಮ್‌ಗೆ ಮತ್ತೆ ಸೋಲು...ಮೂರೇ ದಿನಕ್ಕೆ ಥಿಯೇಟರ್‌ಗಳಿಂದ 'ಖುಷಿ' ಮಾಯ!!  


ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜ಼ಾನರ್ ಗೆ ಬರುತ್ತದೆ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ. 


ಚಿತ್ರದ ನಾಯಕಿಗಾಗು ಆಗಲೇ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ ೨೫ ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ. 


ಇದನ್ನೂ ಓದಿ: ಜಗತ್ತೇ ಮೆಚ್ಚಿರುವ ‘ಕಿಂಗ್’ ವಿರಾಟ್ ಕೊಹ್ಲಿಯ ಫೇವರೇಟ್ ಕ್ರಿಕೆಟಿಗ ಯಾರು ಗೊತ್ತಾ?


ಇದು ಬಹುಮುಖ ಪ್ರತಿಭೆಯ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ ಶ್ರೀ ರಮೇಶ್ ಅರವಿಂದ ರವರ 106ನೇ ಚಿತ್ರ. ತನ್ನ ಸಿನಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿಲ್ ಮಿಂಚಿದ ರಮೇಶ್ ರವರ ಸ್ಮರಣೀಯ ಚಿತ್ರಗಳೆಂದರೆ ಅಮೃತವರ್ಶಿಣಿ, ಅಮೆರಿಕ ಅಮೆರಿಕ, ರಾಮ ಶಾಮ ಭಾಮ, ಶಿವಾಜಿ ಸುರತ್ಕಲ್... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 


ತಮಿಳಿನಲ್ಲಿ ಡ್ಯೂಯೆಟ್, ಸತಿ ಲೀಲಾವತಿ, ಪಂಚತಂತಿರಂ, ಉತ್ತಮ ವಿಲ್ಲಿನ್, ತೆಲುಗು ಚಿತ್ರರಂಗದಲ್ಲಿ ಲಿಟಲ್ ಸೋಲ್ಜರ್ಸ್, ಮಲಯಾಳಂ ನಲ್ಲಿ ಅವನ್ ಅನಂತಪದ್ಮನಾಭನ್.. ಹೀಗೆ ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್ ರವರು ದೈಜಿ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ಚಿತ್ರೀಕರಣವನ್ನು ಬಹಳ ಹುಮ್ಮಸ್ಸಿನಿಂದ ಎದುರುನೋಡುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.