Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!
Ramya and Rashmika: ಸ್ಯಾಂಡಲ್ವುಡ್ನ ನಟಿಮಣಿಯರಾದ ಮಾಜಿ ಸಂಸದೆ ರಮ್ಯ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಆದರಿಂದ ಹಿರಿಯ ನಟ ಅನಂತ್ ನಾಗ್ ಕಿಡಿಕಾರಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Ramya And Rashmika Didnʼt Vote: ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಏಪ್ರಿಲ್ 26 ಶುಕ್ರವಾರದಂದು ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಚಂದನವನದ ತಾರೆಯರಾದ ಯಶ್, ರಾಧಿಕಾ ಪಂಡಿತ್, ದರ್ಶನ್, ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಮತಗಟ್ಟೆ ಬಂದು ಮತ ಚಲಾಯಿಸಿದರು. ಆದರೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಮತ್ತು ಮಾಜಿ ಸಂಸದೆ ರಮ್ಯಾ ಮಾತ್ರ ವೀಟಿಂಗ್ ಬೂತ್‌ಗೆ ಬಂದು ಮತ ಹಾಕಿಲ್ಲ.
ಸ್ಯಾಂಡಲ್‌ವುಡ್ ನಟಿ ರಮ್ಯ ಈ ಬಾರಿ ಮಂಡ್ಯದಲ್ಲಿ ಮತದಾನ ಮಾಡುತ್ತಾರೆ ಎಂದು ಅಲ್ಲಿಯ ಜನರು ಕಾಯುತ್ತಿದ್ದರು. ಆದರೆ ಈ ನಟಿ ಮಂಡ್ಯದ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಕೂಡ ವೋಟ್ ಮಾಡಲು ಬರದೆ ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ. ನಟಿ ರಮ್ಯ ಹೆಸರು ಮಂಡ್ಯದ ವಿದ್ಯಾ ನಗರದ ಪಿ ಎಲ್ ಡಿ ಬ್ಯಾಂಕ್ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರಿತ್ತು. ಈಕೆ ಚುನಾವಣೆಯಲ್ಲಿ ಸೋತ ನಂತರ ಮತ ಚಲಾಯಿಸುವುದನ್ನು ಬಿಟ್ಟಿದ್ದಾರೆಂದು ಅನಿಸುತ್ತದೆ. ಈ ನಟಿ 2019ರ ಲೋಕಸಭೆ ಹಾಗೂ 2023ರ ವಿಧಾನಸಭೆ ಚುನಾವಣೆಗಳಲ್ಲೂ ಮತದಾನ ಹಕ್ಕು ಚಲಾಯಿಸಿಲ್ಲ.
ಇದನ್ನೂ ಓದಿ: Kalki 2898 AD: ಡಾರ್ಲಿಂಗ್ ʻಕಲ್ಕಿʼ ಬಿಗ್ ಅಪ್‌ಡೇಟ್ ರಿವೀಲ್: ಫೈನಲಿ ರಿಲೀಸ್ ಡೇಟ್ ಫಿಕ್ಸ್!
ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವೋಟ್ ಮಾಡಲು ವಿರಾಜಪೇಟೆಗೆ ಬಂದಿಲ್ಲ. ಕನ್ನಡ ಚಿತ್ರರಂಗದ ಹಲವಾರು ನಟ -ನಟಿಯರು ತಮ್ಮ ತಮ್ಮ ಕ್ಷೇತ್ರಗಳ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಹಾಗೆಯೇ ಮತದಾನ ಪ್ರಾಮುಖ್ಯತೆ ಬಗ್ಗೆ ಕೂಡ ಮಾತನಾಡಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿದರು.
ಮತ್ತೊಂದೆಡೆ ಹಿರಿಯ ನಟ ಅನಂತ್ ನಾಗ್ ಯಾರು ಮತ ಹಾಕಲು ಬರೋದಿಲ್ವೋ ಅವರ ಹೆಸರನ್ನು ಡಿಲೀಟ್ ಮಾಡಿ. ನಾವು ಯಾಕೆ ಅವರ ಬಗ್ಗೆ ಮಾತಾಡೋಣ. ಮತ ಚಲಾಯಿಸಿದವರ ಬಗ್ಗೆ ಮಾತಾಡಿ ಎಂದು ಕ್ಲಾಸ್ ತೆಗೆದುಕೊಂಡರು. ಚುನಾವಣೆಯಂದು 4-5 ಬಾರಿ ಇದೇ ನಡೀತಿದ್ದು, ಯಾರು ಬರಲ್ಲ ಅವರನ್ನ ಮರೆತು ಬಿಡಿ. ದೇಶಕ್ಕಾಗಿ ಗಡಿಯಲ್ಲಿ ಸೈನಕರು ಪ್ರಾಣತ್ಯಾಗ ಮಾಡ್ತಾರೆ. ಆದ್ರೆ ನಮ್ಮ ಜನ 5 ವರ್ಷಕ್ಕೊಮ್ಮೆ ಮನೆಯಿಂದ ಹೊರಗೆ ಬಂದು ವೋಟು ಹಾಕೋದಿಲ್ಲ ಅಂದ್ರೆ, ಅಂತವರ ಹೆಸರನ್ನು ಲಿಸ್ಟ್‌ನಿಂದ ತೆಗೆದುಹಾಕಿ ಎಂದು ಕಿಡಿಕಾರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.