ರಮ್ಯಾ ಕ್ಯಾಂಟೀನ್ ಬಗ್ಗೆ ಶ್ಲಾಘಿಸಿದ ರಮ್ಯಾ!
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಮ್ಯ ಸ್ಪರ್ಧಿಸುತ್ತಾರೆ.
ಇತ್ತೀಚಿಗಷ್ಟೇ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೆಸರಿನಲ್ಲಿ ತೆರೆಯಲಾದ ಕು. ರಮ್ಯಾ ಕ್ಯಾಂಟೀನ್ ಬಗ್ಗೆ ರಮ್ಯಾ ತಮ್ಮ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತಮ್ಮ ತವರು ಜಿಲ್ಲೆಯಲ್ಲಿ ರಘು ಎಂಬ ಅಭಿಮಾನಿ ಒಬ್ಬರು ಈ ಕ್ಯಾಂಟೀನ್ ತೆರೆದಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಮ್ಯ, ಸಮಯ ಸಿಕ್ಕಾಗ ಕ್ಯಾಂಟೀನ್ ಗೆ ಭೇಟಿ ನೀಡಿ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಮ್ಯ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಇಂತಹ ಒಂದು ಬೆಳವಣಿಗೆ ನಿಜಕ್ಕೂ ರಮ್ಯರಿಗೆ ಸ್ಪೂರ್ತಿದಾಯಕವಾಗಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಜೆಡಿಎಸ್ ಎಂಎಲ್ಸಿ ಶರವಣ 'ಅಪ್ಪಾಜಿ ಕ್ಯಾಂಟೀನ್' ತೆರೆದಿದ್ದರೆ, ಎಂಎಲ್ಎ ನಾರಾಯಣಸ್ವಾಮಿ ಅವರು 'ಸ್ವಾಮಿ ಕ್ಯಾಂಟೀನ್' ಅನ್ನು ತೆರೆದಿದ್ದರು. ಜನರಿಗೆ ಕೈಗೆಟುಕುವ ದರದಲ್ಲಿ ಊಟ ಸಿಗಲೆಂದು ಸರ್ಕಾರದ ವತಿಯಿಂದ 'ಇಂದಿರಾ ಕ್ಯಾಂಟೀನ್' ಅನ್ನು ತೆರೆಯಲಾಗಿದೆ.