ರಮ್ಯಾ ಕೃಷ್ಣ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ.. ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಇದು !?
Ramya Krishna Remuneration: ಕಣ್ಣುಗಳಿಂದಲೇ ಜನರ ಮನಸೆಳೆಯುವ ಅದ್ಭುತ ನಟಿ. ಯಾವುದೇ ಪಾತ್ರಕ್ಕೆ ತನ್ನದೇ ಆದ ಅಭಿನಯದಿಂದ ಜೀವ ತುಂಬುವ ನಟಿ.
Ramya Krishna Net Worth: ರಮ್ಯಾ ಕೃಷ್ಣ ಚೆಂದುಳ್ಳಿ ಚೆಲುವೆ. ಸೌತ್ ಸಿನಿಪ್ರೇಮಿಗಳ ಹೃದಯದರಸಿ. 90 ರ ದಶಕದ ಈ ಸುಂದರಿ ಇಂದಿಗೂ ತನ್ನ ಜನರ ಹಾಟ್ ಫೆವರೇಟ್ ಆಗೇ ಉಳಿದಿದ್ದಾರೆ. ಕಣ್ಣುಗಳಿಂದಲೇ ಜನರ ಮನಸೆಳೆಯುವ ಅದ್ಭುತ ನಟಿ. ಯಾವುದೇ ಪಾತ್ರಕ್ಕೆ ತನ್ನದೇ ಆದ ಅಭಿನಯದಿಂದ ಜೀವ ತುಂಬುವ ನಟಿ.
ಸೆಪ್ಟೆಂಬರ್ 15, 1967 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣ 1990 ರಿಂದ 2000 ರವರೆಗೆ ಸುಮಾರು ಒಂದು ದಶಕದ ಕಾಲ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಎಂಟನೇ ತರಗತಿಯಲ್ಲಿ ಓದುವಾಗಲೇ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದೇಕೆ?; ಇದೇ ನೋಡಿ ಅಸಲಿ ಕಾರಣ!
ಕೇವಲ ನಾಯಕಿಯಾಗಿ ಮಾತ್ರವಲ್ಲ ರಮ್ಯಾ ಕೃಷ್ಣ ಅವರ ವಿಲನ್ ಪಾತ್ರಗಳೂ ಜನಪ್ರಿಯವಾಗಿವೆ. ನರಸಿಂಹ, ನೀಲಾಂಬರಿ ಹೀಗೆ ಹಲವು ಅದ್ಭುತ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದರು. ಈ ಚಿತ್ರಗಳು ರಮ್ಯಾ ಕೃಷ್ಣ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಸದ್ಯ ರಮ್ಯಾ ಕೃಷ್ಣ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ. ರಮ್ಯಾ ಕೃಷ್ಣ 30 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ರಾಜಮೌಳಿ ಜೋಡಿಯ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ವಿಶ್ವಾದ್ಯಂತ ಮನ್ನಣೆ ಗಳಿಸಿತು.
ಇದನ್ನೂ ಓದಿ: Renukaswamy murder case: ಇವರೇ ನೋಡಿ ನಟ ದರ್ಶನ್ ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ!
ವರದಿಗಳ ಪ್ರಕಾರ, ರಮ್ಯಾ ಕೃಷ್ಣ ಅವರ ಒಟ್ಟು ಆಸ್ತಿ 90 ಕೋಟಿ ರೂಪಾಯಿ. ಈಗಿನ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಹೌದು. ರಮ್ಯಾ ಕೃಷ್ಣ ಪ್ರತಿ ಚಿತ್ರಕ್ಕೆ 3 ರಿಂದ 4 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ. ನಿರ್ದೇಶಕ ಕೃಷ್ಣ ವಂಶಿ ಅವರನ್ನು ರಮ್ಯಾ ಕೃಷ್ಣ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.