Ramya - Rashmika Mandanna: ರಶ್ಮಿಕಾ ಮಂದಣ್ಣ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ. ಸೌತ್ ನಟಿ ರಶ್ಮಿಕಾ ಮಂದಣ್ಣ ಆಗಾಗ ಟ್ರೋಲ್ ಆಗುತ್ತಾರೆ. ಈ ವೇಳೆ ನಟಿ ಟ್ರೋಲರ್‌ಗಳಿಂದ ತೀವ್ರ ಅಸಮಾಧಾನಗೊಂಡಿದ್ದು, ಕೆಲ ದಿನಗಳ ಹಿಂದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಟಿಪ್ಪಣಿ ಬರೆದಿದ್ದರು. "ಕಳೆದ ಕೆಲವು ಸಮಯದಿಂದ ಕೆಲವು ವಿಷಯಗಳು ನನ್ನನ್ನು ಕಾಡುತ್ತಿವೆ. ಅದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ, ಬಹಳಷ್ಟು ದ್ವೇಷವನ್ನು ಎದುರಿಸುತ್ತಿದ್ದೇನೆ. ನನ್ನ ಈ ಟಿಪ್ಪಣಿ ನಿಜವಾಗಿಯೂ ಬಹಳಷ್ಟು ಟ್ರೋಲ್‌ಗಳು ಮತ್ತು ನಕಾರಾತ್ಮಕತೆಗೆ ಪಂಚಿಂಗ್ ಬ್ಯಾಗ್ ಆಗಿದೆ" ಎಂದು ರಶ್ಮಿಕಾ ಬರೆದುಕೊಂಡಿದ್ದರು. ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಇದೀಗ ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಶ್ಮಿಕಾ ಅವರನ್ನು ರಮ್ಯಾ ಬೆಂಬಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Shriya Saran Video: ನಟಿ ಶ್ರಿಯಾ ಶರಣ್‌ ಬಾತ್​ರೂಮ್ ವಿಡಿಯೋ ವೈರಲ್‌! ಬ್ಯೂಟಿಗೆ ಬೋಲ್ಡ್‌ ಆದ ಫ್ಯಾನ್ಸ್‌


ರಶ್ಮಿಕಾ ಅವರ ಈ ಪೋಸ್ಟ್‌ಗೆ ಅನೇಕ ಸಿನಿತಾರೆಯರು ಬೆಂಬಲ ನೀಡಿದ್ದರು. ಇದೀಗ ನಟಿ ರಮ್ಯಾ ಕೂಡ ರಶ್ಮಿಕಾ ಪರ ಬ್ಯಾಟ್‌ ಬೀಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಶ್ಮಿಕಾ ಅವರ ಪೋಸ್ಟ್ ಅನ್ನು ಹಂಚಿಕೊಂಡ ನಟಿ ರಮ್ಯಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


"ಟ್ರೋಲಿಂಗ್ ನಿರಂತರವಾಗಿದೆ. ಈ ಟ್ರೋಲ್‌ ಸಮಸ್ಯೆ ಎಂದಿಗೂ ನಿಲ್ಲಲ್ಲ. ಮತ್ತೊಬ್ಬರ ಜೀವನದ ಬಗ್ಗೆ ಕಾಮೆಂಟ್‌ ಮಾಡುವುದು ತಪ್ಪು. ಸಂದರ್ಭಗಳ ಮೂಲಕ ಹಾದು ಹೋಗುವ ವ್ಯಕ್ತಿಗೆ ಮಾತ್ರ ಅದು ಏನು ಎಂದು ತಿಳಿದಿದೆ. ಅವಳನ್ನು ಬಿಡಿ" ಎಂದು ರಮ್ಯಾ ಬರೆದುಕೊಂಡಿದ್ದಾರೆ. 


ಇದನ್ನೂ ಓದಿ : ನಟ ದಿಗಂತ್, ಅನಂತ್ ನಾಗ್ ಅವ್ರಿಗೆ ಮೊಮ್ಮಗನಾಗ್ತಾನೆ ಗೊತ್ತಾ...?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.