ನವದೆಹಲಿ: ದಕ್ಷಿಣ ಸೂಪರ್ ಸ್ಟಾರ್ ರಾಣಾ ದಗ್ಗುಬಟಿ, 'ಬಾಹುಬಲಿ 1 ಮತ್ತು II'ಸಿನಿಮಾದಲ್ಲಿ ಅಪ್ರತಿಮ ಭಲ್ಲಾಳದೇವ್ ಪಾತ್ರದಲ್ಲಿ ನಿರ್ವಹಿಸುವ  ಮೂಲಕ ಗಮನ ಸೆಳೆದಿದ್ದರು.ಈಗ ತನ್ನ ಎಲ್ಲಾ ಪ್ರೇಮದ ಊಹಾಪೋಹಗಳಿಗೆ ಕೊನೆಹಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಹೇಗೆ ಅಂತೀರಾ? ಹೌದು, ರಾಣಾ ತನ್ನ ಪ್ರೀತಿಯ ಬೆಡಗಿ ಮಿಹೀಕಾ ಬಜಾಜ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಫೋಟೋದೊಂದಿಗೆ ಜಗತ್ತಿಗೆ ಪರಿಚಯಿಸುತ್ತಾ  'ಅವಳು ಹೌದು ಎಂದು ಹೇಳಿದಳು'!  ಇದರ ಅರ್ಥವೇನೆಂದರೆ ಶೀಘ್ರದಲ್ಲೇ ದಂಪತಿಗಳು ಮದುವೆಯಾಗಲಿದ್ದಾರೆ. ಈ ಪೋಸ್ಟ್ ಮಾಡಿದ ನಂತರ ಹಲವಾರು ಸೆಲೆಬ್ರಿಟಿಗಳು ಹಾಗೂ ಉದ್ಯಮದ ಸ್ನೇಹಿತರು ಶುಭಕೋರಿದ್ದಾರೆ.



ಮಿಹೀಕಾ ಒಬ್ಬ ಉದ್ಯಮಿಯಾಗಿದ್ದು ಮತ್ತು ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಹೆಸರಿನ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ.'ಅಭಿನಂದನೆಗಳು ರಾಣಾ' ಎಂಬ ಹ್ಯಾಶ್‌ಟ್ಯಾಗ್ ಮೂಲಕ ಅಭಿಮಾನಿಗಳು ಟ್ವಿಟರ್‌ನಲ್ಲಿ ರಾಣಾ ದಗ್ಗುಬತಿ ಟ್ರೆಂಡಿಂಗ್ ಆರಂಭಿಸಿದ್ದಾರೆ.


ದಂಪತಿಗಳು ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ಯಶಸ್ವಿಯಾಗಿದ್ದರು ಮತ್ತು ಅಂತಿಮವಾಗಿ, ರಾಣಾ ಲಾಕ್ಡೌನ್ ನಡುವೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ.