Ranaksha Trailer: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿರುವ,  ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ  ಸಸ್ಪೆನ್ಸ್ , ಥ್ರಿಲ್ಲರ್  ಜಾನರ್ ಚಿತ್ರ "ರಣಾಕ್ಷ". ಕೆ.ರಾಘವ ಅವರ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು‌.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ನಿರ್ಮಾಪಕ ರಾಮು  ಮಾತನಾಡುತ್ತಾ 6ರಿಂದ  80 ವರ್ಷದವರೂ ಕೂತು ನೋಡುವಂಥ, ಹಳ್ಳಿ ಸೊಗಡಿನ ಕೌಟುಂಬಿಕ  ಕಥಾನಕ ಇರೋ ಚಿತ್ರವಿದು.  ಸಿನಿಮಾ ನೋಡಿ ನೀವೆಲ್ಲ‌ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿದೆ. ಕುಚುಕು ಸ್ನೇಹಿತ ಉಮಾಮಹೇಶ್ವರ ನಮ್ಮಜೊತೆಗಿದ್ದಾರೆ‌.  ಹಣ ಗಳಿಸೋ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ‌. ರಘು ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಕಲೇಶಪುರದಲ್ಲಿ ಶೂಟ್ ಮಾಡುವಾಗ ತುಂಬಾ ಪೆಟ್ಡು ತಿಂದಿದ್ದಾರೆ. ಅಲ್ಲದೆ  ಇಬ್ಬರು ಹೊಸ ಹುಡುಗಿಯರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಆಲಾಪ್ ಮಾತು ಕಮ್ಮಿ, ಆದರೆ ಅದ್ಬುತವಾಗಿ ಮ್ಯೂಸಿಕ್ ಮಾಡಿದ್ದಾರೆ ಎಂದರು.


ಇದನ್ನೂ ಓದಿ: ದಂತದ ಬೊಂಬೆಯಂತಿರುವ ರಮ್ಯ ಕೃಷ್ಣನ್ ಗೆ ಎಷ್ಟು ವಯಸ್ಸಾಗಿದೆ ಗೊತ್ತೇ !


ನಿರ್ದೇಶಕ ರಾಘವ ಮಾತನಾಡಿ ಇದು ನನ್ನ ಎರಡನೇ ಚಿತ್ರ. ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ಪ್ರೊಡ್ಯೂಸರ್ ಗೆ ಒಂದು ಲೈನ್ ಹೇಳಿದಾಗ ಏನೂ ಕೇಳದೆ ಒಪ್ಪಿದರು. "ರಣಾಕ್ಷ" ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ.
ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ. ದೇವರು ದೆವ್ವ ಎರಡರ ನಡುವಿನ ಸಂಘರ್ಷವೇ ಚಿತ್ರದ ಕಾನ್ಸೆಪ್ಟ್.  ಯಾವುದೇ  ಮಂತ್ರ , ತಂತ್ರ , ಶಕ್ತಿ  ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.  ರಘು ನನಗೆ ಬಹಳ ವರ್ಷದ ಗೆಳೆಯ, ನಿನಗೆ ಹೀರೋ ಮಾಡ್ತೇನೆ ಅಂದಾಗ ಕಾಮಿಡಿ ಮಾಡಬೇಡಿ  ಅಂದರು. ತುಂಬಾ ಶ್ರಮವಹಿಸಿ  ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಹೇಳಿದರು.


ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯವಾದ ನಟ   ಸೀರುಂಡೆ ರಘು ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕೆಲಸ ಮಾಡಿದವನು, ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಕೊನೆಯಲ್ಲಿ ಅದೇನೆಂದು ರಿವೀಲ್ ಆಗುತ್ತೆ. ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದು ಕೇಳಿಕೊಂಡರು.
ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ  ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು.


ಇದನ್ನೂ ಓದಿ: Video: ಪುಟ್ಟ ಕಂದಮ್ಮನ್ನನ್ನು ಕೈಯಲ್ಲಿಡಿದು ಆಸ್ಪತ್ರೆಯಿಂದ ಹೊರಬಂದ ದೀಪಿಕಾ! ನಟಿ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌..ವಿಡಿಯೋ ವೈರಲ್‌


ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡಿ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿತ್ತು. ಪ್ರತಿ ಹಾಡು ವಿಭಿನ್ನವಾಗಿ ಮೂಡಿ ಬಂದಿದೆ ಎಂದರು.


ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿವೆ.  ಶೀಘ್ರದಲ್ಲೇ ರಣಾಕ್ಷ  ಬೆಳ್ಳಿಪರದೆ ಮೇಲೆ ಮೂಡಿಬರಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.