ಮುಂಬೈ:ಪೌರತ್ವ ತಿದ್ದುಪಡಿ ಕಾಯ್ದೆ-2019ರ ಕುರಿತು ಖ್ಯಾತ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಪ್ರಶ್ನಿಸಲಾಗಿ, ರಜಿನಿ ಕಾಂತ್ ನೀಡಿರುವ ಹೇಳಿಕೆ ಭಾರಿ ಆಶ್ಚರ್ಯ ಮೂಡಿಸಿದೆ. ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಲು ರಜಿನಿಕಾಂತ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇ ಒಂದು ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಈ ಸ್ಥಳ ಉಚಿತವಲ್ಲ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪ್ರತಿಕ್ರಿಯೆ ನೀಡುವಂತೆ ಥಲೈವಾಗೆ ಸುದ್ದಿಗಾರರು ಕೋರಿದ್ದಾರೆ. ಇದಕ್ಕೆ ಉತ್ತರಿಸಿರುವ ರಜಿನಿ, ಸದ್ಯ ತಾವು ತಮ್ಮ ಚಿತ್ರದ ಪ್ರಮೋಶನ್ ಕಾರ್ಯಕ್ಕೆ ಬಂದಿದ್ದು, ಕೇವಲ ತಮ್ಮ ಚಿತ್ರದ ಕುರಿತಾದ ಪ್ರಶ್ನೆಗಳನ್ನು ಮಾತ್ರ ಉತ್ತರಿಸುವುದಾಗಿ ಹೇಳಿದ್ದಾರೆ.


ರಜಿನಿಕಾಂತ್ ಅವರು ತಮ್ಮ ಬಹುನಿರೀಕ್ಷಿತ ಚಿತ್ರವಾಗಿರುವ 'ದರಬಾರ್'ನ ಪ್ರಮೋಶನ್ ಗಾಗಿ ಮುಂಬೈಗೆ ಬಂದಿಳಿದಿದ್ದರು. ಎ. ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಜನೆವರಿಯಲ್ಲಿ ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ.


ಸುಮಾರು 25 ವರ್ಷಗಳ ದೀರ್ಘಾವಧಿ ನಂತರ ರಜಿನಿಕಾಂತ್ ಈ ಚಿತ್ರದಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1992ರಲ್ಲಿ ಕೊನೆಯ ಬಾರಿಗೆ ಅವರು ಪೊಲೀಸ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮಿಳು ಭಾಷೆಯಲ್ಲಿ ಬಿಡುಗಡೆಯಾದ 'ಪಂಡಿಯನ್' ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದರು. ಇದಲ್ಲದೆ 1982ರಲ್ಲಿ  ಬಿಡುಗಡೆಯಾದ 'ಮುಂದುರು ಮುಗಮ್' ಚಿತ್ರದಲ್ಲಿ ರಜಿನಿ ಎಲೆಕ್ಸ್ ಪಂಡಿಯನ್ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದರು.


'ದರಬಾರ್' ಚಿತ್ರದಲ್ಲಿ ರಜನಿ ಜೊತೆ ಕೀರ್ತಿ ಸುರೇಶ್, ಮೀನಾ ಖುಷ್ಬು ಕೂಡ ಮಹತ್ವದ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿ. ಇಮ್ಮಾನ್ ಸಂಗೀತ ನಿರ್ದೆಶನದಡಿ ಈ ಚಿತ್ರ ಮೂಡಿಬರುತ್ತಿದ್ದು, ಕಳೆದ ವಾರವಷ್ಟೇ ಈ ಚಿತ್ರದ ಆಡಿಯೋ ಕೂಡ ಬಿಡುಗಡೆಗೊಳಿಸಲಾಗಿದೆ.