Animal movie ott release date : ಟಾಲಿವುಡ್‌ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತ ಬಿಟೌನ್‌ ನಟ ರಣಬೀರ್ ಕಪೂರ್ ಅಭಿನಯದ ಅನಿಮಲ್ ಸುಮಾರು 800 ಕೋಟಿ ಕಲೆಕ್ಷನ್‌ಗಳೊಂದಿಗೆ ಬ್ಲಾಕ್‌ಬಸ್ಟರ್ ಆಯಿತು. ಮೊದಲ ಮೊದಲು ಈ ಚಿತ್ರಕ್ಕೆ ಹಲವಾರು ಟೀಕೆಗಳು ವ್ಯಕ್ತವಾದವು ಆಲ್ಲದೆ, ಕೆಲವು ಪ್ರೇಕ್ಷಕರಿಂದ ಅದೇ ಮಟ್ಟದ ಮೆಚ್ಚುಗೆಯನ್ನು ಸಹ ಪಡೆಯಿತು. ಇದೀಗ ಈ ಚಿತ್ರ ಜನವರಿ 26 ರಂದು OTT ನಲ್ಲಿ ಬಿಡುಗಡೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಈ ಚಿತ್ರ ಡಿಜಿಟಲ್ ಸ್ಟ್ರೀಮಿಂಗ್ ಕುರಿತು ಕೆಲವು ಸಮಸ್ಯೆಗಳನ್ನು ಎದುರಿಸಿದ ಬಳಿಕ ಸಧ್ಯ ಜನವರಿ 26ಕ್ಕೆ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗುವುದು ಖಚಿತವಾಗಿದೆ. ನೆಟ್‌ಫ್ಲಿಕ್ಸ್ ಸುಮಾರು ನೂರು ಕೋಟಿಗೆ ಅನಿಮಲ್ ಒಟಿಟಿ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಥಿಯೇಟರ್ ಆವೃತ್ತಿಗಿಂತ ಒಟಿಟಿ ಆವೃತ್ತಿಯಲ್ಲಿ ಹೆಚ್ಚಿನ ದೃಶ್ಯಗಳು ಇರಲಿದೆ ಎಂದು ಸಂದೀಪ್ ರೆಡ್ಡಿ ವಂಗ ತಿಳಿಸಿದ್ದಾರೆ.́


ಇದನ್ನೂ ಓದಿ:ರಾಮ ಮಂದಿರಕ್ಕೆ ನಟ ಪ್ರಭಾಸ್‌ 50 ಕೋಟಿ ರೂ. ದೇಣಿಗೆ ಕೊಟ್ರಾ..? ಈ ಸುದ್ದಿಯ ಸತ್ಯಾಂಶ ಇಲ್ಲಿದೆ


ಥಿಯೇಟ್ರಿಕಲ್ ಆವೃತ್ತಿಗೆ ಹೋಲಿಸಿದರೆ ಅನಿಮಲ್ OTT ಆವೃತ್ತಿಯಲ್ಲಿ ಹಲವು ಬದಲಾವಣೆಗಳಿವೆಯಂತೆ. ಥಿಯೇಟ್ರಿಕಲ್ ಆವೃತ್ತಿಯು 3 ಗಂಟೆ 21 ನಿಮಿಷ ಇದ್ರೆ, OTT ನಲ್ಲಿ, ಅನಿಮಲ್‌ ಸಿನಿಮಾ ಮೂರೂವರೆ ಗಂಟೆಗೂ ಹೆಚ್ಚು ಅವಧಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 


ಇನ್ನು ಕುತೂಹಲಕಾರಿ ಸಂಗತಿಯೆಂದರೆ, ಓಟಿಟಿ ಆವೃತ್ತಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಅನ್‌ಸೀನ್‌ ದೃಶ್ಯಗಳು ಇರಲಿವೆ. ಇದರಿಂದಾಗಿ ನೀವು ಚಿತ್ರಮಂದಿರದಲ್ಲಿ ನೋಡಿದರ ರೊಮ್ಯಾಂಟಿಕ್ ದೃಶ್ಯಗಳನ್ನು ಒಟಿಟಿಯಲ್ಲಿ ನೋಡಬಹದು. ರಣಬೀರ್ ಮತ್ತು ರಶ್ಮಿಕಾ ಅವರ ಲಿಪ್ಲಾಕ್ ದೃಶ್ಯಗಳು ಕೂಡ ಇರಲಿವೆ.


ಇದನ್ನೂ ಓದಿ:ಓ ಮೈ ಗಾಡ್..! ಎನ್‌ಟಿಆರ್ ಜೊತೆ ನಟಿಸೋಕೆ ಜಾನ್ವಿ ಕಪೂರ್ ಇಷ್ಟು ಕೋಟಿ ಹಣ ಬೇಡಿಕೆ ಇಟ್ಟಿದ್ದಾರಾ?


ರಣಬೀರ್ ಕಪೂರ್ ನಾಯಕನಾಗಿ ಮತ್ತು ರಶ್ಮಿಕಾ ಮಂದನಾ ನಾಯಕಿಯಾಗಿರುವ ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ತಂದೆಯ ಪಾತ್ರವನ್ನು ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ತ್ರಿಪ್ತಿ ಡಿಮ್ರಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂದೀಪ್ ವಂಗ ಅವರ ಸಹೋದರ ಪ್ರಣಯ್ ವಂಗ ಈ ಚಿತ್ರವನ್ನು ಟಿ-ಸೀರೀಸ್ ನಾಯಕ ಭೂಷಣ್ ಕುಮಾರ್ ಜೊತೆಗೆ ನಿರ್ಮಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.