Animal Success Party : ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರ ವಿಶ್ವಾದ್ಯಂತ 890 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಅನಿಮಲ್‌ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಇಡೀ ಅನಿಮಲ್ ತಂಡ ಸಕ್ಸಸ್ ಪಾರ್ಟಿ ನಡೆಸಿದೆ. 


COMMERCIAL BREAK
SCROLL TO CONTINUE READING

ಸಂದೀಪ್ ರೆಡ್ಡಿ ವಂಗಾ, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಶನಿವಾರ ರಾತ್ರಿ ನಡೆದ ಅನಿಮಲ್‌ ಸಕ್ಸಸ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ ಈ ಪಾರ್ಟಿಗೆ ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಈ ಡ್ರೆಸ್‌ನಲ್ಲಿ ಅವರು ಸಖತ್‌ ಕ್ಯೂಟ್‌ ಆಗಿ ಕಾಣುತ್ತಿದ್ದರು.


ಇದನ್ನೂ ಓದಿ: ರಾಗಿಣಿ ದ್ವಿವೇದಿ ಅಭಿನಯದ "ಬಿಂಗೊ" ಚಿತ್ರೀಕರಣ ಮುಕ್ತಾಯ 


ಅನಿಮಲ್‌ ಸಕ್ಸಸ್‌ ಪಾರ್ಟಿಗೆ ಅನಿಮಲ್‌ ಸಿನಿಮಾ ಹೀರೋ ರಣಬೀರ್ ಸಹ ಆಗಮಿಸಿದ್ದರು. ರಶ್ಮಿಕಾ ಅವರನ್ನು ಕಂಡೊಡನೆ ರಣಬೀರ್‌ ಆಕೆಯ ಕೆನ್ನೆಗೆ ಮುತ್ತಿಟ್ಟು ಶುಭಾಶಯ ಕೋರುತ್ತಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.


 


 

 

 

 



 

 

 

 

 

 

 

 

 

 

 

A post shared by Voompla (@voompla)


 


ಡಿಸೆಂಬರ್ 2023 ರಲ್ಲಿ ಬಿಡುಗಡೆಯಾದ ಅನಿಮಲ್‌ ಸಿನಿಮಾ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಸ್ತ್ರೀದ್ವೇಷ ಮತ್ತು ಹಿಂಸಾಚಾರದ ಸುತ್ತು ಕತೆಯನ್ನು ಹೇಳುತ್ತದೆ. ಅನಿಮಲ್‌ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿತು. ಭಾರತದಲ್ಲಿ ಅನಿಮಲ್ ಚಿತ್ರವು 655.27 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ‌ ಎನ್ನಲಾಗಿದೆ. ಅನಿಮಲ್‌ ಚಿತ್ರವು ವಿಶ್ವಾದ್ಯಂತ 896.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.


ಇದನ್ನೂ ಓದಿ: ಒಂದು ಕಾಲದಲ್ಲಿ ಮದ್ಯವ್ಯಸನಿಯಾಗಿದ್ದ ಈ ನಟಿ ಸದ್ಯ ಸೌತ್‌ ಸೂಪರ್‌ಸ್ಟಾರ್‌! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.