ಗರ್ಲ್ ಫ್ರೆಂಡ್ಸ್‌ಗೆ ಗಿಫ್ಟ್ ಕೊಡಲು ಸೋದರಿಯ ಬಟ್ಟೆ, ಅಮ್ಮನ ಒಡವೆ ಕದಿಯುತ್ತಿದ್ದ ಸ್ಟಾರ್ ಹೀರೋ!
Ranbir Kapoor Love Affair: ಈ ಸ್ಟಾರ್ ಹೀರೋ ಬಾಲಿವುಡ್‌ನ ತುಂಬಾ ಶ್ರೀಮಂತ ಹಾಗೂ ಫೇಮಸ್ ನಟರಲ್ಲಿ ಒಬ್ಬರು. ನೋಡೋಕಂತೂ ಸಿಕ್ಕಾಪಟ್ಟೆ ಹ್ಯಾಂಡ್‌ಸಮ್. ಇವರಿಗೆ ಹಲವಾರು ಗರ್ಲ್‌ಫ್ರೆಂಡ್ಸ್ ಇದ್ದರು.
Ranbir Kapoor Love Affair: ಈ ಸ್ಟಾರ್ ಹೀರೋ ಬಾಳಿವುಡ್‌ನ ತುಂಬಾ ಶ್ರೀಮಂತ ಹಾಗೂ ಫೇಮಸ್ ನಟರಲ್ಲಿ ಒಬ್ಬರು. ನೋಡೋಕಂತೂ ಸಿಕ್ಕಾಪಟ್ಟೆ ಹ್ಯಾಂಡ್‌ಸಮ್. ಇವರಿಗೆ ಹಲವಾರು ಗರ್ಲ್‌ಫ್ರೆಂಡ್ಸ್ ಇದ್ದರು. ಹೀಗಾಗಿ ನಟ ತನ್ನ ಸಹೋದರಿಯ ಬಟ್ಟೆ, ತಾಯಿಯ ಒಡವೆಗಳನ್ನು ಕದ್ದು ಪ್ರೇಯಸಿಯರಿಗೆ ಉಡುಗೊರೆಯಾಗಿ ಕೊಡ್ತಿದ್ದರಂತೆ. ಬಾಲಿವುಡ್‌ನ ಈ ಜನಪ್ರಿಯ ನಟನನ್ನು ಬ್ರೇಕಪ್ ಬಾಯ್ ಎಂದೇ ಅನೇಕರು ಕರೆಯುತ್ತಾರೆ. ಈ ಖ್ಯಾತ ನಟ ಗರ್ಲ್‌ಫ್ರೆಂಡ್ಸ್‌ಗೆ ಉಡುಗೊರೆ ನೀಡಲು ತನ್ನ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದರಂತೆ.
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಲವ್ ಅಫೇರ್ ಬಗ್ಗೆ ಮಾತನಾಡುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ನಟ ರಣಬೀರ್ ಕಪೂರ್ ತನ್ನ ಕಾಲೇಜು ದಿನಗಳಲ್ಲಿಯೇ ಗರ್ಲ್ ಫ್ರಂಡ್ಸ್ ಹೊಂದಿದ್ದರು. ರಣಬೀರ್ ಬಗ್ಗೆ ತಾಯಿ ಮತ್ತು ಸಹೋದರಿ ಕೆಲವು ಆಸಕ್ತಿದಾಯಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ರಣಬೀರ್ ಕಪೂರ್ ಗೆ ಗರ್ಲ್‌ಫ್ರೆಂಡ್ ಮಾಡಿಕೊಳ್ಳುವುದೇನು ಕಷ್ಟದ ಕೆಲಸವಾಗಿರಲಿಲ್ಲ. ತಂದೆ ಬಾಲಿವುಡ್ ಲೆಜೆಂಡ್. ಹೀಗಾಗಿ ಹುಡುಗಿಯರು ಸುಲಭವಾಗಿ ಬೀಳುತ್ತಿದ್ದರು. ರಣಬೀರ್ ಸೌಂದರ್ಯ, ಎತ್ತರ, ಫ್ಯಾಷನ್ ಮತ್ತು ಸ್ಟೈಲ್ ಎಲ್ಲವೂ ಹುಡುಗಿಯರನ್ನು ಆಕರ್ಷಿಸುವಂತಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್ ಕಪೂರ್ ಸಹೋದರಿ ರಿದ್ಧಿಮಾ ಒಂದಷ್ಟು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಣಬೀರ್ ತಮ್ಮ ಅಗ್ಗದ ಟಾಪ್ ಮತ್ತು ಡ್ರೆಸ್‌ಗಳನ್ನು ತೆಗೆದುಕೊಂಡು ಹೋಗಿ ಗರ್ಲ್ ಫ್ರೆಂಡ್ಸ್‌ಗೆ ಉಡುಗೊರೆ ನೀಡುತ್ತಿದ್ದ ಎಂದು ರಿದ್ಧಿಮಾ ಹೇಳಿದರು. ರಣಬೀರ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ರಣಬೀರ್ ತನ್ನ ತಾಯಿಯ ಆಭರಣಗಳನ್ನು ಕದ್ದು ಗರ್ಲ್ ಫ್ರೆಂಡ್ಸ್ ಗೆ ಗಿಫ್ಟ್ ಕೊಡ್ತಿದ್ದರಂತೆ.
ರಣಬೀರ್ ಕಪೂರ್ ಬಾಲಿವುಡ್ ನ ಬ್ರೇಕಪ್ ಬಾಯ್ ಎಂದೇ ಖ್ಯಾತರಾಗಿದ್ದಾರೆ. ಮುಖ್ಯವಾಗಿ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರೊಂದಿಗಿನ ಸಂಬಂಧ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಬಾಲಿವುಡ್ ಸ್ಟಾರ್ ಹೀರೋ ರಿಷಿ ಕಪೂರ್ ಪುತ್ರ ರಣಬೀರ್ ಕಪೂರ್ ಗೆ ಮೊದಲ ಸಿನಿಮಾದಿಂದ ಯಶಸ್ಸು ಸಿಗಲಿಲ್ಲ. ಆದರೆ ಚಾಕಲೇಟ್ ಹೀರೋ ಲುಕ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಜನರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: ಅಂದು ₹500 ಗೆ ಕಷ್ಟಪಡ್ತಿದ್ದ ಕಪಿಲ್ ಶರ್ಮಾ ಇಂದು ₹300 ಕೋಟಿ ಒಡೆಯ.. ಕಾಮಿಡಿಯನ್ ಆಗದೇ ಇದ್ದಿದ್ರೆ ಏನಾಗ್ತಿದ್ರು ಗೊತ್ತೇ!
ರಣಬೀರ್ ಕಪೂರ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಚಾಕೊಲೇಟ್ ಬಾಯ್. ರಣಬೀರ್ ಸಿನಿಮಾದ ಜೊತೆಗೆ ಲವ್ ಲೈಫ್ ಕೂಡ ಸುದ್ದಿಯಲ್ಲಿದೆ. ಮದುವೆಗೂ ಮುನ್ನ ಈ ನಟ ಬಿ-ಟೌನ್‌ನಲ್ಲಿ ಹಲವು ನಟಿಯರೊಂದಿಗೆ ಡೇಟಿಂಗ್ ಮಾಡಿದ್ದರೆಂಬ ವದಂತಿಗಳಿವೆ.
ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಪ್ರೀತಿಸಿ ವಿವಾಹವಾದರು. ಈಗ ರಣಬೀರ್ ಕಪೂರ್ ರಾಹಾ ಕಪೂರ್ ತಂದೆ ಆಗಿದ್ದಾರೆ. ರಣಬೀರ್ ಮತ್ತು ಆಲಿಯಾ ಅವರ ಮುದ್ದು ಮಗಳು ರಾಹಾ ಕಪೂರ್ ಈಗಾಗಲೇ ಫೇಮಸ್ ಆಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.