Randeep Hooda : ಬಾಲಿವುಡ್ ನಟ ರಣದೀಪ್ ಹೂಡಾ ಅವರು ತಮ್ಮ ಮುಂಬರುವ ಚಿತ್ರ 'ಸ್ವತಂತ್ರ್ಯ ವೀರ್ ಸಾವರ್ಕರ್' ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಇದರಲ್ಲಿ ಅವರು 'ಸಾವರ್ಕರ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೀಗ ಆತಂಕಕಾರಿ ವಿಚಾರ ಒಂದು ಹೊರಬಿದ್ದಿದ್ದು, ಕುದುರೆ ಸವಾರಿ ಮಾಡುವಾಗ ರಣದೀಪ್‌ ಮೂರ್ಛೆ ಹೋಗಿ ಕುದುರೆ ಮೇಲಿಂದ ಬಿದ್ದಿದ್ದಾರೆ. ಕೂಡಲೇ ರಣದೀಪ್ ಹೂಡಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಘಟನೆಯಲ್ಲಿ ನಟ ರಣದೀಪ್‌ ಹೂಡಾ ಅವರಿಗೆ ಹಲವು ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಟನಿಗೆ ಮೊಣಕಾಲು ಮತ್ತು ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ನಟನ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ಘಟನೆಯನ್ನು ಹೇಳಲಾಗುತ್ತಿದ್ದು, ಇದುವರೆಗೂ ಯಾವುದೇ ಮಾಹಿತಿ ಇರಲಿಲ್ಲ. ಅಪಘಾತದ ನಂತರ ನಟನನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.


ಇದನ್ನೂ ಓದಿ: ಎಲ್ಲಾ ಬಿಟ್ಟು ಪೋಲಿಸ್ ಠಾಣೆಗೆ ಉರ್ಫಿ ಜಾವೇದ್ ಮೊರೆಯಿಟ್ಟಿದ್ದೇಕೆ?


ರಣದೀಪ್ ಹೂಡಾ ತಮ್ಮ ಮುಂಬರುವ ಚಿತ್ರ 'ಸ್ವತಂತ್ರ ವೀರ್ ಸಾವರ್ಕರ್'ಗಾಗಿ ತಯಾರಿ ನಡೆಸುತ್ತಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದಕ್ಕಾಗಿ ಅವರು ಸುಮಾರು 22 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಪಾತ್ರಕ್ಕೆ ಹೊಂದಿಕೊಳ್ಳಲು, ಅವರು ತಮ್ಮ ಆಹಾರಕ್ರಮವನ್ನು ಗಣನೀಯವಾಗಿ ಕಡಿಮೆ ಮಾಡಿದರು.


ಡಯಟ್ ಕಡಿಮೆ ಮಾಡಿದ್ದರಿಂದ ರಂದೀಪ್ ತುಂಬಾ ತೆಳ್ಳಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಕುದುರೆಯಿಂದ ಬಿದ್ದಿದ್ದರಿಂದ ಗಂಭೀರ ಸ್ವರೂಪದ ಗಾಯಗಳಾಗಿವೆ. ವೈದ್ಯರು ಸದ್ಯಕ್ಕೆ ಬೆಡ್ ರೆಸ್ಟ್ ಮಾಡುವಂತೆ ರಣದೀಪ್‌ ಅವರಿಗೆ ಸೂಚಿಸಿದ್ದಾರೆ. ಆದರೆ, ರಣದೀಪ್ ಹೂಡಾ ಅಪಘಾತಕ್ಕೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಮಾರ್ಚ್ 2022 ರಲ್ಲಿ ಸಹ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.