Ranveer Singh in Pushpa 2: ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಶೂಟಿಂಗ್‌ ಕೆಲಸ ನಡೆಯುತ್ತಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಅಪ್‌ಡೇಟ್ಸ್‌ಗಳು ಆಗಾಗ ಹೊರಬರುತ್ತವೆ. ಇದೀಗ ಮತ್ತೊಂದು ಸುದ್ದಿ ಬಂದಿದ್ದು, ಇದು ಎಲ್ಲರ ಗಮನಸೆಳೆದಿದೆ. ಈ ಸೂಪರ್‌ಹಿಟ್ ಸೀಕ್ವೆಲ್‌ನಲ್ಲಿ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ವರದಿ ಹೊರಬಂದಾಗಿನಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅತಿಥಿ ಪಾತ್ರವನ್ನು ಮಾಡುವುದರ ಬಗ್ಗೆ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ನಟ ರಣವೀರ್‌ ಸಿಂಗ್‌ ಪುಷ್ಪ 2 ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಇದು ಪ್ರೇಕ್ಷಕರನ್ನು ಬೆರಗುಗೊಳಿಸಲಿದೆ ಎನ್ನಲಾಗಿದೆ. ಈ ಸುದ್ದಿ ಹೊರಬಂದಾಗಿನಿಂದ ಅಭಿಮಾನಿಗಳ ಕಾತುರ ಹೆಚ್ಚಾಗಿದೆ.


ಇದನ್ನೂ ಓದಿ:  ಕಾರ್ತಿ ಸಿನಿಮಾಗೆ ಡಿವೈನ್ ಸ್ಟಾರ್ ಸಾಥ್‌, ʻಜಪಾನ್ʼ ಟೀಸರ್ ರಿಲೀಸ್ ಮಾಡಿದ ರಿಷಬ್ ಶೆಟ್ಟಿ


ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರು, ಮತ್ತು ಅಭಿಮಾನಿಗಳು ಅವರನ್ನು ಸಿಂಬಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ರಣವೀರ್ ಮತ್ತು ಅಲ್ಲು ಉತ್ತಮ ಒಡನಾಟ ಹೊಂದಿದ್ದಾರೆ. ಅವರು ಒಟ್ಟಿಗೆ ಸ್ಕ್ರೀನ್‌ ಮಾಡುತ್ತಿರುವ ಸುದ್ದಿ ಫ್ಯಾನ್ಸ್‌ ಸಂತಸಕ್ಕೆ ಕಾರಣವಾಗಿದೆ. ಬೆಳ್ಳಿ ತೆರೆ ಮೇಲೆ ಇಬ್ಬರೂ ಸೂಪರ್‌ ಸ್ಟಾರ್‌ಗಳನ್ನು ಒಟ್ಟಿಗೆ ನೋಡಲು ಸಿನಿಪ್ರಿಯರು ಕಾತುರರಾಗಿದ್ದಾರೆ.


ರಣವೀರ್ ಸಿಂಗ್‌ ಸೌತ್‌ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಿರುವುದು ಪ್ರೇಕ್ಷಕರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 


ಇದಲ್ಲದೇ ರಣವೀರ್ ಸಿಂಗ್‌ ತಮ್ಮ ಮುಂದಿನ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ಅವರ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ರಣವೀರ್ ಕೊನೆಯದಾಗಿ ರೋಹಿತ್ ಶೆಟ್ಟಿಯವರ ಸರ್ಕಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ, 6 ವರ್ಷಗಳ ವಿಶ್ರಾಂತಿಯ ನಂತರ ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣವೀರ್‌ ನಟಿಸಿದ್ದಾರೆ. 


ಇದನ್ನೂ ಓದಿ: ಆದಿಪುರುಷ ಸಿನಿಮಾದ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.