ಕಪಿಲ್ ದೇವ್ ಅವರ ಆ ಕ್ಯಾಚ್ ಅನುಕರಿಸಲು 6 ತಿಂಗಳ ತೆಗೆದುಕೊಂಡಿದ್ದ ರಣವೀರ್ ಸಿಂಗ್...!
`83` ಚಿತ್ರದಲ್ಲಿ ಕಪಿಲ್ ದೇವ್ ಪಾತ್ರಕ್ಕಾಗಿ ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ಬಾಲಿವುಡ್ ಸೆನ್ಸೇಷನ್ ರಣವೀರ್ ಸಿಂಗ್,ಈಗ ಕಪಿಲ್ ದೇವ ಅವರ ಫೇಮಸ್ ಕ್ಯಾಚ್ ನ್ನು ಅನುಸಕರಿಸಲು ಬರೋಬ್ಬರಿ ಆರು ತಿಂಗಳು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ನವದೆಹಲಿ: '83' ಚಿತ್ರದಲ್ಲಿ ಕಪಿಲ್ ದೇವ್ ಪಾತ್ರಕ್ಕಾಗಿ ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ಬಾಲಿವುಡ್ ಸೆನ್ಸೇಷನ್ ರಣವೀರ್ ಸಿಂಗ್,ಈಗ ಕಪಿಲ್ ದೇವ ಅವರ ಫೇಮಸ್ ಕ್ಯಾಚ್ ನ್ನು ಅನುಸಕರಿಸಲು ಬರೋಬ್ಬರಿ ಆರು ತಿಂಗಳು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಜೂನ್ 25, 1983 ರಂದು ಮದನ್ ಲಾಲ್ ಎಸೆತದಲ್ಲಿ ಸರ್ ವಿವ್ ರಿಚರ್ಡ್ಸ್ ಅವರನ್ನು ವಜಾಗೊಳಿಸಲು ಕಪಿಲ್ ದೇವ್ ಅವರು ಹಿಮ್ಮುಖವಾಗಿ ಓಡಿ ಹೋಗಬೇಕಾಗಿತ್ತು. ಈಗ 83 ಚಿತ್ರ ಬಿಡುಗಡೆಯಾದ ದಿನದಂದೇ ಉತ್ತಮ ಓಪನಿಂಗ್ ನ್ನು ಪಡೆದಿದೆ.ಅಭಿಮಾನಿಗಳು ರಣವೀರ್ ಸಿಂಗ್ ಅವರ ಕಪಿಲ್ ದೇವ ಪಾತ್ರಕ್ಕಾಗಿ ಫುಲ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: "ನನಗೆ ವಿವಿಧ ಪಕ್ಷಗಳಿಂದ ಆಫರ್‌ಗಳಿವೆ"-ಹರ್ಭಜನ್ ಸಿಂಗ್
ಯಾವುದೇ ಪಾತ್ರವಾಗಲಿ ಅದಕ್ಕೆ ತಕ್ಕನಾದ ಸಿದ್ದತೆಯನ್ನು ನಡೆಸುವ ರಣವೀರ್ ಸಿಂಗ್ ಅವರು ಈಗಾಗಲೇ 'ಬಾಜಿರಾವ್', 'ಪದ್ಮಾವತ್', 'ಸಿಂಬಾ' ಮತ್ತು 'ಗಲ್ಲಿ ಬಾಯ್' ನಿಂದ ಹಿಡಿದು ಈಗ '83' ವರೆಗಿನ ಚಿತ್ರಗಳಿಗಾಗಿ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದ್ದಾರೆ.ಆ ಮೂಲಕ ತಾವೊಬ್ಬ ಪ್ರಬುದ್ಧ ನಟ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ರಣವೀರ್ ಕಪಿಲ್ ಅನ್ನು ಅನುಕರಿಸುತ್ತಿಲ್ಲ, ಬದಲಾಗಿ ಅವರ ಪಾತ್ರದಲ್ಲಿ ಜೀವಿಸಿದ್ದಾರೆ ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್ ಅವರು 'ಈಗ ನನಗೆ ಬರುತ್ತಿರುವ ರೀತಿಯ ಸಂದೇಶಗಳಿಂದ ನಾನು ಮುಳುಗಿದ್ದೇನೆ.ಪ್ರತಿಯೊಬ್ಬರೂ ಚಲನಚಿತ್ರವನ್ನು ಇಷ್ಟಪಡುತ್ತಿದ್ದಾರೆ - ಸುನಿಲ್ ಗವಾಸ್ಕರ್ ಸರ್, ಮದನ್ ಲಾಲ್ ಸರ್, ಕಪಿಲ್ ಸರ್, ನನ್ನ ಗುರು ಬಲ್ವಿಂದರ್ ಸಿಂಗ್ ಸಂಧು ಸರ್, ಪಿಆರ್ ಮಾನ್ ಸಿಂಗ್ ಸರ್ ಎಲ್ಲರೂ ನನ್ನ ಕೆಲಸಕ್ಕೆ ಮೆಸೇಜ್ ಮಾಡಿ ಪ್ರಶಂಸಿಸಿದ್ದಾರೆ.ಅಂತಹ ಮಹಾನ್ ವ್ಯಕ್ತಿಗಳು ನಿಮ್ಮ ಕೆಲಸವನ್ನು ಮೆಚ್ಚಿದಾಗ ನಿಮಗೆ ಇನ್ನೇನು ಬೇಕು" ಎಂದು ರಣವೀರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಈ ಕಾರಣಗಳಿಗಾಗಿ ವಿರಾಟ್ ಕೊಹ್ಲಿಯನ್ನು ಹೊಗಳಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್
ಇದೆ ವೇಳೆ ಅವರು ಚಿತ್ರದ ಮೇಕಿಂಗ್ ನ್ನು ನೆನಪಿಸಿಕೊಂಡ ಅವರು "ನಾನು ಕಪಿಲ್ ಸರ್ ಅವರೊಂದಿಗೆ ಅವರ ಮನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದೇನೆ ಮತ್ತು ಜನರು ಅವರನ್ನು ಪ್ರೀತಿಸುವಷ್ಟು ಪ್ರಭಾವಶಾಲಿ ಸೆಳವು ಹೊಂದಿದ್ದಾರೆ.ಅವರ ನಗು, ಅವರ ನಡಿಗೆ, ಅವರ ಮಾತು, ಅವರ ನೃತ್ಯ ... ಹೌದು, ಅವರು ತುಂಬಾ ಮುದ್ದಾಗಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಮತ್ತು ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾನು ನೋಡುತ್ತಿದ್ದೆ. 1983 ರ ಆ ಸಮಯದಲ್ಲಿ ಅವನು ಏನು ಯೋಚಿಸುತ್ತಿರಬಹುದು. ಎನ್ನುವುದನ್ನು ತಿಳಿಯಲು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದರಿಂದಾಗಿ ತುಂಬಾ ಸಹಾಯವಾಗಿದೆ" ಎಂದು ರಣವೀರ್ ಹೇಳಿದರು.
ಕಪಿಲ್ ಅವರ ಬೌಲಿಂಗ್ ಶೈಲಿ, ಅವರ ವರ್ತನೆ ಅಥವಾ ಬ್ಯಾಟಿಂಗ್ ಕಲಿಯಲು ಕಷ್ಟಕರವಾದ ಭಾಗ ಯಾವುದು ಎಂದು ಕೇಳಿದಾಗ? ಇದಕ್ಕೆ ಉತ್ತರಿಸಿದ ಅವರು "ನಾನು ನನ್ನ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆ ಮತ್ತು ನಾನು ತುಂಬಾ ಆಕ್ರಮಣಕಾರಿ ಮತ್ತು ಪ್ರಭಾವಶಾಲಿ ಬ್ಯಾಟರ್, ಉತ್ತಮ ಫೀಲ್ಡರ್ ಕೂಡ ಆಗಿದ್ದೆ. ಆದ್ದರಿಂದ ಬ್ಯಾಟಿಂಗ್ ಸಮಸ್ಯೆಯಾಗಿರಲಿಲ್ಲ ನಟನೆ ವಿಚಾರದಲ್ಲಿ ನಾವು ವೃತ್ತಿಪರರು, ಆದ್ದರಿಂದ ಪಾತ್ರದೊಳಗೆ ಇಳಿಯುವುದು ನಮ್ಮ ಕೆಲಸ' ಎಂದು ಅವರು ಹೇಳಿದರು.
"ಹೌದು, ಬೌಲಿಂಗ್ ಕಲಿಯುವುದು ಕಠಿಣ ವಿಷಯವಾಗಿತ್ತು. ಇದು ನನಗೆ ಹಲವಾರು ತಿಂಗಳುಗಳನ್ನು ತೆಗೆದುಕೊಂಡಿತು."ವಾಸ್ತವವಾಗಿ, ನನ್ನ ಬಯೋಮೆಕಾನಿಕ್ಸ್ ಕಪಿಲ್ ಸರ್ ಅವರಿಗಿಂತ ಭಿನ್ನವಾಗಿದೆ. ನಾನು 'ಸಿಂಬಾ' (ಚಲನಚಿತ್ರ) ನಿಂದ ಬರುತ್ತಿದ್ದೆ ಮತ್ತು ಬೃಹತ್ ಸ್ನಾಯುಗಳನ್ನು ಹೊಂದಿದ್ದೆ. ಹಾಗಾಗಿ ಸಂಧು ಸರ್ ನನಗೆ ಅಥ್ಲೆಟಿಕ್ ಮೈಕಟ್ಟು ಹೊಂದಲು ಹೇಳಿದರು.
ಇದನ್ನೂ ಓದಿ: Harbhajan Singh: ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ರಾಜಕೀಯಕ್ಕೆ ಬರುತ್ತಾರಾ?
ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತದ ಗೆಲುವನ್ನು ಸಾಧಿಸಿದ ಸರ್ ವಿವ್ ರಿಚರ್ಡ್ಸ್ ಅನ್ನು ಔಟ್ ಮಾಡಲು ಕಪಿಲ್ ದೇವ್ ಅವರು ಹಿಮ್ಮುಖವಾಗಿ ಓಡಿ ಹೋಗಿ ಹಿಡಿಯುವ ಕ್ಯಾಚ್ ಬಗ್ಗೆ ಮಾತನಾಡುತ್ತಾ 'ಅದನ್ನು ಪರಿಪೂರ್ಣವಾಗಿ ಮಾಡಲು ನನಗೆ ಆರು ತಿಂಗಳು ಬೇಕಾಯಿತು.ಕ್ಯಾಚ್ ಹಿಡಿಯಲು ಹಿಂದಕ್ಕೆ ಓಡುವುದು ಕಠಿಣವಾಗಿತ್ತು. ಹಾಗಾಗಿ ಸಂಧು ಸರ್ ಚೆಂಡನ್ನು ಎಸೆಯುತ್ತಿದ್ದರು ಮತ್ತು ನಾನು ಓಡಿ ಅದನ್ನು ತೆಗೆದುಕೊಳ್ಳಬೇಕಾಗಿತ್ತು" ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.