Rashmika Mandanna: ಯಾವುದೇ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ತನ್ನ ನಟನೆ ಮತ್ತು ಸೌಂದರ್ಯದಿಂದಲೇ ವಿಶಿಷ್ಟವಾಗಿ ಗುರುತಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ. ಇಂದು ಈ ಚೆಲುವೆಗೆ 28ರ ಸಂಭ್ರಮ.


COMMERCIAL BREAK
SCROLL TO CONTINUE READING

ನಟಿ ರಶ್ಮಿಕಾ ಮಂದಣ್ಣಗೆ ಇಂದು 28 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಚಲನಚಿತ್ರ ತಾರೆಯರು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.


ಇದನ್ನೂ ಓದಿ: IPL 2024ರಲ್ಲಿ ಅಬ್ಬರಿಸುತ್ತಿದ್ದಾನೆ ದೇಶದ ಪ್ರಖ್ಯಾತ IPS ಆಫೀಸರ್ ಮಗ: ಯಾರು ಗೊತ್ತಾ?


ದಕ್ಷಿಣದಿಂದ ಬಾಲಿವುಡ್’ವರೆಗೂ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಈ ನಟಿ, ಇತ್ತೀಚೆಗಷ್ಟೇ ತೆರೆಕಂಡ ಅನಿಮಲ್ ಸಿನಿಮಾದಲ್ಲಿ ಅದ್ಭುತ ಅಭಿನಯ ಮಾಡಿದ್ದರು. ಇನ್ನೊಂದೆಡೆ ಪುಷ್ಪ ಚಿತ್ರ ರಶ್ಮಿಕಾ ವೃತ್ತಿ ಬದುಕಿನಲ್ಲಿ ಮೈಲಿಗಲ್ಲಾಗಿ ಉಳಿಯಲಿದೆ.


ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟ 6 ವರ್ಷಗಳಲ್ಲಿ ಹಲವು ಅತ್ಯುತ್ತಮ ಹಿಟ್ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಾಯಕಿಯಾಗಿದ್ದಾರೆ.


ರಶ್ಮಿಕಾ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಅಭಿನಯದ ಮೊದಲ ಚಿತ್ರ 'ಕಿರಿಕ್ ಪಾರ್ಟಿ' ಬ್ಲಾಕ್ ಬಸ್ಟರ್ ಸಕ್ಸಸ್ ಆಗಿತ್ತು. ಮೊದಲ ಸಿನಿಮಾದಿಂದಲೇ ಭಾರೀ ಸುದ್ದಿ ಮಾಡಿದ್ದರು ರಶ್ಮಿಕಾ.


ಆ ನಂತರ ಗೀತ ಗೋವಿಂದಂ ಚಿತ್ರದಲ್ಲಿ ಗುರುತಿಸಿಕೊಂಡು. ಪುಷ್ಪಾ ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ಮೇಲೆ ಕಣ್ಣಿಟ್ಟ ಈ ಚೆಲುವೆ ಗುಡ್ ಬೈ ಚಿತ್ರದ ಮೂಲಕ ಹಿಂದಿಯಲ್ಲೂ ಪಾದಾರ್ಪಣೆ ಮಾಡಿದರು. ಭಾಷೆಯ ಬೇಧವಿಲ್ಲದೆ ಚಿತ್ರರಂಗದ ಟಾಪ್ ಹೀರೋಯಿನ್’ಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.


ಅದರ ಹೊರತಾಗಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಏನೋ ಇದೆ ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನು, ಈ ವಿಚಾರದಲ್ಲಿ ಇಬ್ಬರಲ್ಲಿ ಯಾರು ಸ್ಪಷ್ಟನೆ ನೀಡಿಲ್ಲ.. ಅದೇನೇ ಇರಲಿ, ಇವರಿಬ್ಬರು ಒಂದಾಗುತ್ತಾರಾ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.


ಇದನ್ನೂ ಓದಿ: ಈ ಫೋಟೋದಲ್ಲಿರುವ ಕಂದಮ್ಮ ಸೌತ್ ಸಿನಿರಂಗದಲ್ಲಿ ಪ್ರೈವೇಟ್ ಜೆಟ್ ಹೊಂದಿರುವ ಏಕೈಕ ನಟಿ! ಬರೋಬ್ಬರಿ 183 ಕೋಟಿ ಆಸ್ತಿಯ ಯಜಮಾನಿ!


ಇನ್ನೊಂದೆಡೆ ರಶ್ಮಿಕಾ ಮೊದಲ ಪ್ರೇಮ ಕೂಡ ದೊಡ್ಡ ವಿವಾದವಾಗಿದೆ. ಏಳು ವರ್ಷಗಳ ಹಿಂದೆ ರಶ್ಮಿಕಾ ತನಗಿಂತ 12 ವರ್ಷ ಹಿರಿಯ ನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿಯಲ್ಲಿದ್ದ ನಟಿ, ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ನಂತರ ರಶ್ಮಿಕಾ ತಮ್ಮ ವೃತ್ತಿಜೀವನದತ್ತ ಗಮನ ಹರಿಸುವ ಉದ್ದೇಶದಿಂದ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಕೂಡ ಮಾಡುಕೊಂಡರು. ಆದರೆ ಆ ಸಂದರ್ಭದಲ್ಲಿ ರಶ್ಮಿಕಾ ಅವರನ್ನು ರಕ್ಷಿತ್ ಶೆಟ್ಟಿ ಫ್ಯಾನ್ಸ್ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ