Bollywood Vs South: ಬಾಲಿವುಡ್ ನ ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬಳಿಕ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ ಪುಷ್ಪ 2 ಬಿಡುಗಡೆಯ ಸಿದ್ದತೆಯಲ್ಲಿ ತೊಡಗಿದ್ದಾಳೆ. ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇದೇ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ತಾನು ಯಾರಿಗೆ ಬೆಂಬಲಿಸುತ್ತಿದ್ದೇನೆ ಎನ್ನುವುದರ ಕುರಿತು ರಶ್ಮಿಕಾ ದಿಟ್ಟ ಹೇಳಿಕೆಯನ್ನು ನೀಡಿದ್ದಾಳೆ. (Entertainment News In Kannada)


COMMERCIAL BREAK
SCROLL TO CONTINUE READING

ರಶ್ಮಿಕಾ ಮಂದಣ್ಣ  ಸಿನಿಮಾ ಲೋಕಕ್ಕೆ ಬಂದು 8 ವರ್ಷಗಳು ಗತಿಸಿವೆ.  2016 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ  'ಕಿರಿಕ್ ಪಾರ್ಟಿ' ಮೂಲಕ ಆಕೆ ತನ್ನ  ವೃತ್ತಿಜೀವನವನ್ನು ಆರಂಭಿಸಿದ್ದಾಳೆ ಮತ್ತು ಅತ್ಯಂತ ಸಮಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಶ್ಮಿಕಾ ಅಭಿಮಾನಿಗಳ ನ್ಯಾಷನಲ್ ಕ್ರಶ್ ಎಂದೆನೆಸಿಕಕೊಂಡು, ಇದೀಗ ಬಾಲಿವುಡ್ ನಲ್ಲೂ (Bollywood) ಹೆಡ್ಲೈನ್ ಗಿಟ್ಟಿಸುತ್ತಿದ್ದಾಳೆ. (Bollywood News In Kannada)


ಅಮಿತಾಭ್ ಬಚ್ಚನ್ (Amitabh Bachchan) ಅಭಿನಯದ ಗುಡ್ ಬೈ (2022) ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ನಂತರ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರ  ಚಿತ್ರ ಮಿಷನ್ ಮಜ್ನುದಲ್ಲಿ ಕಾಣಿಸಿಕೊಂಡಿದ್ದಳು. ಇತ್ತೀಚೆಗೆ, ರಶ್ಮಿಕಾ, ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ಅನಿಮಲ್ನಲ್ಲಿ ತನ್ನ ಮನೋಜ್ಞ ಅಭಿನಯವನ್ನು ಪ್ರದರ್ಶಿಸಿದ್ದಾಳೆ.


Bollywood Vs South ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು? (Rashimika Mandanna Bold Statement On Bollywood Vs South)
ದಕ್ಷಿಣ ಹಾಗೂ ಬಾಲಿವುಡ್ ಎರಡರಲ್ಲೂ ಕೂಡ ಯಶಸ್ವಿಯಾಗಿ ನೆಲೆಯೂರಿರುವ ರಶ್ಮಿಕಾ ಮಂದಣ್ಣ ಇತ್ತೀಚಿನ ಸಂದರ್ಶನವೊಂದರಲ್ಲಿ ಸೌತ್ ವರ್ಸಸ್ ನಾರ್ತ್ ವಿಷಯದ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಎರಡು ಚಿತ್ರರಂಗಗಳನ್ನು ಪ್ರತ್ಯೇಕಿಸುವುದು ಸರಿಯಲ್ಲ ಎಂದು ರಶ್ಮಿಕಾ ಹೇಳಿದ್ದಾಳೆ. ಅಷ್ಟೇ ಅಲ್ಲ ಭಾರತದ ಎಲ್ಲಾ ಚಿತ್ರರಂಗಗಳನ್ನು ಒಟ್ಟಾಗಿ ಭಾರತೀಯ ಚಲನಚಿತ್ರೋದ್ಯಮ (Indian Film Industry) ಎಂದು ಕರೆಯಲು ಪ್ರಾರಂಭಿಸುವ ಕಾಲ ಸನ್ನಿಹಿತವಾಗಿದೆ ಎಂದು ರಶ್ಮಿಕಾ ಹೇಳಿದ್ದಾಳೆ. .


"ನಾವು ಉದ್ಯಮವನ್ನು ಭಾರತೀಯ ಚಲನಚಿತ್ರೋದ್ಯಮ ಎಂದು ಕರೆಯಲು ಪ್ರಾರಂಭಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವೆಲ್ಲರೂ ಮನರಂಜನಾ ಉದ್ಯಮದಲ್ಲಿದ್ದೇವೆ ಮತ್ತು ನಾವೆಲ್ಲರೂ ಒಂದೇ ದೇಶದವರಾಗಿದ್ದೇವೆ. ನಮ್ಮ ದೇಶದ ಎಲ್ಲಾ ಚಿತ್ರೋದ್ಯಮಗಳು ಒಂದೇ ಎಂದು ಒಪ್ಪಿಕೊಳ್ಳಲು ಆರಂಭಿಸುವ ಸಮಯ ಇದು" ಎಂದು ರಶ್ಮಿಕಾ ಹೇಳಿದ್ದಾಳೆ. 


ಬದಲಾವಣೆಯ ಭಾಗವಾಗಿರುವುದು ಖುಷಿ ತಂದಿದೆ ಎಂದ ರಶ್ಮಿಕಾ
ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗ ಮತ್ತು ಹಿಂದಿ ಚಿತ್ರರಂಗ ಎರಡರಲ್ಲೊ ಕೂಡ ಸಾಕಷ್ಟು ಬ್ಯೂಸಿಯಾಗಿದ್ದಾಳೆ. ಈ ಕುರಿತು ಮಾತನಾಡಿರುವ ರಶ್ಮಿಕಾ ಬದಲಾವಣೆಯ ಭಾಗವಾಗಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದು ಹೇಳಿದ್ದಾಳೆ. ರಶ್ಮಿಕಾ ಪ್ರಕಾರ, 


ಇದನ್ನೂ ಓದಿ-Shah Rukh Khan ದಕ್ಷಿಣ ಅಂದರೆ ಕೇವಲ ಇಡ್ಲಿ-ವಡೆ ಅಲ್ಲ, ರಾಮ್ ಚರಣ್ ಕುರಿತು ತಮಾಷೆ ಮಾಡಲು ಹೋಗಿ ತಮಾಷೆಗೊಳಗಾದ ಕಿಂಗ್ ಖಾನ್!


"ಕೆಲವು ಕ್ರೇಜಿ, ಉತ್ತಮ ಚಲನಚಿತ್ರಗಳನ್ನು ಮಾಡಲು ಮತ್ತು ಕೆಲವು ಉತ್ತಮ ಕಥೆಗಳನ್ನು ಹೇಳಲು ನಾವೆಲ್ಲರೂ ಇಲ್ಲಿದ್ದೇವೆ. ಅಂತರ ಕಡಿಮೆಯಾಗುತ್ತಿದೆ. ಜನ ಎಲ್ಲೆ ಇದ್ದರೂ ಬೇರೆ ಬೇರೆ ಉದ್ಯಮಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಅಂಶ ಶ್ಲಾಘನಾರ್ಹವಾಗಿದೆ. ನಾನು ಈ ಬದಲಾವಣೆಯ ಭಾಗವಾಗಿದ್ದೇನೆ ಎಂಬುದು ನಿಜವಾಗಿಯೂ ಖುಷಿ ಕೊಡುತ್ತದೆ" ಎಂದಿದ್ದಾಳೆ. 


ಇದನ್ನೂ ಓದಿ-‘ಪುಷ್ಪ 2’ ಶ್ರೀವಲ್ಲಿ ಪಾತ್ರದಲ್ಲಿ ಬಹುಮುಖ್ಯ ಬದಲಾವಣೆ.. ರಶ್ಮಿಕಾ ಮಂದಣ್ಣ ಕೊಟ್ರು ಬಿಗ್‌ ಅಪ್‌ಡೇಟ್!


ರಶ್ಮಿಕಾ ಮಂದಣ್ಣ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಪ್ರಸ್ತುತ ಆಕೆ ಪುಷ್ಪ 2 (Pushpa 2) ಚಿತ್ರದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆಗೆ ಕಾಣಿಸಿಕೊಳ್ಳಲಿದ್ದಾಳೆ. ಇದಲ್ಲದೆ, ಆಕೆ ವಿಕ್ಕಿ ಕೌಶಲ್ (Vicky Koushal) ಅಭಿನಯದ ಛಾವಾ, ದಿ ಗರ್ಲ್‌ಫ್ರೆಂಡ್ ಮತ್ತು ಅನಿಮಲ್ 2 (Animal 2) ನಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾಳೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ