Rashmika Mandanna Vijay Deverakonda Dating : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎಂದು ರಣಬೀರ್ ಕಪೂರ್ ಸುಳಿವು ನೀಡಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಬಗ್ಗೆ ರಣಬೀರ್ ಯಾರಿಗೂ ತಿಳಿಯದ ಸಂಗತಿಯನ್ನು ಅನ್ನು ಹಂಚಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ಪ್ರಚಾರಕ್ಕಾಗಿ ಅನ್‌ ಸ್ಟಾಪೆಬಲ್ ವಿತ್ ಎನ್‌ಬಿಕೆ ಶೋಗೆ ಚಿತ್ರತಂಡ ತೆರಳಿತ್ತು. ಅರ್ಜುನ್ ರೆಡ್ಡಿ ಪೋಸ್ಟ್ ರಿಲೀಸ್ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಮೊದಲ ಬಾರಿ ರಶ್ಮಿಕಾ ಅವರನ್ನ ಸಂದೀಪ್ ರೆಡ್ಡಿ ವಂಗ ಅವರಿಗೆ ಪರಿಚಯಿಸಿದರಂತೆ. ರಶ್ಮಿಕಾ ವಿಜಯ್‌ಗೆ ವಿಶೇಷ ನಿಕ್‌ ನೇಮ್‌ ಇಟ್ಟಿದ್ದಾರಂತೆ. ಹೀಗೆ ಅನೇಕ ವಿಚಾರಗಳು ಅನ್‌ ಸ್ಟಾಪೆಬಲ್ ವಿತ್ ಎನ್‌ಬಿಕೆ ಶೋ ನಲ್ಲಿ ರಿವೀಲ್‌ ಆಗಿವೆ.


COMMERCIAL BREAK
SCROLL TO CONTINUE READING

ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ಸಂದೀಪ್ ಮತ್ತು ರಶ್ಮಿಕಾ ಅವರನ್ನು ಅರ್ಜುನ್ ರೆಡ್ಡಿ ಮತ್ತು ಅನಿಮಲ್ ನಡುವೆ ಒಂದು ಚಿತ್ರವನ್ನು ಆಯ್ಕೆ ಮಾಡಲು ಕೇಳಿದಾಗ ವಿಜಯ್ ಬಗ್ಗೆ ಸಂಭಾಷಣೆ ಪ್ರಾರಂಭವಾಯಿತು. ರಣಬೀರ್ ಮತ್ತು ವಿಜಯ್‌ ದೇವರಕೊಂಡ ಇವರಲ್ಲಿ ರಿಯಲ್ ಹೀರೋ ಮತ್ತು ರೀಲ್‌ ಹೀರೋ ಯಾರೆಂದು ತಿಳಿಸುವಂತೆ ಕೇಳಿದರು. ಆದರೆ ರಶ್ಮಿಕಾ ಇದಕ್ಕೆ ಉತ್ತರಿಸಲು ಹಿಂಜರಿದರು. ಆಗ ರಶ್ಮಿಕಾ ಅವರ ಫೋನ್‌ನಿಂದ ವಿಜಯ್‌ ಕರೆ ಮಾಡಿದರು. 


ಇದನ್ನೂ ಓದಿ : ಸಲ್ಮಾನ್ ಖಾನ್‌ ಟು ಶಾರುಖ್‌ ಖಾನ್‌.. ಬಾಲಿವುಡ್‌ ನಟರ ಬ್ರೈಡಲ್‌ ಲುಕ್‌ ವೈರಲ್ 


ಕಾಲ್‌ ಲೌಡ್ ಸ್ಪೀಕರ್ಇಡಲಾಗಿತ್ತು. ರಶ್ಮಿಕಾ ಕರೆ ಮಾಡಿ ಹೆಲೋ ಎಂದ ತಕ್ಷಣ ವಿಜಯ್ ದೇವರಕೊಂಡ ‘ವಾಟ್ಸಪ್​ ರೇ’ ಎಂದು ಪ್ರೀತಿಯಿಂದ ಕೇಳಿದ್ದಾರೆ. ಆಗ ಸಡನ್‌ ಆಗಿ ರಶ್ಮಿಕಾ ಫೋನ್ ಸ್ಪೀಕರ್‌ನಲ್ಲಿ ಇದೆ ಎಂದು ವಿಜಯ್‌ ಗೆ ಹೇಳಿದ್ದಾರೆ. ಆಗ ರಣಬೀರ್‌ ಮಾತನಾಡಿದ್ದಾರೆ. ಅದಕ್ಕೆ ವಿಜಯ್‌ ಬಾಲ ಸರ್‌ ಲವ್ಸ್‌ ರಶ್ಮಿಕಾ ಎಂದಿದ್ದಾರೆ. ಅದಕ್ಕೆ ರಶ್ಮಿಕಾ ಮಂದಣ್ಣ ‘ಐ ಲವ್ ಬಾಲ ಸರ್’ ಎಂದಿದ್ದಾರೆ. ‘ಹಾಗಾದರೆ ವಿಜಯ್ ಯಾರನ್ನು ಪ್ರೀತಿಸೋದು’ ಎಂದು ಬಾಲಯ್ಯ ಕೇಳಿದಾಗ, ಐ ಲವ್ ಸಂದೀಪ್ ರೆಡ್ಡಿ ವಂಗ ಎಂದಿದ್ದಾರೆ ವಿಜಯ್. 


ರಣಬೀರ್ ಕಪೂರ್ ಅವರು ರಶ್ಮಿಕಾ ಮಂದಣ್ಣ ಹಾಗೂ ಸಂದೀಪ್ ರೆಡ್ಡಿ ವಂಗ ಭೇಟಿ ಬಗ್ಗೆ ಇಲ್ಲಿ ರಿವೀಲ್‌ ಮಾಡಿದ್ದಾರೆ. ವಿಜಯ್ ದೇವರಕೊಂಡ ಮನೆಯಲ್ಲಿ ಅರ್ಜುನ್ ರೆಡ್ಡಿ ಸಕ್ಸಸ್ ಪಾರ್ಟಿ ನಡೆಯಿತು. ಆಗ ಮನೆಯ ಟೆರೇಸ್‌ನಲ್ಲಿ ರಶ್ಮಿಕಾ ಅವರನ್ನು ಸಂದೀಪ್ ಮೊದಲ ಭಾರಿ ಭೇಟಿಯಾದರು ಎಂದು ಹೇಳಿದ್ದಾರೆ. ಆಗ ರಶ್ಮಿಕಾ ಶಾಕ್‌ ಆಗಿ, ಇವರು ಯಾಕೆ ಇದೆಲ್ಲ ಹೇಳ್ತಿದ್ದಾರೆ ಅರ್ಥ ಆಗ್ತಿಲ್ಲ ಎಂದಿದ್ದಾರೆ. ಸಖತ್‌ ಫನ್ನಿಯಾಗಿ ಈ ವಿಡಿಯೋ ಮೂಡಿಬಂದಿದೆ. 


ಇದನ್ನೂ ಓದಿ : Animal: ಅನಿಮಲ್‌ ಟ್ರೇಲರ್‌ ರಿಲೀಸ್‌..! ವಿಶ್ವರೂಪ ತೋರಿದ ರಣಬೀರ್‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.