ದಾರಿಗಳು ನದಿಗಳಾಗಿ,ಕೊಡಗು ಸಮುದ್ರವಾಗಿ..ನೀರು ಬಿಟ್ಟರೆ ಕಣ್ಣೀರು...
ಬೆಂಗಳೂರು: ಈ ಸಾಲುಗಳು ಕೊಡಗಿನಲ್ಲಿನ ಭೀಕರ ಪ್ರವಾಹದ ಕುರಿತಾಗಿ ಯಾರೋ ಕನ್ನಡದ ಪ್ರಖ್ಯಾತ ಕವಿ ರಚಿಸಿದ ಸಾಲುಗಳಲ್ಲ, ಈ ಸಾಲುಗಳನ್ನು ಬರೆದಿರುವುದು ಕನ್ನಡದ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ.
ಹೌದು, ಪಶ್ಚಿಮ ಘಟ್ಟದ ಸೆರಗಿನಲ್ಲಿನ ಕೊಡಗು ಜನರ ಬದುಕು ಈಗ ಅಕ್ಷರಶಃ ದ್ವೀಪದಂತಾಗಿದೆ.ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಜನರ ಬದುಕು ಅಯೋಮಯ ಎನ್ನುವಂತಿದೆ.ಈಗ ಇಂತಹ ಸಂದರ್ಭದಲ್ಲಿ ಕೊಡಗಿಗೆ ಬರುತ್ತಿರುವ ನೆರವಿನ ಸಹಾಯ ಹಸ್ತಕ್ಕೆ ಈ ಕೊಡಗಿನ ಬೆಡಗಿ ವದ್ದೆಗಣ್ಣುಗಗಳ ವಂದನೆ ಸಲ್ಲಿಸಿದ್ದಾಳೆ. ರಶ್ಮಿಕ ಮಂದಣ್ಣ ತಮ್ಮ ಟ್ವೀಟರ್ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ನಲ್ಲಿ ಕವಿತೆ ರೂಪದಲ್ಲಿ ತನ್ನ ಕೃತಜ್ಞತೆ ಸಲ್ಲಿಸಿದ್ದಾಳೆ.
" ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ
ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ....ನಾ ಹುಟ್ಟಿದ ಬೆಳೆದ ಆಡಿದ್ದ ಓದಿದ್ದ ಕೊಡುಗು ಇಂದು ಮುಳುಗಿದ ಹಡಗಾಗಿದೆ" ಎಂದು ಪ್ರಾರಂಭವಾಗುವ ರಶ್ಮಿಕಾ ಅವರ ಸಾಲುಗಳು ನಿಜಕ್ಕೂ ಎಲ್ಲರ ಮನ ತಟ್ಟುವಂತಿವೆ.