Rashmika Mandanna : ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿತ್ತಿರುವ ಕನ್ನಡತಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಗಾಗ ಕ್ಯೂಟ್‌ ಕ್ಯೂಟಾಗಿರುವ ವಿಡಿಯೋ ಮತ್ತು ಫೋಟೋಸ್‌ಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ದಿನಚರಿ ಹಾಗೂ ಪ್ಯಾನ್ಸ್‌ಗಳ ಜೊತೆ ಸದಾ ಟಚ್‌ನಲ್ಲಿರುವ ರಶ್ಮಿಕಾ ಇದೀಗ ಮುದ್ದಾದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡುಗರ ಮನ ಕದ್ದಿದೆ.


COMMERCIAL BREAK
SCROLL TO CONTINUE READING

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ವಿಶ್‌ ಮಾಡಲು ರಶ್ಮಿಕಾಗೆ ಆಗಲಿಲ್ಲ ಅನ್ಸುತ್ತೆ. ಅದಕ್ಕಾಗಿ ಇದೀಗ ಕ್ಯೂಟ್‌ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಮಹಿಳಾ ದಿನದ ಶುಭ ಕೋರಿದ್ದಾರೆ. ಅಲ್ಲದೆ, ನಾನು ಈ ವಿಡಿಯೋವನ್ನು ನಿಮ್ಮ ಜೊತೆ ಹಂಚಿಕೊಂಡು, ಮಹಿಳಾ ದಿನಾಚರಣೆ ದಿನದ ಶುಭ ಕೋರಬೇಕು ಅಂತ ಅಂದುಕೊಂಡಿದ್ದೆ, ಆದ್ರೆ ಸ್ವಲ್ಪ ತಡವಾಯ್ತು... ಸ್ವಾರಿ ಅಂತ ಮುದ್ದಾಗಿ ಕ್ಷಮೇ ಕೇಳಿದ್ದಾರೆ.



ಇದನ್ನೂ ಓದಿ: ದುಬೈನಲ್ಲಿ ನರೇಶ್ ಪವಿತ್ರ ಹನಿಮೂನ್..! ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟ ಜೋಡಿ


ಸದ್ಯ ರಶ್ಮಿಕಾ ಶೇರ್‌ ಮಾಡಿರುವ ವಿಡಿಯೋದಲ್ಲಿ ರಶ್ಶು ಪುಟ್ಟ ಮಗುವಿನ ಜೊತೆ ತಾನು ಮಗುವಾಗಿ ಆಟವಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಅಲ್ಲದೆ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ. ಇತ್ತೀಚಿಗೆ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರ ಜೊತೆ ʼಮಿಷನ್ ಮಜ್ನುʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಅಲ್ಲು ಅರ್ಜುನ್ ಜೊತೆ ಪುಷ್ಪಾ ಸೀಕ್ವೆಲ್​ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.