Rashmika Mandanna Shares Photo from Pushpa The Rule Set : 'ಪುಷ್ಪಾ 2: ದಿ ರೂಲ್' ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.  ಈ ಚಿತ್ರವು ಮೊದಲ ಭಾಗಕ್ಕಿಂತ ಕುತೂಹಲಕಾರಿಯಾಗಿರಲಿದೆ ಎನ್ನುವುದನ್ನು ಅಲ್ಲು ಅರ್ಜುನ್ ಕೂಡಾ ಹಂಚಿಕೊಂಡಿದ್ದಾರೆ. ಇದು ಜನರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಸೆಟ್‌ನಿಂದ ಹೊಸ ಫೋಟೋವನ್ನು ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

'ಪುಷ್ಪ 2: ದಿ ರೂಲ್' ಚಿತ್ರೀಕರಣದಲ್ಲಿ ನಿರತರಾಗಿರುವ ನಟಿ ರಶ್ಮಿಕಾ ಮಂದಣ್ಣ  ಚಿತ್ರದ ಸೆಟ್‌ಗಳಿಂದ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕ ಸುಕುಮಾರ್ ಸಿಂಹದ ಪ್ರತಿಮೆಯ ಬಳಿ ನಿಂತಿರುವುದನ್ನು ಕಾಣಬಹುದು.


ಇದನ್ನೂ ಓದಿ : Upendra UI Film Song: ಪ್ರೇಮಿಗಳ ದಿನಕ್ಕೆ ಹೊಸ ಸರ್ಪ್ರೈಸ್‌ ನೀಡಲಿದ್ದಾರೆ ರಿಯಲ್‌ ಸ್ಟಾರ್‌


'ಪುಷ್ಪ 2: ದಿ ರೂಲ್' ಚಿತ್ರದ ಶೂಟಿಂಗ್ : 
'ಪುಷ್ಪ 2: ದಿ ರೂಲ್' ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. 'ಪುಷ್ಪ 2: ದಿ ರೂಲ್' ಚಿತ್ರವು 15 ಆಗಸ್ಟ್ 2024 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದೆ.


ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ ಈ ಚಿತ್ರದ ಸೀಕ್ವೆಲ್‌ ನೊಂದಿಗೆ ಮರಳುತ್ತಿದ್ದಾರೆ. ಮುಂದಿನ ಭಾಗದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ : ಟ್ರೈಲರ್ ನೋಡಿದ್ರೆ ಸಿನಿಮಾ ಬಗ್ಗೆ ಆಸಕ್ತಿ ಮೂಡುತ್ತೆ


2 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ 'ಪುಷ್ಪ: ದಿ ರೈಸ್': 
'ಪುಷ್ಪ: ದಿ ರೈಸ್' ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಿಸಿರುವ 'ಪುಷ್ಪ' ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಮಿರೋಸ್ಲಾವ್ ಕುಬಾ ಬ್ರೋಜೆಕ್ ಅವರ ಛಾಯಾಗ್ರಹಣವಿದೆ.ಚಿತ್ರದ ಸಂಕಲನವನ್ನು ಕಾರ್ತಿಕಾ ಶ್ರೀನಿವಾಸ್ ಮತ್ತು ರೂಬೆನ್ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.