Rashmika Mandanna : ಸಾಲು ಸಾಲು ವಿವಾದಗಳಿಂದ ರಶ್ಮಿಕಾ ಮಂದಣ್ಣ ರಾಷ್ಟ್ರವ್ಯಾಪಿ ಟ್ರೆಂಡ್ ಆಗಿದ್ದಾರೆ. ಇತ್ತೀಚಿಗೆ ಕನ್ನಡ ಸಿನಿರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ರಶ್ಮಿಕಾ ಕಿರಿಕ್‌ ಪಾರ್ಟಿ ಪ್ರೋಡಕ್ಷನ್‌ ಹೆಸರಿನ ವಿಚಾರದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸೌತ್‌ ಸಿನಿ ಪ್ರೇಕ್ಷಕರ ಸಿಟ್ಟಿಗೆ ಕಾರಣರಾಗಿದ್ದಾರೆ.


COMMERCIAL BREAK
SCROLL TO CONTINUE READING

ರಶ್ಮಿಕಾ ಮಂದಣ್ಣ ಮೇಲೆ ಸಾಲು ಸಾಲು ವಿವಾದಗಳು ಕೇಳಿಬರುತ್ತಿವೆ. ಅವರ ಹೇಳಿಕೆಗಳು ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ತಮ್ಮ ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ನಿರ್ಮಾಣ ಸಂಸ್ಥೆಯ ಹೆಸರನ್ನೂ ಹೇಳದೆ ತಮಾಷೆ ಮಾಡಿದ್ದರು. ಇದರೊಂದಿಗೆ ರಶ್ಮಿಕಾ ಅವರನ್ನು ಕನ್ನಡದಲ್ಲಿ ಬ್ಯಾನ್ ಮಾಡುವ ವಿಚಾರವೂ ಮುನ್ನೆಲೆಗೆ ಬಂದಿತ್ತು. ಕೊನೆಗೆ ರಶ್ಮಿಕಾ ಈ ವಿವಾದಕ್ಕೆ ಪುಲ್ ಸ್ಟಾಪ್ ಹಾಕಲು ಯತ್ನಿಸಿದ್ದರು.


ಇದನ್ನೂ ಓದಿ: Siddharth : ʼಹಿಂದಿ ಮಾತನಾಡಲಿಲ್ಲ ಅಂತ ಕಟುವಾಗಿ ವರ್ತಿಸಿದ್ರು..ʼ ನಟ ಸಿದ್ಧಾರ್ಥ್‌ ಪೋಸ್ಟ್‌ ವೈರಲ್‌..!


ಇನ್ನು, ನಾನು ಕಾಂತಾರ ಸಿನಿಮಾ ನೋಡಿಲ್ಲ.. ಈಗ ನೋಡಿದ್ದೇನೆ.. ಇಷ್ಟವಾಯಿತು.. ಇದೇ ವಿಚಾರವಾಗಿ ಟೀಮ್‌ಗೆ ಮೆಸೇಜ್ ಮಾಡಿದ್ದೆ. ಅವರೂ ಧನ್ಯವಾದ ತಿಳಿಸಿದರು ಅಂತ ಹೇಳುವ ಮೂಲಕ.. ಕಾಂತಾರ ವಿವಾದವನ್ನು ತಣ್ಣಗೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಇದೀಗ ರಶ್ಮಿಕಾ ಮತ್ತೊಂದು ಹೇಳಿಕೆಯ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಶ್ಮಿಕಾ ಬಾಲಿವುಡ್ ಹಾಡುಗಳು ಮತ್ತು ಸೌತ್ ಹಾಡುಗಳ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದು ಸೌತ್‌ ಸಿನಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.


ʼಮಿಷನ್ ಮಜ್ನುʼ ಚಿತ್ರದ ಹಾಡುಗಳ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ರೊಮ್ಯಾಂಟಿಕ್ ಹಾಡುಗಳನ್ನು ಪ್ರದರ್ಶಿಸುವುದರಲ್ಲಿ ಬಾಲಿವುಡ್ ಬೆಸ್ಟ್.. ಸೌತ್‌ನ ಸಾಂಗ್‌ಗಳಲ್ಲಿ ಮಾಸ್ ಮತ್ತು ಮಸಾಲಾ ಹೆಚ್ಚಾಗಿತ್ತದೆ ಎಂದು ಹೇಳಿದ್ದರು. ಇದೀಗ ಇದೇ ಹೇಳಿಕೆ ಸೌತ್‌ ಸಿನಿ ಪ್ರೇಕ್ಷಕರಿಗೆ ಅಸಮಾಧಾನ ಉಂಟುಮಾಡಿದೆ. ಈ ಮೂಲಕ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ.


ಇದನ್ನೂ ಓದಿ: ವರುಣ್ ಕಟ್ಟೀಮನಿ ನಿರ್ದೇಶನದ ಜವಾರಿ ಭಾಷೆಯ ‘ಬಯಲು ಸೀಮೆ’ ರಿಲೀಸ್ ಗೆ ರೆಡಿ


ಅಲ್ಲದೆ, ಕನ್ನಡದಿಂದ ಸೌತ್‌ಗೆ ಬಂದ ಮೇಲೆ.. ಕನ್ನಡವನ್ನು ಕೀಳಾಗಿ ಮಾತನಾಡುತ್ತಿದ್ದೀರಿ.. ಈಗ ದಕ್ಷಿಣದಿಂದ ಉತ್ತರಕ್ಕೆ ಹೋದ ಮೇಲೆ ಸೌತ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದೀರಿ.. ಸೌತ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹಾಡುಗಳಿಲ್ಲವೇ? ಅವರು ಅದನ್ನು ಇಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲವೇ? ಈಗ ಎಲ್ಲವೂ ದಕ್ಷಿಣದತ್ತ ಸಾಗುತ್ತಿದೆ.. ನಿಮಗೆ ಬಾಲಿವುಡ್ ಇಷ್ಟವೇ? ಎಂದು ನೆಟ್ಟಿಗರು ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.