Rashmika Taught Kannada To Ranbir:ಬಾಲಿವುಡ್‌ನ ಬಹುನಿರೀಕ್ಷಿತ 'ಅನಿಮಲ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದ್ದು, ರಣ್‌ಬೀರ್ ಜೋಡಿಯಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ.ಈಗಾಗಲೇ 'ಅನಿಮಲ್' ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿ, ರಣ್‌ಬೀರ್- ರಶ್ಮಿಕಾ ಕಾಂಬಿನೇಷನ್‌ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ರು ರಶ್ಮಿಕಾಗೆ ಬ್ರೇಕ್ ಸಿಕ್ಕಿರದ ಕಾರಣ 'ಅನಿಮಲ್' ಚಿತ್ರದ ಮೇಲೆ ಭಾರೀ ಭರವಸೆಯಿಂದ ಇದ್ದಾರೆ. 


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ರಣ್‌ಬೀರ್ -ರಶ್ಮಿಕಾ ಪ್ರಮೋಷನ್‌ನಲ್ಲಿ ಭಾಗವಹಿಸಲು ಹೋದಾಗ ಫೋಟೊಗ್ರಫರ್ ಒಬ್ಬರು ಕನ್ನಡದಲ್ಲಿ ಮಾತನಾಡಲು ಹೇಳಿದ್ದರಿಂದ ತಕ್ಷಣ ರಶ್ಮಿಕಾ "ಎಲ್ಲರಿಗೂ ನಮಸ್ಕಾರ" ಎಂದು ಹೇಳಿ, ರಣ್‌ಬೀರ್‌ಗೂ ಸಹ ಹೇಳಿಕೊಟ್ಟಿದ್ದಾರೆ.  ಬಳಿಕ ರಣ್‌ಬೀರ್ ಫೋಟೋಗ್ರಫರ್‌ನ ನೋಡಿ ನಿಮಗೆ ಕನ್ನಡ ಬರುತ್ತಾ ಎಂದು ಪ್ರಶ್ನಿಸಿದಾಗ, ಆತ ಹೌದು ಸರ್, ನಾನು ಕರ್ನಾಟಕ, ಹುಬ್ಬಳ್ಳಿಯಿಂದ ಬಂದಿದ್ದೀನಿ ಎಂದಿದ್ದಾರೆ. ಅದಕ್ಕೆ ರಣಬೀರ್‌,ಸರಿ ನೀವೇ ಹೇಳಿಕೊಡಿ, ರಶ್ಮಿಕಾ ಜೊತೆ ಕನ್ನಡ ಮಾತಾಡಿ ಎಂದಿದ್ದಾರೆ. 


ಇದನ್ನೂ ಓದಿ: ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಗೊತ್ತೆ..? ದಿಗ್ಗಜ ನಟರನ್ನೂ ಹಿಂದಿಕ್ಕಿದ ಸ್ಟಾರ್‌ ನಟ ಇವರು


 ಸದ್ಯ ರಣ್‌ಬೀರ್ ಕನ್ನಡ ಮಾತನಾಡಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗುತ್ತಿದ್ದು, ಆದರೆ ನೆಟ್ಟಿಗರು ಮಾತ್ರ ರಶ್ಮಿಕಾಗೆ ಕನ್ನಡ ಸರಿಯಾಗಿ ಬರಲ್ಲ, ಆಕೆ ಏನು ಕನ್ನಡ ಪಾಠ ಮಾಡೋದು, ಸಿನಿಮಾ ಪ್ರಚಾರಕ್ಕೆ ಇದೆಲ್ಲ ಡ್ರಾಮಾ ಅಷ್ಟೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ರಶ್ಮಿಕಾ ಈ ಹಿಂದೆ ಸಾಕಷ್ಟು ಬಾರಿ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿಕೊಂಡಿದ್ದರು, ಈಕೆಗೆ ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಭಾಷೆಗಳಲ್ಲಿ ಮಾತನಾಡಲು ಯತ್ನಿಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಯಾಕೆ ಈ ರೀತಿ ಮಾಡುತ್ತಾರೆ ಎನ್ನುವ ಕೆಲವರು ಬೇಸರ ವ್ಯಕ್ತಪಡಿಸಿದ್ದರು. 


'ಡಿಯರ್ ಕಾಮ್ರೆಡ್' ಸಿನಿಮಾ ಪ್ರಚಾರದ ವೇಳೆ "ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ" ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದರು. ಆಕೆಯ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 'ಪೊಗರು' ಬಳಿಕ ರಶ್ಮಿಕಾ ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಬರೀ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. 'ಅನಿಮಲ್' ಚಿತ್ರ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ರಶ್ಮಿಕಾ ಕನ್ನಡದಲ್ಲಿ ತಮ್ಮ ಗೀತಾಂಜಲಿ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.