Rashmika Mandanna In Animal Pre-release Event: ರಶ್ಮಿಕಾ ಮಂದಣ್ಣ ಭಾರತದಾದ್ಯಂತ ಫೇಮಸ್ ಆಗಿದ್ದು, ಸದ್ಯ ನ್ಯಾಷನಲ್ ಕ್ರಶ್ ಇವಾಗ ಪ್ಯಾನ್ ಇಂಡಿಯಾ ಸ್ಟಾರಾಗಿದ್ದಾರೆ. ರಣ್‌ಬೀರ್ ಕಪೂರ್ ನಟಿಸಿರುವ 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರಗಡ್ ಪಾತ್ರದಲ್ಲಿ ನಟಿಸಿದ್ದು, ತೆರೆಮೇಲೆ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಇಬ್ಬರ ಕೆಮಿಸ್ಟ್ರಿ ಬಗ್ಗೆ ಟೀಸರ್ ರಿಲೀಸ್ ಆದಾಗಿನಿಂದಲೂ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ ಕಿಸ್ಸಿಂಗ್ ಸೀನ್ ನೋಡಿದ ಮೇಲೆ ರಶ್ಮಿಕಾರನ್ನು ಟ್ರೋಲ್ ಮಾಡಿದ್ದರೂ, ಅದ್ಯಾವುದಕ್ಕೂ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಸಿನಿಮಾ ಪ್ರಚಾರಕ್ಕೆ ಅಂತ ಬೆಂಗಳೂರಿಗೆ ಬಂದಿರೋ ರಶ್ಮಿಕಾಗೆ ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನೆ ಎದುರಾಗಿತ್ತು. 


COMMERCIAL BREAK
SCROLL TO CONTINUE READING

ಅನಿಮಲ್‌ ಚಿತ್ರದ ಪ್ರಮೋಷನಲ್ಲಿ, ಸಿನಿಮಾದಲ್ಲಿ ಕಿಸ್ಸಿಂಗ್ ಅನ್ನು ಹೇಗೆ ಫ್ರೇಮ್ ಮಾಡುತ್ತೀರಾ ಅಂತ ಮಾಧ್ಯಮದವರು ಪ್ರಶ್ನೆ ಮಾಡಿದಕ್ಕೆ ರಶ್ಮಿಕಾ ಮಂದಣ್ಣ ನಿರ್ದೇಶಕರ ಕಡೆ ಬೆರಳು ಮಾಡಿದ್ದಾರೆ. ರಶ್ಮಿಕಾ ಸ್ವತಃ ತಾವೇ ಆ ಸೀನ್ ಮಾಡಲು ಒಪ್ಪಿಕೊಂಡೆ ಅನ್ನೋದನ್ನು 'ಅನಿಮಲ್' ಪ್ರೀ ರಿಲೀಸ್ ಪ್ರೆಸ್‌ಮೀಟ್‌ನಲ್ಲಿ ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ರಶ್ಮಿಕಾ, ಕಿಸ್ಸಿಂಗ್ ಸೀನ್ ಅನ್ನೋದು ನಿರ್ದೇಶಕರು ತಮ್ಮ ಶೈಲಿಯಲ್ಲಿ ಪ್ರೀತಿಯ ಕಥೆಯನ್ನು ಹೇಳುವುದಕ್ಕೆ ಇರುವ ಸಾಧನಾ ಎಂದು ಕಾರಣ ತಿಳಿಸಿದ್ದಾರೆ. 


ಇದನ್ನೂ ಓದಿ: ಕಾಂತಾರಾ ಫಸ್ಟ್‌ ಲುಕ್‌ ಔಟ್:‌ ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡದಿಂದ ವಿಶೇಷ ಪೂಜೆ...


ಮಾಧ್ಯಮದವರ ಮುಂದೆ ರಶ್ಮಿಕಾ "ಕಿಸ್ಸಿಂಗ್ ಸೀನ್ ಅನ್ನೋದು ನಿರ್ದೇಶಕರ ಮೇಲೆ ನಿರ್ಧಾರ ಆಗಿದೆ. ಕಿಸ್ ಸೀನ್ ಅನ್ನೋದು ನಿರ್ದೇಶಕರಿಗೆ ಒಂದು ಸ್ಟೋರಿಯನ್ನು ಹೇಳುವುದಕ್ಕೆ ಇರುವ ಒಂದು ಸಾಧನ. ನಿರ್ದೇಶಕರು ಏನು ಅಂದುಕೊಂಡಿದ್ದಾರೋ ಅದನ್ನು ನಾವು ಎಷ್ಟು ಅದ್ಭುತವಾಗಿ ನಟಿಸಿ ತೋರಿಸುತ್ತೇವೆಯೋ ಅದು ಇಲ್ಲಿ ಮುಖ್ಯ ಆಗುತ್ತೆ. ಇದು ನಿರ್ದೇಶಕರ ಮೇಲೆ ನಾವು ಇಟ್ಟಿರುವ ನಂಬಿಕೆ. ಇಲ್ಲ ನಿರ್ದೇಶಕರಿಗೆ ಇದು ಸರಿ ಇದೆಯೋ? ಇಲ್ಲವೋ? ನಾವು ಕೇಳಬಹುದು ಅಷ್ಟೇ?" ಎಂದು ಹೇಳಿದ್ದಾರೆ. 


ಕಿಸ್ಸಿಂಗ್ ಸೀನ್‌ನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗಿದ್ದು, ಕೆಲವರು ಈ ನಟಿಗೆ ಬೆಂಬಲ ಸೂಚಿಸಿದ್ದರು. ಬೋಲ್ಡ್ ಸೀನ್‌ನಲ್ಲಿ ನಟಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದರೇ, ಮತ್ತೆ ಕೆಲವು ಟ್ರೋಲ್ ಮಾಡಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮತ್ತೆ "ನಿರ್ದೇಶಕರಿಗೆ ಅದು ಬೇಕು ಅಂದರೆ, ನಾವು ಮಾಡಬೇಕು. ಹೀಗೆ ಮಾಡುವುದರಿಂದ ಸಿನಿಮಾ ಮ್ಯಾಸಿವ್ ಹಿಟ್ ಆಗುತ್ತೆ ಅಂತ ಮಾಡಿದ್ದಲ್ಲ. ನಿರ್ದೇಶಕರಿಗೆ ಇದು ಬೇಕು ಅಂದಾಗ ಮಾಡುತ್ತೇವೆ. ನಿರ್ದೇಶಕರ ನಿರ್ಧಾರವನ್ನು ಕಣ್ಮುಚ್ಚಿ ಒಪ್ಪಿಕೊಳ್ಳುತ್ತೇವೆ. ಅದನ್ನೇ ನಾನು ಮಾಡಿದ್ದೇನೆ." ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 


ಇದನ್ನೂ ಓದಿ: ಡ್ಯಾನ್ಸರ್ ಆಗಿ ಕರಿಯರ್ ಆರಂಭಿಸಿದ್ದ ಈತ ಇಂದು ಬಾಲಿವುಡ್’ನ ಸೂಪರ್’ಸ್ಟಾರ್… 1000 ಕೋಟಿ ರೂ. ಸಂಭಾವನೆ ಪಡೆಯುವ ನಟ


'ಅರ್ಜುನ್ ರೆಡ್ಡಿ', 'ಕಬೀರ್ ಸಿಂಗ್' ಸಿನಿಮಾ ನಿರ್ದೇಶಿಸಿರುವ ಸಂದೀಪ್ ರೆಡ್ಡಿ ವಂಗಾ 'ಅನಿಮಲ್‌'ಗೆ ಆಕ್ಷನ್ ಕಟ್ ಹೇಳಿದ್ದು, ಇದೂ ಕೂಡ ರಗಡ್ ಸಿನಿಮಾ. ಲವರ್ ಬಾಯ್ ಆಗಿ ಕಂಡಿದ್ದ ರಣ್‌ಬೀರ್ ಕಪೂರ್ ಈ ಚಿತ್ರದ ಮೂಲಕ ರಗಡ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಷ್ಟೇ ರಗಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, "ನಾನು ಮಾಡುತ್ತಿರುವ ಗೀತಾಂಜಲಿ ಪಾತ್ರ ತುಂಬಾನೇ ಸುಂದರವಾಗಿ, ರಗಡ್ ಆಗಿದೆ. ಯಾವುದೇ ಶುಗರ್ ಕೋಟಿಂಗ್, ಫಿಲ್ಟರ್ ಹಾಕದೆ ರಿಯಲ್ ಆಗಿದೆ. ಇದೂವರೆಗೂ ನಾನು ಮಾಡಿರುವ ಅತ್ಯಂತ ಅದ್ಭುತವಾದ ಪಾತ್ರ. ಇದು ಪ್ರೇಕ್ಷಕರಿಗೆ ಪ್ರೀತಿಯನ್ನು ತಿಳಿಸುವ ಸಂದೀಪ್ ಸರ್ ಅವರ ಒಂದು ವಿಧಾನ." ಎಂದು ತನ್ನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.