Rashmika Mandanna : ನಿರ್ದೇಶಕ ಶೇಖರ್ ಕಮ್ಮುಲ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ 'ಡಿ 51'. ಈ ಚಿತ್ರದಲ್ಲಿ ಧನುಷ್​ಗೆ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದು, ಈ ಕುರಿತು ಸ್ವತಃ ರಶ್ಮಿಕಾ ಮಂದಣ್ಣ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟಿ ರಶ್ಮಿಕಾ ಹಾಗೂ ನಟ ಧನುಷ್‌ ಇಬ್ಬರು ಮೊದಲು ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಸಹಜವಾಗಿಯೇ ಈ ಸಿನಿಮಾ ಕುತೂಹಲಕ ಹೆಚ್ಚಿಸುತ್ತದೆ. ಇನ್ನು ಡಿ 51 ಎಂದು ಚಿತ್ರಕ್ಕೆ ತಾತ್ಕಾಲಿಕವಾಗಿ ನಾಮಕರಣ ಮಾಡಲಾಗಿದೆ. 



ಇದನ್ನೂ ಓದಿ-Upendra Controversy : ನಟ ಉಪೇಂದ್ರಗೆ ಬಂಧನ ಭೀತಿ! ರಿಯಲ್​ ಸ್ಟಾರ್‌ ಮನೆಗೆ ಬಂತು ಪೊಲೀಸ್ ನೋಟಿಸ್​?


ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೇ ಇದು ಧನುಷ್‌ ಅವರ ಮೊದಲ ತೆಲುಗು ಸಿನಿಮಾ. ಸದ್ಯ ಈ ಚಿತ್ರದ ಪೂರ್ವ ನಿರ್ಮಾಣ ಆರಂಭವಾಗಿದ್ದು, ಡಿಸೆಂಬರ್‌ನಿಂದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. 


ಧನುಷ್‌ ಹಾಗೂ ಶೇಖರ್ ಕಮ್ಮುಲ ಅವರ ಈ ಬಿಗ್‌ ಬಜೆಟ್‌ ಚಿತ್ರ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಈ ಚಿತ್ರದಲ್ಲಿ ಬೇರೆ ಭಾಷೆಯ ನಟರು ನಟಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. 


ಇದನ್ನೂ ಓದಿ-ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾ ಘೋಷಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.