`ಈ ವಿಷಯಗಳು ಸಾಮಾನ್ಯವಲ್ಲ. ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ`: ಸುದ್ದಿಗೋಷ್ಠಯಲ್ಲಿ ಡೀಪ್‌ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಾತು!
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದವರು ಡೀಪ್‌ಫೇಕ್ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೌನ ಮುರಿದು ಮಾತಾಡಿದ್ದಾರೆ.
Rashmika Mandanna Talked About Deep Fake Video: ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಮುಂದುವರೆದಂತೆ ಸೆಲೆಬ್ರಿಟಿಗಳಿಗೆ ಡೀಪ್‌ಫೇಕ್ ಹೊಸ ಸಮಸ್ಯೆಯಾಗಿ ಪರಿಣಮಿಸಿದ್ದು, ಒಬ್ಬರ ಬಳಿಕ ಒಬ್ಬರ ಫೇಕ್ ವಿಡಿಯೋಗಳು ವೈರಲ್ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದ ಬಳಿಕ ಕತ್ರೀನಾ ಕೈಫ್, ಕಾಜೋಲ್ ಡೀಪ್‌ಫೇಕ್ ವಿಡಿಯೋಗಳು ಸುದ್ದಿಯಾಗಿತ್ತು. ಎರಡು ದಿನಗಳಿಂದ ಆಲಿಯಾ ಭಟ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಟಿ ರಶ್ಮಿಕಾ ತಮ್ಮ ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದಿದ್ದರು. ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ 'ಅನಿಮಲ್' ಈ ವಾರ ತೆರೆಗೆ ಬರ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ತಂಡ ಹೈದರಾಬಾದ್‌ಗೆ ಹೋಗಿದ್ದ ವೇಳೆ ಮಾಧ್ಯಮಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ಮಾಧ್ಯಮದವರು ರಶ್ಮಿಕಾಗೆ ನಿಮ್ಮ ಡೀಪ್‌ಫೇಕ್ ವಿಡಿಯೋ ಬಂದಾಗ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಬೆಂಬಲಕ್ಕೆ ನಿಂತರು. ಆ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಿದಕ್ಕೆ "ಈ ಸಮಸ್ಯೆ ಎಲ್ಲರಿಗೂ ಇದೆ. ಮೊದಲಿಗೆ ಅಮಿತಾನ್ ಬಚ್ಚನ್ ಸರ್ ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು. ಮೊದಲು ಆ ವಿಡಿಯೋ ನೋಡಿದಾಗ ನೋವಾಯಿತು. ಆದ್ರೆ ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಮೊದಮೊದಲು ಭಯ ಆಯ್ತು.. ಆದ್ರೆ ನಾವೇನು ಮಾಡೋಕೆ ಸಾಧ್ಯ ಎಂದುಕೊಂಡೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದ್ರೆ ಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದ್ದು ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದುಕೊಂಡೆ" ಎಂದು ಉತ್ತರಿಸಿದರು.
ಇದನ್ನೂ ಓದಿ: Harom Hara: ತೆಲುಗು ಯುವನಟನ ಸಿನಿಮಾಗೆ ಕಿಚ್ಚ ಸಾಥ್... ಟೀಸರ್ ರಿಲೀಸ್ ಮಾಡಿದ ಸುದೀಪ್
ರಶ್ಮಿಕಾ ತಮ್ಮ ಮಾತು ಮುಂದುವರೆಸುತ್ತಾ "ಇದೇ ಕಾರಣಕ್ಕೆ ಈಗ ಡೀಪ್‌ಫೇಕ್ ಬಗ್ಗೆ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ.. ಈ ವಿಷಯಗಳು ಸಾಮಾನ್ಯವಲ್ಲ.. ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ.. ಪ್ರತಿಕ್ರಿಯಿಸಿ.. ಜನ ಬೆಂಬಲಿಸುತ್ತಾರೆ.. ನಾವು ಒಳ್ಳೆ ದೇಶದಲ್ಲಿದ್ದೇವೆ" ಎಂದು ಹೇಳಿದ್ದಾರೆ. ತಿಂಗಳ ಹಿಂದೆ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದ್ದಾಗ ಅಮಿತಾಬ್ ಬಚ್ಚನ್, ವಿಜಯ್ ದೇವರಕೊಂಡ, ನಾಗಚೈತನ್ಯಾ ಸೇರಿದಂತೆ ಹಲವರು ಆಕೆಯ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ರಶ್ಮಿಕಾ ಟ್ವೀಟ್ ಮಾಡಿ "ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆದರೂ ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೇ, ಈ ರೀತಿ ಏನಾದರೂ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ" ಪ್ರತಿಕ್ರಿಯಿಸಿದ್ದರು.
"ಮಹಿಳೆಯಾಗಿ ಮತ್ತು ನಟಿನಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಎಂಬುದು ನಿಜಕ್ಕೂ ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಮನವಿ ಮಾಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.