ಕನ್ನಡ ಯುವಜನತೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಚಿತ್ರ ರಶ್ಮಿಕಾ ಮಂದಣ್ಣ- ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಹಿಟ್‌ ಆಗಿದ್ದೇ ತಡ, ಈ ಚಿತ್ರದಲ್ಲಿ ಅಭಿನಯಿಸಿದ ಹೊಸ ಮುಖಗಳಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌'ಗೆ ಎಂಟ್ರಿ ನೀಡಿದವರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಸಾನ್ವಿಯಾಗಿ ಕನ್ನಡಿಗರ ಹೃದಯಕ್ಕೆ ತಟ್ಟಿದ ಈ ಚೆಲುವೆ ಈಗ ತೆಲುಗು ಚಿತ್ರದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣ ಕನ್ನಡವಷ್ಟೇ ಅಲ್ಲದೆ ಟಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. 


ಸದ್ಯಕ್ಕೆ ಟಾಲಿವುಡ್‌ನಲ್ಲಿ ರಶ್ಮಿಕಾ ಅಭಿನಯದ 'ಚಲೋ' ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಬಹಳ ಜನಮನ್ನಣೆ ಗಳಿಸಿದೆ. ಈಗಾಗಲೇ ಪೋಸ್ಟರ್‌ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಚಿತ್ರ, ಟೀಸರ್‌ ಬಿಡುಗಡೆಯ ನಂತರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.


ನಟ ನಾಗ ಶೌರ್ಯ ಅವರು ನಾಯಕರಾಗಿರುವ `ಚಲೋ' ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿದ್ದು, ವೆಂಕಿ ಕುಡುಮುಲು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೆಹಟಿ ಸ್ವರ ಸಾಗರ್ ಸಂಗೀತ ಈ ಚಿತ್ರಕ್ಕಿದ್ದು ಕಿಶೋರ್ ಸತ್ಯ, ಅಚ್ಯುತ್ ಕುಮಾರ್, ರಘು ಬಾಬು, ಪ್ರಗತಿ ಸೇರಿ ಹಲವಾರು ನಟರು ಅಭಿನಯಿಸಿದ್ದಾರೆ.