Raveena Tandon : ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿಯ ಜೊತೆಗೆ ಬ್ರೇಕಪ್, ವಿಚ್ಛೇದನ ಸಾಮಾನ್ಯವಾಗಿದೆ. ಬಹುತೇಕ ಸ್ಟಾರ್ ಸೆಲೆಬ್ರಿಟಿಗಳು ಇವೆಲ್ಲವನ್ನೂ ಮೀರಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಕೆಲವು ನಟ ನಟಿಯರು ತಮ್ಮ ಪ್ರೀತಿಯ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ರವೀನಾ ಟಂಡನ್‌ ಮಕ್ಕಳೊಂದಿಗೆ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಶಾಕ್ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಬಿಟೌನ್‌ ಸುಂದರಿ ರವೀನಾ ಟಂಡನ್ 1990 ರ ದಶಕದಲ್ಲಿ ಸಿನಿ ಪ್ರೇಕ್ಷಕರ ನೆಚ್ಚಿನ ನಾಯಕಿಯಾಗಿ ಹೊರಹೊಮ್ಮಿದರು. ಆ ಸಮಯದಲ್ಲಿ ಅವರು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ‘ಮೊಹ್ರಾ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ನಿಶ್ಚಿತಾರ್ಥವೂ ಸಹ ಆಯಿತು. ಈ ಮಧ್ಯೆ ಅವರು ಬೇರ್ಪಟ್ಟು ಬೇರೆ ಬೇರೆ ದಾರಿ ಹಿಡಿದರು. 


ಇದನ್ನೂ ಓದಿ: ವಿದೇಶದಲ್ಲೂ ʼಮೋದಿ ಮಾತುʼ ಪಾಲಿಸಿದ ಅಕ್ಷಯ್‌ : ಪೊರಕೆ ಹಿಡಿದು ಫೋಟೋ ಹಾಕಿದ ಬಿಟೌನ್‌ ಸ್ಟಾರ್‌


ಕೆಲವು ವರ್ಷಗಳ ನಂತರ, ರವೀನಾ 2004 ರಲ್ಲಿ ಉದ್ಯಮಿ ಅನಿಲ್ ತಡಾನಿ ಅವರನ್ನು ವಿವಾಹವಾಗುವ ಮೂಲಕ ತಮ್ಮ ಸಂಬಂಧಗಳಿಗೆ ಪೂರ್ಣ ವಿರಾಮ ಹಾಕಿದರು. ಇತ್ತೀಚಿಗೆ ಸಂದರ್ಶವೊಂದರಲ್ಲಿ ರವೀನಾ ತಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಮಕ್ಕಳಿಂದ ಮುಚ್ಚಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಹಿಂದಿನ ಪ್ರೇಮಕಥೆಗಳನ್ನು ಮಕ್ಕಳೊಂದಿಗೆ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.


ನನ್ನ ಹಿಂದಿನ ಘಟನೆಗಳ ಕುರಿತು ಪತ್ರಿಕೆಯಲ್ಲಿ ಬರೆಯಲಾಗುತ್ತದೆ, ಹಾಗಿದ್ದಲ್ಲಿ, ನಾನು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಕೇಳಿ ನನ್ನ ವಿಚಲಿತರಾಗಬಾರದು. ಅದಕ್ಕಾಗಿಯೇ ನಾನೇ ಅವರಿಗೆ ಎಲ್ಲವನ್ನೂ ಹೇಳಿಬಿಟ್ಟಿದ್ದೇನೆ ಎಂದು ರವೀನಾ ಟಂಡನ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಅಲ್ಲು ಅರ್ಜುನ್ ಆಸ್ತಿ ಎಷ್ಟು? ನಟನ ವಾರ್ಷಿಕ ಆದಾಯ ನೀವು ಊಹಿಸಲೂ ಅಸಾಧ್ಯ!


ಇದೀಗ ರವೀನಾ ಹೇಳಿಕೆ ಹಾಟ್ ಟಾಪಿಕ್ ಆಗಿದೆ. ನಟಿಯ ಮಾತಿಗೆ ನಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟೀಕಿಸುತ್ತಿದ್ದಾರೆ. ಸಧ್ಯ ರವೀನಾ ಟಂಡನ್ 'ವೆಲ್‌ಕಮ್ ಟು ದಿ ಜಂಗಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ಜಾಕ್ವೆಲಿನ್ ಫರ್ನಾಂಡೀಸ್, ದಿಶಾ ಪಟಾನಿ, ಲಾರಾ ದತ್ತಾ, ಸುನೀಲ್ ಶೆಟ್ಟಿ, ಸಂಜಯ್ ದತ್, ಅರ್ಷದ್ ವಾರ್ಷಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ರಾರಾಜ್ ಪಾಲ್ ಯಾದವ್, ರಾಹುಲ್ ದೇವ್, ದಲೇರ್ ಮೆಹೆಂದಿ, ಮಿಲ್ಕಾ ಸಿಂಗ್ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.