Raveena Tandon Metro Video: ಪ್ರತಿದಿನ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತವೆ. ಅದರಲ್ಲೂ ಬಾಲಿವುಡ್ ತಾರೆಯರಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಾರೆ. ಅಭಿಮಾನಿಗಳ ನೆಚ್ಚಿನ ರವೀನಾ ಟಂಡನ್ ಅವರ  ವಿಡಿಯೋ ಇದೀಗ ಗಮನ ಸೆಳೆದಿದೆ. 


COMMERCIAL BREAK
SCROLL TO CONTINUE READING

ವಿಡಿಯೋದಲ್ಲಿ ರವೀನಾ ಮುಂಬೈ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದನ್ನು ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರವೀನಾ ಸುತ್ತಮುತ್ತ ಸಿಕ್ಕಾಪಟ್ಟೆ ಜನ ಸೇರಿದ್ದಾರೆ.


ಇದನ್ನೂ ಓದಿ: Chiranjeevi: 68ನೇ ವಯಸ್ಸಿನಲ್ಲಿಯೂ ಮೆಗಾಸ್ಟಾರ್ ಹೆವ್ವೀ ವರ್ಕ್‌ಔಟ್‌ನ ವಿಡಿಯೋ ವೈರಲ್! 


ರವೀನಾ ಟಂಡನ್ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯನ್ನು ನೋಡಿದ ನಂತರ ಸುತ್ತಮುತ್ತಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸಂತೋಷ ಹೊರಹಾಕಿದ್ದಾರೆ. ರವೀನಾ ಕೂಡ ಎಲ್ಲರೊಂದಿಗೆ ನಗು ಮುಖದಿಂದಲೇ ಮಾತನಾಡಿದ್ದಾರೆ. ನಟಿಯ ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.


 



 


ಈ ವೈರಲ್ ವಿಡಿಯೋ ಮುಂಬೈನ ಮೆಟ್ರೋ ಸ್ಟೇಷನ್ ನಲ್ಲಿ ಸೆರೆ ಹಿಡಿಯಲಾಗಿದೆ. ಯಾರಿಗೂ ತೊಂದರೆ ಆಗದಂತೆ ಬೇಗ ಹೊರಡೋಣ ಎಂದು ನಟಿ ಹೇಳುತ್ತಿರುವುದು ಕೇಳಿಬರುತ್ತಿದೆ. ಈ ಸಮಯದಲ್ಲೂ ರವೀನಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ರವೀನಾ ಅವರನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ.


ಇದನ್ನೂ ಓದಿ: ಅನುಷ್ಕಾ ಶೆಟ್ಟಿ ನಾಗ ಚೈತನ್ಯ ಮದುವೆ! ಎಂಗೇಜ್‌ಮೆಂಟ್ ಕೂಡ ಆಗಿದೆಯಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.