Cricketer Ravichandran Ashwin Like Sandalwood Actress Dance: ಭಾರತದಲ್ಲಿ ಮೊನ್ನೆಯಿಂದ 2024 ಐಪಿಎಲ್​ ಫೀವರ್ 17ನೇ ಸೀಸನ್​ ತುಂಬಾ ಜೋರಾಗಿಯೇ ಇದ್ದು, ಈ ಬಾರಿ  ಚೆನ್ನೈ ಮತ್ತು ಆರ್‌ಸಿಬಿ ಮಧ್ಯೆ ಪಂದ್ಯ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಇವತ್ತು ಆರ್​. ಅಶ್ವಿನ್​ ತಂಡವಾದ ರಾಜಸ್ಥಾನ್​ ರಾಯಲ್ಸ್​ ಗೆಲುವಿನೊಂದಿಗೆ ಟೂರ್ನಿಯನ್ನು ಪ್ರಾರಂಭ ಮಾಡಿದೆ.


COMMERCIAL BREAK
SCROLL TO CONTINUE READING

ಇಂದು ಪಂದ್ಯಕ್ಕೂ ಮುಂಚೆ ನಡೆದ ಯೂಟ್ಯೂಬ್​ ಚಾನೆಲ್‌ವೊಂದರ ಸಂದರ್ಶನದಲ್ಲಿ ಕ್ರಿಕೇಟಿಗ ರವಿಚಂದ್ರನ್‌ ಅಶ್ವಿನ್‌ ಸ್ಯಾಂಡಲ್‌ವುಡ್‌ ನಟಿಯೊಬ್ಬರ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸದ್ಯ ಸಖತ್‌ ವೈರಲ್‌ ಆಗಿದೆ. ಅಂದಹಾಗೆ ಅಶ್ವಿನ್‌ ಚಂದನವನದ ಜನಪ್ರಿಯ ನಟಿ ಶ್ರೀಲೀಲಾ ಬಗ್ಗೆ ಹೇಳುತ್ತಾ, ಆಕೆಯ ಡ್ಯಾನ್ಸ್‌ ಅನ್ನು ಮೆಚ್ಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತೆರೆಗೆ ಅಪ್ಪಳಿಸದ ಗುಂಟೂರು ಖಾರಂನಲ್ಲಿ ಮಾಡಿದ ಡ್ಯಾನ್ಸ್‌ ನೋಡಿ ಹೊಗಳಿದ್ದಾರೆ.


ಇದನ್ನೂ ಓದಿ: VIP Movie first look: ವಸಿಷ್ಠ ಸಿಂಹ ನಟನೆಯ ʻವಿಐಪಿʼ ಸಿನಿಮಾದ ಫಸ್ಟ್ ಲುಕ್ ರಿಲೀಸ್‌


ನಟಿ ಶ್ರೀಲೀಲಾ ʻಗುಂಟೂರು ಖಾರಂʼ ಸಿನಿಮಾದಲ್ಲಿ ನಟ ಮಹೇಶ್‌ ಬಾಬು ಜೊತೆಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟಾಗಿ ಕಮಾಲ್‌ ಮಾಡದೇ ಇದ್ದರೂ ಆದರೆ ಈ ಹಾಡು ಮಾತ್ರ ಸಖತ್‌ ಸದ್ದು ಮಾಡಿತ್ತು. ಇದೀಗ ʻಗುಂಟೂರು ಖಾರಂ ಅಶ್ವಿನ್‌ ಜಾಲಿ ಮತ್ತು ಮನರಂಜನೆಯಾಗಿದೆ. ಅದರಲ್ಲಿಯೂ ನಟಿ ಶ್ರೀಲೀಲಾ ಕುರ್ಚಿನಿ ಮಡತಪಟ್ಟಿ ಸಾಂಗ್‌ನಲ್ಲಿಯ ಡ್ಯಾನ್ಸ್​ ನನಗೆ ಇಷ್ಟವಾಯಿತು ಎಂದು ಅಶ್ವಿನ್‌ ಹೇಳಿದ್ದಾರೆ.


ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಕುರ್ಚಿನಿ ಮಡತಪಟ್ಟಿ ಹಾಡಿನಲ್ಲಿ ಶ್ರೀಲೀಲಾ ಡ್ಯಾನ್ಸ್​ ತುಂಬಾನೇ ಅದ್ಭುತವಾಗಿದೆ. ನನಗೆ ಅವರ ನೃತ್ಯ ಹುಚ್ಚು ಹಿಡಿಸುವುದರ ಜೊತೆಗೆ ಹಾಡಿನ ಮೇಕಿಂಗ್​ ಸಹ ಬಹಳ ಇಷ್ಟವಾಯಿತು. ಅಲ್ಲದೇ ನಟ ಮಹೇಶ ಬಾಬು ಕೂಡ ಗುಂಟೂರು ಖಾರಂ ಸಿನಿಮಾದಲ್ಲಿ  ಸಹ ಒಳ್ಳೆಯ ಡ್ಯಾನ್ಸ್​ ಮಾಡಿದ್ದಾರೆ. ಅವರೊಬ್ಬರು ಒಳ್ಳೆಯ ನೃತ್ಯಗಾರರು ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.