Ravi Bopanna Review : ಕ್ರೇಜಿಸ್ಟಾರ್ ರವಚಂದ್ರನ್ ಅಂದ್ರೇನೆ ಡಿಫರೆಂಟ್..ತನಗನಿಸಿದ್ದು ಏನು ಅದನ್ನೇ ಮಾಡಿ ತೋರಿಸೋರು ಅಂದ್ರೆ ಅದು ಕೇವಲ ನಮ್ಮ ಕನಸುಗಾರ. ನೋಡ್ರೋ ನಿಮಗಾಗಿ ಸಿನಿಮಾ ಮಾಡ್ತೀನಿ..ಪ್ರಚಾರ ಮಾಡಲ್ಲ..ನೀವೇ ಮಾಡ್ಕೊಳ್ಳಿ ಅಂತ ಅಭಿಮಾನಿಗಳ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡ್ತಾರೆ. ಅಂತೆಯೇ ಇದೀಗ ಕನಸುಗಾರನ ಕನಸಿನ ಕೂಸು "ರವಿ ಬೋಪಣ್ಣ" ಸಿನಿಮಾ ಭರ್ಜರಿಯಾಗಿ ತೆರೆ ಕಂಡಿದೆ.


COMMERCIAL BREAK
SCROLL TO CONTINUE READING

ಹಾಗಾದ್ರೆ "ರವಿ ಬೋಪಣ್ಣ" ಸಿನಿಮಾ ಹೇಗಿದೆ ಅನ್ನೋದ್ರ ಪಕ್ಕಾ ರಿವ್ಯೂ ನಿಮ್ಮ ಜೀ ಕನ್ನಡ ನ್ಯೂಸ್ ನಿಮ್ಮ ಮುಂದಿಡುತ್ತಿದೆ. ವಿಭಿನ್ನ ಪಾತ್ರಗಳನ್ನ ಮಾಡಲು ಸಾಧ್ಯವಾಗೋದು ಚಿತ್ರಬ್ರಹ್ಮನಿಗಷ್ಟೇ. ಹೊಸತನವಿರಬೇಕು ಅಂತ ಡಿಫರೆಂಟಾಗೇ ಚಿತ್ರಗಳನ್ನ ಮಾಡುತ್ತಾರೆ.ಸೋಲು-ಗೆಲುವು ಏನೇ ಬಂದ್ರು ಗಟ್ಟಿತನದಿಂದ ಸ್ವೀಕಾರ ಮಾಡುತ್ತಾರೆ. ‘ರವಿ ಬೋಪಣ್ಣ’  ಚಿತ್ರದಲ್ಲಿ ಅವರು ನಮ್ಮೊಳಗಿರೋ ವ್ಯಕ್ತಿತ್ವವನ್ನ ಇಟ್ಕೊಂಡೆ ಅದ್ಬುತವಾಗಿ ಕಥೆ ಬರೆದಿದ್ದಾರೆ. 'ರವಿ ಬೋಪಣ್ಣ'  ಸಿನಿಮಾದಲ್ಲಿ ಅಥಿತಿ ಪಾತ್ರದಲ್ಲಿ ಕಿಚ್ಚ ಕಮಲ್ ಮಾಡಿದ್ದಾರೆ. ಇದು ಈ ಸಿನಿಮಾ ಇನ್ನಷ್ಟು ತೂಕ ಹೆಚ್ಚಾಗಿದೆ.


ಇದನ್ನೂ ಓದಿ : ಸ್ವಾತಂತ್ರ್ಯ ದಿನಾಚರಣೆಗೆ ರಿಷಬ್ ಶೆಟ್ಟಿ ಸರ್‌ಪ್ರೈಸ್‌.. ಕಾಂತಾರ ಸಿನಿಮಾದ ಬಿಗ್‌ ಅಪ್‌ಡೇಟ್‌ ಇಲ್ಲಿದೆ


ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ಅವರ ಮೈಮಾಟ ಪಕ್ಕಾ ಪಡ್ಡೆ ಹುಡುಗರ ನಿದ್ದೆ ಕದ್ದಿರೋದ್ರಲ್ಲಿ ಡೌಟಿಲ್ಲಾ. ಈ ಸಿನಿಮಾದ ಕಥೆ ಒಂದು ಕೊಲೆಯ ಸುತ್ತ ಸ್ಟೋರಿ ಸಾಗುತ್ತೆ. ಸಾಕಷ್ಟು ಟ್ವಿಸ್ಟ್ ಗಳನ್ನ ಸಿನಿಮಾದಲ್ಲಿ ನೋಡಬಹುದು. ರವಿ ಬೋಪಣ್ಣ ಓರ್ವ ನಿವೃತ್ತ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಯಾವುದೇ ಕೊಲೆ ಕೇಸ್ ಇದ್ದರೂ ಕ್ಷಣ  ಮಾತ್ರದಲ್ಲಿ ಭೇದಿಸುವ ಪೊಲೀಸ್ ಅಧಿಕಾರಿಯ ಬದುಕಿನಲ್ಲಿ ಎಲ್ಲವೂ ಅಲ್ಲೋಲಕಲ್ಲೋಲವಾಗುತ್ತೆ. ಇದೇ ಸಂದರ್ಭದಲ್ಲಿ ಪ್ರೇಯಸಿಯ ಹತ್ಯೆ ನಡೆಯುತ್ತೆ. ಹತ್ಯೆ ಯಾರು ಮಾಡಿದ್ರು, ಯಾಕೆ ಮಾಡಿದ್ರು, ಮುಂದೆ ಏನಾಗುತ್ತೆ ಅನ್ನೋದೆ ಸಿನಿಮಾದ ಮುಂದಿನ ಭಾಗವಾಗಿದೆ.
 
ಈ ಸಿನಿಮಾದ ಹಾಡು ಮತ್ತು ಗ್ಲಾಮರ್ ಗೆ ಹೆಚ್ಚು ಆದ್ಯತೆ ಈ ಸಿನಿಮಾದಲ್ಲಿದೆ. 8 ಹಾಡುಗಳು ಮನಸ್ಸಿಗೆ ಹತ್ತಿರವಾಗಿದೆ.  ಕ್ಲೈಮ್ಯಾಕ್ಸ್​ನಲ್ಲಿ ವಿಚಿತ್ರವೊಂದು ನಿಮಗಾಗಿ ಕಾದಿದೆ. ಸಿನಿಮಾ ನೋಡಿ ಹೊರ ಬರುವಾಗ ಒಂದು ಒಳ್ಳೆ ಸಂದೇಶದ ಮೂಲಕ ಬರಬಹುದು.


ರೊಮ್ಯಾಂಟಿಕ್​ ಹಾಡುಗಳು ಕಣ್ಣು ಕುಕ್ಕುತ್ತೆ. ಮೋಹನ್​, ಧರ್ಮ, ರಮೇಶ್​ ಭಟ್​, ರಾಮ ಕೃಷ್ಣ, ಜೈ ಜಗದೀಶ್​ ಕೂಡ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಲಾಯರ್​ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.
 
ಒಟ್ಟಾರೆ ರವಿ ಬೋಪಣ್ಣ ಸಿನಿಮಾ ನಿಮಗೆ ಬೇರೆಯದ್ದೇ ಲೋಕಕ್ಕೆ ಕೊಂಡೋಗುತ್ತೆ.. ರವಿ ಸರ್ ವಿಭಿನ್ನ ಯೋಚನಾ ಶೈಲಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಮನಸ್ಸಿಟ್ಟು ಸಿನಿಮಾ ನೋಡಿದ್ರೆ ಖಂಡಿತ ನಿಮ್ಗೆ ಈ ರವಿ ಬೋಪಣ್ಣ ನಿಮಗೆ ಇಷ್ಟವಾಗುತ್ತಾನೆ.ಇನ್ಯಾಕೆ ತಡ ಬೇಗ ಬೇಗ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. 60 ವಯಸ್ಸಿನಲ್ಲೂ ಸಿನಿಮಾನೇ ಉಸಿರಾಗಿಸಿಕೊಂಡ ರವಿಚಂದ್ರನ್ ಅವರ ದಿಲ್ ಖುಷ್ ಆಗಿಸೋಣ. 


ಇದನ್ನೂ ಓದಿ : Galipata 2 Review: ಗಣಿ - ಭಟ್ರ "ಗಾಳಿಪಟ 2" ಗಗನದೆತ್ತರಕ್ಕೆ ಹಾರಾಯ್ತು..! "ಭಟ್ರು ಗೆದ್ದೇ ಬಿಟ್ರು"..


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.