Manoranjan Ravichandran Marriage : ಸ್ಯಾಂಡಲ್​ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ಅವರ ಮದುವೆಯೂ ಸಂಗೀತ ಎಂಬ ಯುವತಿ ಜೊತೆ ಅದ್ಧೂರಿಯಾಗಿ ನೆರವೇರಿದೆ. ಇಂದು ಸಂಗೀತ ಅವರ ಮಾಂಗಲ್ಯಧಾರಣೆ ನೆರವೇರಲಿದೆ. ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು, ರವಿಚಂದ್ರನ್ ಅವರ ಆಪ್ತರು ಮತ್ತು ಕುಟುಂಬದವರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ರವಿಚಂದ್ರನ್‌ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ದಂಪತಿ, ಹಂಸಲೇಖ ದಂಪತಿ, ಖುಷ್ಬು ಸೇರಿದಂತೆ ಕನ್ನಡದ ನಟ ನಟಿಯರು ವಧು ವರರನ್ನು ಹರಸಿ ಹಾರೈಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss Kannada OTT : ‌ಬಿಗ್‌ ಬಾಸ್ ಮನೆಯಿಂದ‌ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್!


ನಿನ್ನೆ ಆರತಕ್ಷತೆ ನಡೆದಿದ್ದು ಇಂದು ಮನು ರವಿಚಂದ್ರನ್ ಅವರು ಸಂಗೀತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಇನ್ನೂ ನಾಳೆ, ಸೋಮವಾರ ಆಗಸ್ಟ್ 22ರಂದು ನಂದಿ ಬೆಟ್ಟದ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾದ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆ ಸಮಾರಂಭಕ್ಕೆ ಸಿನಿಮಾ ನಟರು, ರಾಜಕೀಯ ಗಣ್ಯರು ಹಾಗೂ ಕುಟುಂಬದವರಿಗಷ್ಟೇ ಪ್ರವೇಶ ನೀಡಲಾಗುವುದು. ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಕನ್ನಡದಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಹೇಬ, ರಣಧೀರ, ಮುಗಿಲ್ ಪೇಟೆ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮನೋರಂಜನ್‌ ಅಭಿನಯಿಸಿದ್ದಾರೆ.


ಮೂಲಗಳ ಪ್ರಕಾರ ವೈದ್ಯಕೀಯ ಹಿನ್ನೆಲೆ ಇರುವ ಸಂಗೀತಾ ದೀಪಕ್ ಅವರನ್ನು ಮನೋರಂಜನ್‌ ವರಿಸಿದ್ದಾರೆ. 2019ರಲ್ಲಿ ರವಿಚಂದ್ರನ್ ತಮ್ಮ ಪುತ್ರಿಯ ವಿವಾಹವನ್ನು ಸಹ ಅದ್ಧೂರಿಯಾಗಿ ನೆರವೇರಿಸಿದ್ದರು. ಇದೀಗ ಹಿರಿಯ ಮಗ ಮನೋರಂಜನ್ ಅವರ ಮದುವೆ ಸಹ ಅದ್ಧೂರಿಯಾಗಿ ನೆರವೇರಿದೆ. ಕಿರಿಯ ಪುತ್ರ ವಿಕ್ರಮ್​ ರವಿಚಂದ್ರನ್ ಇತ್ತೀಚೆಗೆ 'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು. 


ಇದನ್ನೂ ಓದಿ: SIIMA Awards 2022 : ಅಪ್ಪು ಸ್ಮರಣೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಷ್ಠಿತ ಸೈಮಾ ಅವಾರ್ಡ್ಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.